ಕಿಚ್ಚನ ಹೆಗಲೇರಿದ ದರ್ಶನ್ ಪುತ್ರ; ಫೋಟೋ ವೈರಲ್!

By Web Desk  |  First Published Nov 2, 2019, 3:58 PM IST

'ಸ್ನೇಹಕ್ಕೆ ಸ್ನೇಹ- ಪ್ರೀತಿಗೆ ಪ್ರೀತಿ ಕೊಟ್ಟು' ಒಬ್ಬರಿಗೊಬ್ಬರು ಹೆಗಲಾಗಿ ನಿಂತವರು ಸುದೀಪ್ ಹಾಗೂ ದರ್ಶನ್. ಆದರೆ, ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ, ಈ ಇಬ್ಬರ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಯಿತು. ಕೆಲವು ದಿನಗಳ ಹಿಂದೆ ನಡೆದ ವಿನೀಶ್ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ವಿನೀಶ್ ಫೋಟೋವೊಂದು ಹರಿದಾಡಿದ್ದು, ಕಿಚ್ಚನ ಹೆಗಲೇರಿದ್ದಾನೆ ದರ್ಶನ್ ಮಗ!


 

11ನೇ ವರ್ಷಕ್ಕೆ ಕಾಲಿಟ್ಟ ವಿನೀಶ್ ದರ್ಶನ್ ತಂದೆಯಂತೆ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವಿವಿಧ ಊರುಗಳಿಂದ ಬಂದು ವಿನೀಶ್ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ, ರಸ್ತೆಗೆ ಕಟ್ಟಿರುವ ಕಟೌಟ್‌ಗಳಿಗೆ ಕ್ಷೀರಾಭಿಷೇಕವನ್ನೂ ಮಾಡಿದ್ದಾರೆ ಅಭಿಮಾನಿಗಳು.

Tap to resize

Latest Videos

undefined

ಗಾಡಿ ಓಡಿಸುವಾಗ ಜಾಗೃತರಾಗಿರಿ; ಅಭಿಮಾನಿಗಳಲ್ಲಿ ದರ್ಶನ್ ಮನವಿ

 

ಸ್ಯಾಂಡಲ್‌ವುಡ್‌ ಬಾಕ್ಸ್ ಅಫೀಸ್ ಕಲೆಕ್ಷನ್ ಮುಟ್ಟಿದ್ದ 'ಯಾಜಮಾನ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಜೂನಿಯರ್ ದರ್ಶನ್‌ಗೆ ಆಗಲೇ ಸಾಕಷ್ಟು ಅಭಿಮಾನಿಗಳು ಹುಟ್ಟಿ ಕೊಂಡಿದ್ದಾರೆ. ಅಭಿಮಾನಿಗಳ ಸಂಘ ರಚನೆಯಾಗಿದ್ದಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ಪೇಜ್‌ಗಳೂ ಇವೆ. ಈ ವಿನೀಶ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಕಿಚ್ಚ ಸುದೀಪ್ ದರ್ಶನ್ ಪುತ್ರನನ್ನು ಹೆಗಲ ಮೇಲೆ ಕೂರಿಸಿಕೊಂಡಿರುವ ಫೋಟೋವೊಂದು ವೈರಲ್ ಆಗಿದೆ. ಅಷ್ಟಕ್ಕೂ ಯಾವಾಗ ಕ್ಲಿಕ್ಕಿಸಿದ ಫೋಟೋ ಇದು?

ಮಾರುಕಟ್ಟೆಯಲ್ಲಿ ದರ್ಶನ್ ಶರ್ಟ್; ಅಭಿಮಾನಿಯಾದ್ರೆ ಇಲ್ಲಿ ಕೊಳ್ಳಿ!

 

ಈ ಫೋಟೋ ಕ್ಲಿಕ್ಕಿಸಿದ ಸಮಯದಲ್ಲಿ ದರ್ಶನ್ ಹಾಗೂ ಸುದೀಪ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ವಿನೀಶ್‌ಗೆ ಆಗಿನ್ನೂ ಏಳೆಂಟು ವರ್ಷಗಳಾಗಿತ್ತಷ್ಟೆ. ಹೆಗಲ ಮೇಲೆ ಪ್ರೀತಿಯಿಂದ ವಿನೀಶ್‌ನನ್ನು ಹೊತ್ತ ಫೋಟೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

"

 

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ - ಚಾಲೆಂಜಿಂಗ್ ಸ್ಟಾರ್ ದರ್ಶನ್ ದುಯೋಧನನಾಗಿ ನಟಿಸಿರುವ ಕುರುಕ್ಷೇತ್ರ ಚಿತ್ರದ ಬಿಡುಗಡೆ ಸಮಯಲ್ಲಿ ಸ್ಟಾರ್‌ವಾರ್‌ಗಿಂತ ಫ್ಯಾನ್ ವಾರೇ ಜೋರಾಗಿತ್ತು. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದರೂ, ಪೈರಸಿ ವಿಚಾರದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಡುವೆ ವಾರ್ ಜೋರಾಗಿತ್ತು. ಸುದೀಪ್ ಫ್ಯಾನ್ ಕುರುಕ್ಷೇತ್ರ ರಿಲೀಸ್ ವೇಳೆ ಯಾವ ತಕರಾರೂ ತೆಗೆದಿರಲಿಲ್ಲ. ಆದರೆ, ದರ್ಶನ್ ಅಭಿಮಾನಿಗಳು ಕಿಚ್ಚನ ಸಿನಿಮಾವನ್ನು ಮೊದಲ ದಿನವೇ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರು, ಎಂಬ ಆರೋಪ ಕೇಳಿ ಬಂದಿತ್ತು. ಪೈಲ್ವಾನ್ ತಂಡ ಈ ವಿಚಾರವಾಗಿ ಪೊಲೀಸರ ಮೊರೆ ಹೋಗಿತ್ತು. ತಪ್ಪು ಮಾಡಿದವರನ್ನು ಬಂಧಿಸಲಾಗಿದೆ. ವಿಚಾರಣೆಯೂ ನಡೆಯುತ್ತಿದೆ. ಆದರೆ, ಪೈರಸಿ ಆರೋಪಿ ಎದುರಿಸುತ್ತಿರುವವನು ಸುದ್ದಿಯಾದಂತೆ ನಿಜವಾಗಲೂ ದರ್ಶನ್ ಅಭಿಮಾನಿಯಾ, ಗೊತ್ತಿಲ್ಲ.

ಬೇರೆ ಹೀರೋಗಳ ಚಿತ್ರಗಳಲ್ಲಿ ನಟಿಸಲು ಭಯವಾಗುತ್ತದೆ: ಸುದೀಪ್‌

 

ಆದರೆ, ವಿನೀಶ್ ಫೋಟೋ ನೋಡಿದ ಉಭಯ ನಾಯಕರ ಅಭಿಮಾನಿಗಳು ತಮ್ಮ ಹೀರೋಗಳು ಮುಂಚೆನಂತೆಯೇ ದ್ವೇಷ ಮರೆತು, ಸ್ನೇಹಿತರಾಗಲೆಂದೇ ಪ್ರಾರ್ಥಿಸುತ್ತಿರುವುದಂತೂ ಸುಳ್ಳಲ್ಲ.

ನವೆಂಬರ್ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!