ಕಿಚ್ಚ ಅಭಿಮಾನಿಗಳಿಗೆ ರಾಜಮೌಳಿ ಗುಡ್ ನ್ಯೂಸ್, ಫ್ಯಾನ್ಸ್‌ ಫುಲ್ ಖುಷ್!

Suvarna News   | Asianet News
Published : Jan 18, 2020, 04:32 PM ISTUpdated : Jan 18, 2020, 05:14 PM IST
ಕಿಚ್ಚ ಅಭಿಮಾನಿಗಳಿಗೆ ರಾಜಮೌಳಿ ಗುಡ್ ನ್ಯೂಸ್, ಫ್ಯಾನ್ಸ್‌ ಫುಲ್ ಖುಷ್!

ಸಾರಾಂಶ

ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಕಿಚ್ಚಿ ಸುದೀಪ್‌ಗೆ ಅವಕಾಶ ಕೊಟ್ಟಿದ್ದರು. ಅದ್ಭುತ ನಟನೆಯಿಂದ ಬೇಷ್ ಎನಿಸಿಕೊಂಡ ಕಿಚ್ಚಗೆ ಬಿಗ್ ಬಜೆಟ್ ಚಿತ್ರ 'ಬಾಹುಬಲಿ-1'ರಲ್ಲಿ ಗೆಸ್ಟ್ ರೋಲ್ ಕೊಡಲಾಗಿತ್ತು. ಆದರೆ, ಬಾಹುಬಲಿ-2ರಲ್ಲಿ ಸುದೀಪ್ ಕಾಣಿಸಿಕೊಂಡಿರಲಿಲ್ಲ. ಭ್ರಮನಿರಸನಗೊಂಡ ಸುದೀಪ್ ಅಭಿಮಾನಿಗಳಿಗೆ ರಾಜಮೌಳಿ ಶುಭ ಸುದ್ದಿ ಹೇಳುತ್ತಿದ್ದಾರೆ.

ರಾಜಮೌಳಿ ಚಿತ್ರವೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಇಡೀ ಭಾರತದ ಚಿತ್ರರಂಗವೇ ಬೆರಗಾಗುವಂತೆ ಬಾಹುಬಲಿಯಂಥ ಚಿತ್ರ ಮಾಡಿ, ಚಿತ್ರಾಭಿಮಾನಿಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡುವಲ್ಲಿ ಯಶಸ್ವಿಯಾದ ಪ್ರತಿಭಾನ್ವಿತ ನಿರ್ದೇಶಕ. ಇವರ ಚಿತ್ರದಲ್ಲಿ ನಟಿಸವುದು ಎಂದರೆ ಎಲ್ಲ ನಟ, ನಟಿಯರಿಗೂ ಎಲ್ಲಿಲ್ಲದ ಹುಮ್ಮಸ್ಸು. ಅವಕಾಶ ಸಿಕ್ಕಿದರೆ ಪುಣ್ಯ. ಅಭಿನಯ ಕಲೆಯನ್ನು ಅರೆದು, ಕುಡಿದವರಿಗೆ ಮಾತ್ರ ಈ ನಿರ್ದೇಶಕ ಮಣೆ ಹಾಕುತ್ತಾರೆಂಬುವುದು ಯೂನಿವರ್ಸಲ್ ಟ್ರುತ್. 

ರಾಜಮೌಳಿ ಚಿತ್ರದಲ್ಲಿ ವಿದೇಶಿ ಬೆಡಗಿ ಒಲಿವಿಯಾ!

ಅಂಥ ಮಹಾನ್ ನಿರ್ದೇಶಕ ರಾಜಮೌಳಿ ಕನ್ನಡದ ಕಿಚ್ಚ ಸುದೀಪ್‌ ಅವರಿಗೆ 'ಈಗ' ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. ಕಾಟ ಕೊಡುವ ನೊಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ ಸುದೀಪ್ ಅಭಿನಯನಕ್ಕೆ ಮರುಳಾಗದವರು ಯಾರು ಹೇಳಿ? ಆಗಲೇ ರೌಜಮೌಳಿ ಸುದೀಪ್ ಅವರಿಂದ ಮತ್ತೊಂದು ಚಿತ್ರ ಮಾಡಿಸುವ ಪ್ಲ್ಯಾನ್ ಮಾಡಿದ್ದರು. ನಂತರದ ದೊಡ್ಡ ಬಜೆಟ್ ಚಿತ್ರ ಬಾಹುಬಲಿಯಲ್ಲಿಯೂ ಸಣ್ಣದೊಂದು ಪಾತ್ರ ನೀಡಿದ್ದರೂ, ಮತ್ತೊಂದು ಭಾಗದಲ್ಲಿ ಕಿಚ್ಚ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಕಿಚ್ಚ ಅಭಿಮಾನಿಗಳು ತುಸು ಸಿಟ್ಟಾಗಿದ್ದೂ ಸುಳ್ಳಲ್ಲ. 

ಟಾಲಿವುಡ್‌ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜೊತೆ 'ಸೈರಾ ನರಸಿಂಹ ರೆಡ್ಡಿ' ಹಾಗೂ ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್ ಜೊತೆ 'ದಬಾಂಗ್-3' ಚಿತ್ರದಲ್ಲಿ ನಟಿಸಿ, ತಮ್ಮ ಪ್ರತಿಭೆಯನ್ನು ತೋರಿಸಿದ ಸುದೀಪ್‌‌ಗೆ ಇದೀಗ ತಮ್ಮ RRR ಎಂಬ ಚಿತ್ರದಲ್ಲಿ ಮಣೆ ಹಾಕಲು ರೆಡಿಯಾಗಿದ್ದಾರೆ ರೌಜಮೌಳಿ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‌ ಖಡಕ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಿಚ್ಚನಿಗೆ ಸಲ್ಮಾನ್ ಅಮೂಲ್ಯ ಗಿಫ್ಟ್... ಕಾರಣ ಏನಂತೆ!

ಈ ಹಿಂದೆ ಬಾಹುಬಲಿ ಚಿತ್ರದಲ್ಲಿ ಸುದೀಪ್‌ ಪೋಸ್ಟರ್‌ ಲುಕ್‌ ರಿಲೀಸ್ ಆದಾಗ ಅವರದ್ದು ದೊಡ್ಡ ಪಾತ್ರ ಎಂದೆನಿಸಿತ್ತು. ಆದರೆ ಅವರು ಕಾಣಿಸಿಕೊಂಡಿದ್ದು, ಸಣ್ಣ ಪಾತ್ರದಲ್ಲಿ. ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದರಿಂದ ಟಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ಫ್ಯಾನ್ಸ್‌ಗೆ ಬೇಸರವಾಗಿತ್ತು. ಆದರೆ ಹೀಗ ಹಾಗಾಗದಂತೆ ರಾಜಮೌಳಿ ಸುದೀಪ್‌ಗೆ ರಾಮ್‌ ಚರಣ್‌ ಎದರು ವಿಲನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲು ಅವಕಾಶ ನೀಡಿದ್ದಾರಂತೆ. ಇದರ ಬಗ್ಗೆ ಖಾಸಗಿ ವೆಬ್‌ಸೈಟ್‌‌ವೊಂದು ಸುದ್ದಿ ಪ್ರಕಟಿಸಿದೆ. 

ಜನವರಿ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!