ಶಿವರಾಜ್ ಕುಮಾರ್ ಅವರಿಗೆ ಮೂತ್ರಕೋಶದ ಸಮಸ್ಯೆ ಇದ್ದುದರಿಂದ ಶಸ್ತ್ರಚಿಕಿತ್ಸೆ ಮೂಲಕ ಕೃತಕ ಅಂಗ ಅಳವಡಿಕೆ ಮಾಡಿರುವುದು ತಿಳಿದಿದೆ. ಇದರ ಡಿಟೆಲ್ಸ್ ಇಲ್ಲಿದೆ..
ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯ ಬಳಿಕ ನಟ ಶಿವರಾಜ್ ಕುಮಾರ್ ಅವರು ಈಗ ಸುಧಾರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಆಗಿರುವ ಶಸ್ತ್ರಚಿಕಿತ್ಸೆಯ ಬಗ್ಗೆ ಹಲವಾರು ರೀತಿಯ ಗೊಂದಲಗಳು ಅಭಿಮಾನಿಗಳಲ್ಲಿ ಇವೆ. ಕಿಮೋ ಥೆರಪಿ ಬಳಿಕವೂ ಸ್ವಲ್ಪವೂ ಅಚಲರಾಗದೇ ನಟ ಫಿಟ್ ಆ್ಯಂಡ್ ಫೈನ್ ಆಗಿದ್ದ ಕಾರಣ, ಅವರು ಅನಾರೋಗ್ಯದಿಂದ ಬಳಲುತ್ತಿದ್ದುದು ಬಹುತೇಕರಿಗೆ ತಿಳಿದೇ ಇರಲಿಲ್ಲ. ಕಳೆದ ನಾಲ್ಕೈದು ತಿಂಗಳುಗಳ ಹಿಂದೆಯೇ ಅವರಿಗೆ ಈ ಸಮಸ್ಯೆಯ ಅರಿವು ಇತ್ತು. ಆದರೆ, ಅಮೆರಿಕಕ್ಕೆ ಚಿಕಿತ್ಸೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಮಾತ್ರ ಬರಸಿಡಿಲಿನಂತೆ ಬಡಿದಿತ್ತು. ಮೊದಲ ಕಿಮೋ ಥೆರಪಿ ಮಾರನೆಯ ದಿನವೇ ಶಿವಣ್ಣ, ಶೂಟಿಂಗ್ನಲ್ಲಿ ಭಾಗಿಯಾಗಿದ್ದು ಆ್ಯಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಆದ್ದರಿಂದ ಅವರ ಒಳಗೇ ಅನುಭವಿಸುತ್ತಿದ್ದ ನೋವು ಅವರ ಕುಟುಂಬಸ್ಥರಿಗೆ ಮಾತ್ರ ತಿಳಿದಿತ್ತು ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಶಿವರಾಜ್ ಕುಮಾರ್ ಅವರಿಗೆ ಅಮೆರಿಕದಲ್ಲಿ ಆಗಿರುವ ಶಸ್ತ್ರಚಿಕಿತ್ಸೆ ಏನು ಎಂಬ ಬಗ್ಗೆ ಇದೀಗ ನಿಖರ ಮಾಹಿತಿ ಸಿಕ್ಕಿದೆ. ಅವರಿಗೆ ಮೂತ್ರಕೋಶ (ಬ್ಲಾಡರ್) ಕ್ಯಾನ್ಸರ್ ಉಂಟಾಗಿತ್ತು. ಮೂತ್ರಪಿಂಡಗಳ (ಕಿಡ್ನಿ) ಕೆಳಭಾಗದಲ್ಲಿ ಇರುವ ಮೂತ್ರಕೋಶದ ಸಮಸ್ಯೆಯಿಂದ ಶಿವಣ್ಣ ಬಳಲುತ್ತಿದ್ದರು. ಇದಕ್ಕಾಗಿ ನಾಲ್ಕು ಬಾರಿ ಕಿಮೋ ಥೆರಪಿ ಕೂಡ ಮಾಡಲಾಗಿತ್ತು ಎನ್ನುವ ಮಾಹಿತಿ ಬಂದಿದೆ. ಇದೀಗ ಈ ಮೂತ್ರಕೋಶವನ್ನು ತೆಗೆದು ಅವರದ್ದೇ ಸಣ್ಣ ಕರುಳನ್ನು ಬಳಸಿ ಕೃತಕ ಮೂತ್ರಕೋಶದ ಅಳವಡಿಕೆ ಮಾಡಲಾಗಿದೆ ಎನ್ನಲಾಗಿದೆ. ಇತ್ತೀಚಿಗೆ ಮೂತ್ರಕೋಶದ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಆರು ಲಕ್ಷ ಮಂದಿಗೆ ಮೂತ್ರಕೋಶ ತೆಗೆದಿದ್ದಾರೆ ಎನ್ನುವ ವರದಿಯಾಗಿದೆ. ಇದಕ್ಕೆ ನಿಖರವಾದ ಕಾರಣ ಹಲವಾರು. ಧೂಮಪಾನ, ಕಲುಷಿತ ನೀರು ಸೇವನೆ, ಆಹಾರಗಳಲ್ಲಿ ರಾಸಾಯನಿಕದ ಬಳಕೆ, ಜೀವನ ಶೈಲಿ ಇವೆಲ್ಲವೂ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತದೆ.
undefined
ಪತ್ನಿ- ಮಗ ದೂರದಲ್ಲಿ ವಾಸಿಸ್ತಿರೋದಕ್ಕೆ ಕಾರಣ... ಮೊದಲ ಬಾರಿ ಮೌನ ಮುರಿದ ನಟ ವಿನೋದ್ ರಾಜ್
ಮೂತ್ರಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರೆ, ಅಂಥ ವ್ಯಕ್ತಿಗಳ ಸಣ್ಣ ಕರುಳನ್ನು ಬಳಸಿ ಕೃತಕ ಮೂತ್ರಕೋಶ ಹಾಕುವುದು ಸಾಮಾನ್ಯ. ಶಿವರಾಜ್ ಕುಮಾರ್ ಅವರಿಗೂ ಅದೇ ರೀತಿ ಮಾಡಲಾಗಿದೆ. ಮೂತ್ರಕೋಶ ಇಲ್ಲದೆಯೂ ಮನುಷ್ಯನೊಬ್ಬ ಸಾಮಾನ್ಯ ಜೀವನ ನಡೆಸಬಹುದು ಎನ್ನುತ್ತಾರೆ ತಜ್ಞರು. ಕೃತಕ ಮೂತ್ರಕೋಶದ ಅಳವಡಿಕೆ ಮಾಡಿದರೆ, ಮೂತ್ರ ಮಾಡುವ ಸಮಯದಲ್ಲಿ ಕೆಲ ಕಾಲ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ,ಕ್ರಮೇಣ ಇದು ರೂಢಿಯಾಗುತ್ತದೆ. ಆರೋಗ್ಯದಲ್ಲಿ ಸಮಸ್ಯೆ ಏನೂ ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ವೈದ್ಯರ ಪ್ರಕಾರ ಕನಿಷ್ಠ 35 ದಿನಗಳವರೆಗೆ ರೆಸ್ಟ್ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿಗೆ ನಟ ವಾಸಪ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದಾಗಲೇ ಶಿವರಾಜ್ ಕುಮಾರ್ ಅವರು, ಫೆಬ್ರುವರಿಯಲ್ಲಿ ಕೆಲವು ಚಿತ್ರಗಳಿಗೆ ಡೇಟ್ಸ್ ಕೂಡ ನೀಡಿದ್ದಾರೆ ಎನ್ನಲಾಗಿದೆ.
ಇದಾಗಲೇ ಶಿವರಾಜ್ ಅವರ ಪತ್ನಿ ಗೀತಾ ಕೂಡ ಹೆಲ್ತ್ ಅಪ್ಡೇಟ್ ನೀಡಿದ್ದರು. ಸುದೀರ್ಘ ಶಸ್ತ್ರಚಿಕಿತ್ಸೆ ಕಾರಣದಿಂದ ಶಿವರಾಜ್ ಕುಮಾರ್ ಸುಸ್ತಾಗಿದ್ದಾರೆ. ಸದ್ಯ ಶಿವರಾಜ್ ಕುಮಾರ್ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಇನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಶಿವರಾಜ್ ಕುಮಾರ್ ನಿಮ್ಮ ಜೊತೆ ಮಾತನಾಡುತ್ತಾರೆ ಎಂದಿದ್ದರು. ಇದೇ ವೇಳೆ ಅಮೆರಿಕದಲ್ಲಿ ಶಿವರಾಜ್ ಕುಮಾರ್ ಕುಟುಂಬ ಜೊತೆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೂ ಗಾಬರಿಪಡುವುದು ಬೇಡ. ಕೆಲ ದಿನಗಳ ಕಾಲ ಶಿವರಾಜ್ ಕುಮಾರ್‌ಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ. ಬಳಿಕ ಶಿವರಾಜ್ ಕುಮಾರ್ ಫೋಟೋ ಹಾಗೂ ಇತರ ಮಾಹಿತಿಗಳನ್ನು ನೀಡುತ್ತೇವೆ. ಸದ್ಯ ಶಿವಣ್ಣ ಆರೋಗ್ಯವಾಗಿದ್ದಾರೆ ಎಂದಿದ್ದರು.
ಸುದೀಪ್ - ನನ್ನದು ಫಸ್ಟ್ ಲವ್... ಆ ಆ್ಯಕ್ಸಿಡೆಂಟ್ ಲೈಫನ್ನೇ ಬದಲಿಸಿಬಿಟ್ಟಿತು: ಸೀತಾರಾಮ ಶ್ಯಾಮ್ ಓಪನ್ ಮಾತು