ಯಶ್ ನಡತೆ ಬಗ್ಗೆ ಆಕ್ಷೇಪ ಎತ್ತಿದ ಸುದೀಪ್ ಫ್ಯಾನ್ಸ್‌, ರಾಕಿಂಗ್ ಸ್ಟಾರ್‌ಗೆ ಬುದ್ಧಿ ಹೇಳಿದ್ದ ಕನ್ನಡದ ಕಿಚ್ಚ!

By Shriram Bhat  |  First Published Dec 26, 2024, 11:05 PM IST

ಹಿರಿಯರ ಮಾರ್ಗದರ್ಶನದಲ್ಲೇ ನಾವು ಹೋಗ್ತಿದ್ದೇವೆ. ಅವ್ರು ನೋಡದೇ ಇರೋದನ್ನ ನಾವು ನೋಡ್ತಿಲ್ಲ. ಈ ಯಶಸ್ಸನ್ನು ಅವ್ರು ಯಾವತ್ತೋ ನೋಡಿರ್ತಾರೆ. ನನ್ನ ಕರ್ತವ್ಯ ನಾನು ಮಾಡಿದೀನಿ.. ಪ್ಯಾನ್‌ಗಳು ಅವ್ರ ಕರ್ತವ್ಯ ಅವ್ರು ಮಾಡಿದಾರೆ. ಈ ಎರಡರ ಮಧ್ಯೆನೇ ನಿಮ್ಗೆ ಉತ್ತರ ಇರಬಹುದು..


ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಯಶ್ ಬಗ್ಗೆ ಮಾತನ್ನಾಡಿದ್ದಾರೆ. ಯಶ್ ಇತ್ತೀಚೆಗೆ ಸುದೀಪ್ ಅವರನ್ನು ಹೆಸರಿಟ್ಟು ಕರೆದಿದ್ದು, ಅದಕ್ಕೆ ಸುದೀಪ್ ಫ್ಯಾನ್ಸ್ ಆಕ್ಷೇಪ ಎತ್ತಿದ್ದು, ಈ ಬೆಳವಣಿಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಟ ಸುದೀಪ್ ತಮ್ಮ ಅಭಿಮಾನಿಗಳ ನಡೆಯನ್ನು ಸಮರ್ಥಿಸಿಕೊಂಡು ಯಶ್ ಬಗ್ಗೆ ಕೂಲ್ ಆಗಿಯೇ ಆಕ್ಷೇಪ ಎತ್ತಿದ್ದಾರೆ. ಮಾಧ್ಯಮ ಒಂದರಲ್ಲಿನಟ ಸುದೀಪ್ ಈ ಬಗ್ಗೆ ಧ್ವನಿ ಎತ್ತಿದ್ದು, ಹಲವರು ಸುದೀಪ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಹಾಗಿದ್ದರೆ ಏನು ಈ ಸುದ್ದಿ? ಇಲ್ಲಿದೆ ನೋಡಿ ಡೀಟೇಲ್ಸ್‌... 

'ಹಾಯ್ ಸುದೀಪ್ ಎಂದಿದ್ದ ನಟ ಯಶ್.. ಅದಕ್ಕೆ ಸುದೀಪ್ ಅಭಿಮಾನಿಗಳು ವೈಸ್ ಎತ್ತಿದ್ರು.. ಈ ಬಗ್ಗೆ ನಟ ಸುದೀಪ್ ಯಶ್ ಅವರಿಗೆ ಕೂಲ್ ಆಗಿಯೇ ನೀತಿಪಾಠ ಮಾಡಿದ್ದಾರೆ. ಯಶ್ ಹಾಗೂ ನಾನು ಸಹನಟರು ಹೌದು, ಹೆಸರಿಡಿದು ಕರೆದಿದ್ದು ತಪ್ಪಲ್ಲ. ಅದೇ ರೀತಿ ಇದ್ರ ವಿರುದ್ಧ ಧ್ವನಿ ಎತ್ತಿದ ನನ್ನ ಅಭಿಮಾನಿಗಳದ್ದೂ ತಪ್ಪಿಲ್ಲ. ನನ್ನ ಅಭಿಮಾನಿಗಳು ವೈಸ್ ರೈಸ್ ಮಾಡಿದ್ದು ಸರಿಯಾಗಿಯೇ ಇದೆ. ಅದರಲ್ಲಿ ನನಗೆ ಯಾವುದೇ ತಪ್ಪು ಕಾಣಿಸ್ತಿಲ್ಲ. 

Tap to resize

Latest Videos

undefined

ದರ್ಶನ್-ಸುದೀಪ್ ಒಂದಾಗುವ ಸುದಿನ ಹತ್ತಿರ ಬಂದಿದೆ; ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

ಪ್ರತಿ ನಟನಲ್ಲೂ ಫ್ಯಾನ್ಸ್ ಬದಲಾವಣೆ ಗಮನಿಸ್ತಾರೆ. ನನ್ನ ಅಭಿಮಾನಿಗಳಿಗೆ ಏನೋ ಬದಲಾವಣೆ ಕಂಡಿದೆ. ಹೀಗಾಗಿಯೇ ಅವರು ಆಕ್ರೋಶ ಹೊರಹಾಕಿದ್ದಾರೆ. ಸೀನಿಯರ್ಸ್ ಯಾವತ್ತಿಗೂ ಸೀನಿಯರ್ಸ್ ಆಗಿಯೇ ಇರ್ತಾರೆ. ತಾವು ಬೆಳೀತಾ ಬೆಳಿತಾ ಬೇರೆಯವರು ಯಾವಾಗ ಚಿಕ್ಕವರಾದ್ರು? ಈ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ. ಶಿವಣ್ಣ ಅವ್ರನ್ನ ನಾವು 'ಶಿವು' ಅನ್ನೋಕೆ ಆಗುತ್ತಾ?  ಆದರೆ, ಹಿರಿಯರಿಗೆ ಗೌರವ ಕೊಡಬೇಕು. 

ಹಿರಿಯರ ಮಾರ್ಗದರ್ಶನದಲ್ಲೇ ನಾವು ಹೋಗ್ತಿದ್ದೇವೆ. ಅವ್ರು ನೋಡದೇ ಇರೋದನ್ನ ನಾವು ನೋಡ್ತಿಲ್ಲ. ಈ ಯಶಸ್ಸನ್ನು ಅವ್ರು ಯಾವತ್ತೋ ನೋಡಿರ್ತಾರೆ. ನನ್ನ ಕರ್ತವ್ಯ ನಾನು ಮಾಡಿದೀನಿ.. ಪ್ಯಾನ್‌ಗಳು ಅವ್ರ ಕರ್ತವ್ಯ ಅವ್ರು ಮಾಡಿದಾರೆ. ಈ ಎರಡರ ಮಧ್ಯೆನೇ ನಿಮ್ಗೆ ಉತ್ತರ ಇರಬಹುದು. ಯಶ್ ನನಗೆ ಸುದೀಪ್ ಅಂತ ಕರೆದಿದ್ದು ಬೇಜಾರಿಲ್ಲ.. ಅವ್ರು ನನಗೆ 'ಸುದೀಪ್ ಸರ್' ಅಂತ ಕರೀಬೇಕು ಅಂತಲ್ಲ. ಬದಲಾವಣೆ ಜನರಿಗೆ ಕಾಣುತ್ತೆ. ಆ ಬದಲಾವಣೆ ಕಂಡಾಗ ಆ ಪ್ರಶ್ನೆ ಮಾಧ್ಯಮದವರೂ ಕೇಳ್ತೀರಿ, ನಾನೂ ಕೇಳ್ತೀನಿ.. 

ಸುದೀಪ್-ದರ್ಶನ್​ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾದ ಕೇಕ್, ನಟ ಪ್ರದೀಪ್‌ರಿಂದ ಸ್ಪಷ್ಟನೆ!

ನೀವು ಆವತ್ತು ನಂಗೆ ಕೇಳಿದ್ರಿ, 'ಸರ್ ನೀವು ಆವತ್ತು ಹೀಗಿದ್ರಿ, ಇವತ್ತು ಹೀಗಿದೀರಾ ಅಂತ. ಅಂದ್ರೆ ನೀವು ಗಮನಿಸಿದೀರಾ ತಾನೇ? ನೀವು ಆವಾಗ ಹಾಗು ಈವಾಗ ನನ್ನ ನಡೆ-ನುಡಿಯಲ್ಲಿ ಬದಲಾವಣೆ ನೋಡಿದ್ರಿ ಅಲ್ವಾ? ಜನಕ್ಕೂ ಅದೇ ಗೊತ್ತಾಗಿದೆ. ಈಗ್ಲೂ ಇಲ್ಲೂ ಅಷ್ಟೇ, ನನ್ನ ಕಲೀಗ್ ಒಬ್ರು ಇದನ್ನ ನನ್ನ ಗಮನಕ್ಕೆ ತಂದ್ರು, ನಾನು ಹೇಳಿದೀನಿ ಅಷ್ಟೇ. ನನಗೆ ಯಾರೂ ಸುದೀಪ್ ಸರ್ ಅಂತ ಕರೀಬೇಕಾಗಿಯೇ ಇಲ್ಲ. ಅದಕ್ಕೆ ಕೋಪ ಬರುತ್ತೆ ಅಂತಲ್ಲ. 

ಬಟ್ ನನಗೂ ಒಂದು ಮೈಂಡ್ ಇದೆ, ನಾವೂ ನೋಡ್ತೀವಿ.. ಚಿತ್ರರಂಗದಲ್ಲಿ ಯಾರದೇ ಬೆಳವಣಿಗೆ ಬಗ್ಗೆ ಯಾರಿಗೂ ಡೌಟ್ ಇರಲ್ಲ. ತಾವು ಬೆಳೀತಾ ಬೆಳೀತಾ ಬೇರೆಯವ್ರು ಯಾವಾಗ ಚಿಕ್ಕವ್ರು ಆದ್ರು ಅನ್ನೋ ಪ್ರಶ್ನೆನೂ ಬರುತ್ತೆ ಅಷ್ಟೇ. ನಾನು ಶಿವಣ್ಣಂಗೆ ಶಿವೂ ಅಂತ ಕರೀಬೇಕಾ? ಹಾಗಂತ ನಾನು ಸರ್ ಅಂತ ಕರೆಸಿಕೊಳ್ಳಬೇಕು ಅಂತ ಆಸೆ ಪಡ್ತಿದೀನಿ ಅಂತನೂ ಅಲ್ಲ. ಒಂದು ಸರ್ ಅನ್ನೋದ್ರಿಂದ ಅಥವಾ ಅಣ್ಣಾ ಅಂತ ಕರೆಯೋದ್ರಿಂದ ನಮ್ಮ ಬಗೆಗಿನ ಯಾವುದೂ ಚೇಂಜ್ ಆಗಲ್ಲ. ಅದು ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ ಅಷ್ಟೇ. 

ರಮ್ಯಾ ಮತ್ತು ನಾನು ಒಂದೆರಡು ಗಂಟೆಗಳಷ್ಟು ಮಾತ್ರ ಒಟ್ಟಿಗೇ ಇರ್ತೀವಿ: ಕಿಚ್ಚ ಸುದೀಪ್!

ಯಾವತ್ತೋ ಒಂದಿನ ಅವ್ರ ಮುಂದಿನ ಜೂನಿಯರ್ಸ್ ಬೆಳದು ಈ ಹಂತಕ್ಕೆ ಬಂದಾಗ ಅವ್ರು ಹಾಗೆ ಕರೆದಾಗ ಅವ್ರ ಫ್ಯಾನ್ಸ್‌ ಕೂಡ ಹೀಗೇ ರಿಯಾಕ್ಟ್ ಮಾಡ್ತಾರೆ. ಇದು ನಿಯಮ ಅಂತಲ್ಲ, ಆಗೋದು ಸತ್ಯ ಅಷ್ಟೇ. ನಮ್ಮ ಸೀನಿಯರ್ಸ್ ಯಾವತ್ತಿದ್ರೂ ನಮ್ಮ ಸೀನಿಯರ್ಸ್ ಆಗಿಯೇ ಇರ್ತಾರೆ. ಅವ್ರಿಗಿಂತ ನಾವು ಎಷ್ಟೇ ಮುಂದಕ್ಕೆ ಹೋದ್ರೂ ನಾವು ಅವ್ರಿಗೆ ಯಾಕೆ ಗೌರವ ಕೊಡ್ತೀವಿ ಅಂದ್ರೆ ಅವ್ರು ದಾಟಿ ಹೋಗಿರೋದನ್ನೇ ನಾವ್ ನೋಡ್ತಾ ಇರೋದು. ಎಲ್ಲೋ ಒಂದು ಕಡೆ ನಮ್ಮನ್ನೇ ನಾವು ಪ್ರಶ್ನೆ ಮಾಡ್ಕೋಬೇಕಾಗುತ್ತೆ..' ಎಂದಿದ್ದಾರೆ ನಟ ಸುದೀಪ್. ಆದರೆ ಇದು ತುಂಬಾ ಹಳೆಯ ವಿಡಿಯೋ, ಈಗ ವೈರಲ್ ಆಗುತ್ತಿದೆ ಅಷ್ಟೇ. 

click me!