ಹುಟ್ಟು ದರಿದ್ರವಾಗಿದ್ರೂ ಸಾವು ಚರಿತ್ರೆಯಾಗ್ಬೇಕು': ಇದು ನೀನಾಸಂ ಸತೀಶ್‌ 'ಗೋದ್ರಾ' ಕಥೆ!

By Suvarna News  |  First Published Jan 18, 2020, 4:08 PM IST

ನೀನಾಸಂ ಸತೀಶ್ ಅಭಿನಯದ 'ಗೋದ್ರಾ' ಚಿತ್ರದ ಟೀಸರ್‌ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಇರೋದು ಮೂರೇ ಡೈಲಾಗ್‌‌ಗಳಾದ್ರೂ ಇಂಪ್ಯಾಕ್ಟ್‌ ಫುಲ್ ಸೂಪರ್ ಅನ್ನೋ ಫೀಲ್ ಕೊಡುತ್ತಿದೆ.
 


ಸಿಂಪಲ್ ಆ್ಯಂಡ್ ಹಂಬಲ್ ಆ್ಯಕ್ಟರ್‌ ನೀನಾಸಂ ಸತೀಶ್‌ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸುವ ಸೂಚನೆ ನೀಡಿದ್ದಾರೆ. 'ಗೋದ್ರಾ' ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನಸ್ಸು ಗೆಲ್ಲಲು ಫುಲ್ ರೆಡಿಯಾಗಿದ್ದಾರೆ.

ನಗರ ಸಂವೇದನೆ ಇರುವ ಕಿರುಚಿತ್ರ 'ಜಿಪಿಎಸ್'!

Tap to resize

Latest Videos

1 ನಿಮಿಷ 48 ಸೆಕೆಂಡ್‌ ಇರುವ ಈ ಟೀಸರ್‌ನಲ್ಲಿ ಇರುವ ಮೂರು ಡೈಲಾಗ್‌ಗಳನ್ನು ನೀವು ಕೇಳಿದ್ರೆ ಸತೀಶ್ ಅಭಿನಯಕ್ಕೆ ಫಿದಾ ಆಗೋದಂತೂ ಗ್ಯಾರಂಟಿ. ಅದರಲ್ಲೂ 'ಫ್ರೀಡಂ ಯಾವಾಗಲೂ ಫ್ರೀಯಾಗಿ ಸಿಗೋಲ್ಲ, ರಕ್ತ ಹರಿಸಬೇಕು' ಅನ್ನೋ ಡೈಲಾಗ್‌ ಚಿತ್ರದ ಸೀರಿಯಸ್‌ ಸಬ್ಜೆಕ್ಟ್‌ನದ್ದು ಎನ್ನುವುದು ಗೊತ್ತಾಗುತ್ತದೆ. 

ನಿರ್ದೇಶಕನಾದ ನೀನಾಸಂ ಸತೀಶ್‌

ಸೀರಿಯಸ್‌ ಸ್ಟೋರಿಯಲ್ಲಿ ಸತೀಶ್‌ಗೆ ಜೋಡಿಯಾಗಿ ರೋಮ್ಯಾನ್ಸ್‌ ಮಾಡಲು 'U-Turn' ಸುಂದರಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳಿದ್ದಾರೆ. ನಟಿ ವಸಿಷ್ಠ ಸಿಂಹ ಪೈಲೆಟ್‌ ಆಗಿ ಹಾಗೂ ಅಚ್ಯುತ್‌ ಕುಮಾರ್ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಕೆ.ಎಸ್‌. ನಂದೀಶ್‌ ಡೈರೆಕ್ಷನ್‌ಗೆ ಜೇಕೋಬ್‌ ಫಿಲಮ್ಸ್‌ ನಿರ್ಮಿಸಿದ್ದಾರೆ. 

 

click me!