
ಸುಪ್ರೀಂ ಕೂರ್ಟ್ ಆದೇಶದಂತೆ ಪ್ರತಿಯೊಂದೂ ಚಿತ್ರಮಂದಿರಗಳಲ್ಲಿಯೂ ಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ಲೇ ಮಾಡಲಾಗುತ್ತದೆ. ಸಹಜವಾಗಿಯೇ ರಾಷ್ಟ್ರಗೀತೆ ಹಾಡುವಾಗ ಭಾರತೀಯರು ಗೌರವ ಸೂಚಿಸಲು ಎದ್ದು ನಿಲ್ಲಬೇಕು, ಎದ್ದು ನಿಲ್ಲುತ್ತಾರೆ. ಇದು ಕಾಮನ್ ಸೆನ್ಸ್. ಕೋರ್ಟ್ ಆದೇಶವನ್ನು ಪ್ರತಿಯೊಂದೂ ಚಿತ್ರಮಂದಿರವೂ ಪಾಲಿಸುತ್ತಿವೆ. ತಪ್ಪದೇ ವೀಕ್ಷಕರು ಎದ್ದು ನಿಂತು, ಭಾರತ ಮಾತೆಗೆ ಗೌರವ ಸೂಚಿಸಿಯೇ ಸೂಚಿಸುತ್ತಾರೆ.
ಆರತಿಗೂ ಮುನ್ನ ಪಶುಪತಿನಾಥ ದೇಗುಲದಲ್ಲಿ ರಾಷ್ಟ್ರಗೀತೆ ಕಡ್ಡಾಯ!
ಬೆಂಗಳೂರಿನ ಪಿವಿಆರ್ ಚಿತ್ರಮಂದಿರವೊಂದರಲ್ಲಿ ಗುಂಪೊಂದು ರಾಷ್ಟ್ರಗೀತೆಗೆ ಅಗೌರವ ನೀಡಿರುವುದು ಬೆಳಕಿಗೆ ಬಂದಿದೆ. ರಾಷ್ಟ್ರಗೀತೆ ಪ್ಲೇ ಆದಾಗ ಇಡೀ ಚಿತ್ರ ಮಂದಿರವೇ ಎದ್ದು ನಿಂತರೆ, ಒಂದು ಗುಂಪು ಮಾತ್ರ ಕೈ ಕಟ್ಟಿ ಗಡದ್ದಾಗಿ ಕುಳಿತೇ ಬಿಟ್ಟಿತ್ತು. ಇದೇ ಚಿತ್ರ ನೋಡಲು 'ಮುದ್ದು ಮನಸೇ' ಚಿತ್ರದ ನಟ ಆರು ಗೌಡ ಹಾಗೂ 'ಪ್ಯಾಟೆ ಹುಡುಗಿ ಹಳ್ಳಿ ಲೈಫ್' ಖ್ಯಾತಿಯ ಐಶ್ವರ್ಯ ಸಿನಿಮಾ ನೋಡಲು ಹೋಗಿದ್ದರು. ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಅಗೌರವ ತೋರಿದ ಐವರ ಗುಂಪೊಂದನ್ನು ಇವರು ಗಮನಿಸಿದ್ದರು. ಅರು ಗೌಡ ಹಾಗೂ ಐಶ್ವರ್ಯಾ ಅವರನ್ನು ಪ್ರಶ್ನಿಸಲು ಮುಂದಾದರು.
"
ಇವರ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಕಾರಣ ಇವರ ನಡುವೆ ಮಾತಿನ ಚಕಾಮಕಿಯೂ ನಡೆಯಿತು. ಕೆಲವರ ವರ್ತನೆ ಕೈ ಮೀರಿದಾಗ ಸಿನಿಮಾ ನೋಡಲು ಬಂದಿದ್ದ ಇತರೆ ವೀಕ್ಷಕರೂ ಅರು ಹಾಗೂ ಐಶ್ವರ್ಯಗೆ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೇ ದೇಶದ ರಾಷ್ಟ್ರಗೀತೆಗೇ ಅಗೌರವ ತೋರಿ, ಉಡಾಫೆ ತೋರಿದವರನ್ನು ಚಿತ್ರಮಂದಿರದಿಂದಲೇ ಹೊರ ಹಾಕುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇವರನ್ನು ಹೊರ ಹಾಕಿದ ಕೂಡಲೇ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಭಾರತ್ ಮಾತಾಕಿ ಜೈ ಎಂದು ಜೈಕಾರ ಕೂಗಿದ್ದಾರೆ.
ವಿಶ್ವ ವಿಜಯಿ ಭಾರತಾಂಬೆಯ ಗುಣಗಾನ: ಅಮೆರಿಕನ್ ಯೋಧರಿಂದ ಜನಗಣಮನ!
ಕೆಲವರು ರಾಷ್ಟ್ರ ಗೀತೆಗೆ ಅವಮಾನ ತೋರುತ್ತಾರೆಂಬುದನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ರಾಷ್ಟ್ರಗೀತೆಯನ್ನು ಚಿತ್ರಮಂದಿರಗಳಲ್ಲಿ ಕಡ್ಡಾಯಗೊಳಿಸಿದ ಆದೇಶವನ್ನು ತಡೆ ಹಿಡಿಯುವಂತೆ ಸುಪ್ರೀಂ ಕೋರ್ಟ್ ಮನವಿಯೂ ಮಾಡಿತ್ತು ಒಮ್ಮೆ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವ ಸಂಬಂಧ ವಾದ, ವಿವಾದಗಳು ನಡೆದ ನಂತರ ಎಲ್ಲ ಚಿತ್ರಮಂದಿರಗಳೂ ಗೀತೆ ಪ್ರಸಾರ ಮಾಡುವುದು ಜಾರಿಯಾಯಿತು.
ವಿಶೇಷ ಚೇತನ ಬಾಲಕನಿಂದ ಜನಗಣಮನ: ಹೌಡಿ ಮೋದಿಯಲ್ಲಿ ಈತನದ್ದೇ ಗುಣಗಾನ!
ಅಲ್ಲದೇ ಎಲ್ಲ ಸಮಯದಲ್ಲೂ ಎಲ್ಲರೂ ದೇಶಭಕ್ತಿಯನ್ನು ತೋಳಿನಲ್ಲಿಯೇ ಇಟ್ಟಿಕೊಳ್ಳಲು ಸಾಧ್ಯವಿಲ್ಲ. ನೈತಿಕ ಪೊಲೀಸ್‌ಗಿರಿಯನ್ನೂ ನಿಲ್ಲಿಸುವ ಅಗತ್ಯವಿದೆ ಎಂದು ಕೋರ್ಟ್ ತನ್ನದೇ ಆದೇಶವನ್ನು ಮಾರ್ಪಾಡು ಮಾಡಿತ್ತು. ಕಾನೂನು, ಆದೇಶವೇನೇ ಇರಲಿ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಲ್ಲುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹಾಗೆ ಮಾಡಿದಾಗ ಪ್ರಶ್ನಿಸಬಹುದು. ಆದರೆ, ನೈತಿಕ ಪೊಲೀಸ್ ಗಿರಿ ಮಾಡುವ ಅಗತ್ಯವಿಲ್ಲ ಎಂದೆನಿಸುತ್ತದೆ. ನೀವು ಏನು ಹೇಳುತ್ತೀರಿ?
ಹಾಗಂತ ಈ ನಟರು ಮಾಡಿದ್ದೇನೂ ನೈತಿಕಗಿರಿಯಲ್ಲ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.