ವಿರೇನ್ ಸಾಗರ್ ನಿರ್ದೇಶನದ ಕೈಟ್ ಬ್ರದರ್ಸ್ ಲಿರಿಕಲ್ ವಿಡಿಯೋ ಲಾಂಚ್!

Published : Nov 02, 2019, 10:07 AM IST
ವಿರೇನ್ ಸಾಗರ್ ನಿರ್ದೇಶನದ ಕೈಟ್ ಬ್ರದರ್ಸ್ ಲಿರಿಕಲ್ ವಿಡಿಯೋ ಲಾಂಚ್!

ಸಾರಾಂಶ

ವಿರೇನ್ ಸಾಗರ್ ಬಗಾಡೆ ನಿರ್ದೇಶನದ ‘ಕೈಟ್ ಬ್ರದರ್ಸ್’ ಕನ್ನಡ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಹೊರಬಂದಿದೆ. ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಚಿತ್ರ ತಂಡ ನವೆಂಬರ್ 1 ರಂದು ಲಿರಿಕಲ್ ವಿಡಿಯೋ ಲಾಂಚ್ ಮಾಡಿದೆ.  

ಅ..ಅರಸ, ಆ ..ಆನೆ ...’ ಎಂದು ಶುರುವಾಗುವ ಹಾಡಿಗೆ ಅನೀಶ್ ಚೆರಿಯನ್ ಸಂಗೀತ ನೀಡಿದ್ದು, ಅನನ್ಯ ಭಟ್ ಹಾಡಿದ್ದಾರೆ. ಅವರಿಗೆ ನಿರ್ದೇಶಕ ವಿರೇನ್ ಸಾಗರ್ ಸೇರಿ ಹಲವರು ಸಾಥ್ ನೀಡಿದ್ದಾರೆ. ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈಗ ಚಿತ್ರದ ರಿಲೀಸ್ಗೆ ಸಿದ್ಧತೆ ನಡೆಸಿದೆ. ಸದ್ಯಕ್ಕೆ ಚಿತ್ರ ತಂಡ ಪ್ರಮೋಷನ್ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದೆ.

'ಮುಂದಿನ ನಿಲ್ದಾಣ'ಕ್ಕೆ 'U-ಟರ್ನ್' ತೆಗೆದುಕೊಂಡ ರಾಧಿಕಾ!

ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಮತ್ತು ವಿಶಿಷ್ಟ ಪ್ರಯೋಗದ ಚಿತ್ರ. ನಿರ್ದೇಶಕ ವಿರೇನ್ ಸಾಗರ್ ಬಗಾಡೆ ಹೇಳುವ ಹಾಗೆ, ಉತ್ತರ ಕರ್ನಾಟಕದಲ್ಲಿನ ಪ್ರವಾಹ ಮತ್ತು ಅಲ್ಲಿನ ಸರ್ಕಾರಿ ಶಾಲೆಗಳ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಿರುವ ಕತೆಯಿದು. ಸರ್ಕಾರಿ ಶಾಲೆಗೆ ಹೋಗುವ ಇಬ್ಬರು ಗೆಳೆಯರು.

 

ಅವರಲ್ಲಿ ಒಬ್ಬಾತನ ಶಾಲೆಯ ಖರ್ಚುವೆಚ್ಚಕ್ಕೆ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಿಹಿಸುವುದು ಕತೆಯ ತಿರುಳು. ಅದರೊಟ್ಟಿಗೆ ಸರ್ಕಾರಿ ಶಾಲೆಗಳ ಉಳಿವು, ಬಡ ಮಕ್ಕಳ ಓದಿನ ಪರಿಸ್ಥಿತಿಗಳನ್ನು ತೋರಿಸಲಾಗಿದೆ. ಹಾಗಾಗಿ ಇದು ಎಲ್ಲರಿಗೂ ಇಷ್ಟವಾಗುವ ಸಿನಿಮಾ ಆಗುತ್ತದೆ ಎನ್ನುವ ವಿಶ್ವಾಸ ಅವರದ್ದು.  ಭಜರಂಗ ಸಿನಿಮಾ ಬ್ಯಾನರ್‌ನಲ್ಲಿ ರಜನಿಕಾಂತ್ ರಾವ್ ದಳ್ವಿ, ಮಂಜುನಾಥ್ ಹಾಗೂ ಎಸ್ . ಮಂಜುನಾಥ್ ಬಗಾಡೆ ನಿರ್ಮಾಣ ಮಾಡಿದ್ದು, ವಿರೇನ್ ಸಾಗರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಸಮರ್ಥ್ ಆಶಿ, ಪ್ರಣೀಲ್ ನಾಡಿಗೇರ, ಶ್ರೇಯಾ ಹರಿಹರ ಹಾಗೂ ಪ್ರಭು ಹಂಚಿನಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ನಿರ್ದೇಶಕ ವಿರೇನ್ ಅವರೇ ಕತೆ, ಚಿತ್ರಕತೆ ಬರೆದಿದ್ದಾರೆ. ವಿನೋದ್ ಬಗಾಡೆ ಸಾಥ್ ನೀಡಿದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?