ಐರಾಗೆ ಸಿಗದ ಅಂಬಿ ಗಿಫ್ಟ್‌: ಯಶ್ 2ನೇ ಮಗೂಗೆ ಆ ಅದೃಷ್ಟ!

Published : Oct 24, 2019, 04:15 PM ISTUpdated : Oct 24, 2019, 05:36 PM IST
ಐರಾಗೆ ಸಿಗದ ಅಂಬಿ ಗಿಫ್ಟ್‌: ಯಶ್ 2ನೇ ಮಗೂಗೆ ಆ ಅದೃಷ್ಟ!

ಸಾರಾಂಶ

  ಇನ್ನೊಂದು ತಿಂಗಳಿಗೆ ಅಂಬಿ ಕರುನಾಡನ್ನು ಅಗಲಿ ವರ್ಷವಾಗಲಿದೆ. ಸಾವಿಗೂ ಮುನ್ನವೇ ಯಶ್-ರಾಧಿಕಾ ದಂಪತಿ ಮಗುವಿಗೆ ಗಿಫ್ಟ್ ಬುಕ್ ಮಾಡಿದ್ದರು ಅಂಬಿ ತಾತ. ಅದ್ಯಾಕೋ ಅದು ಐರಾಗೆ ಸಿಗಲೇ ಇಲ್ಲ. ಇದರ ಬಗ್ಗೆ ಹಾಗೂ ಇನ್ನತರೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ.

 

ಸ್ಯಾಂಡಲ್‌ವುಡ್ ಸ್ಟಾರ್ ಕಿಡ್ ಐರಾಗೆ ಇನ್ನೂ ಅಂಬಿ ತಾತನ ಗಿಫ್ಟ್ ಸಿಕ್ಕಿಲ್ಲ, ಮೊಮ್ಮಗಳನ್ನು ಭೇಟಿ ಮಾಡಿ ಮುದ್ದಾಡಿದ ಸುಮಲತಾ ಎರಡನೇ ಮಗುವಿಗೆ ಆ ಬಣ್ಣ ಬಣ್ಣದ ತೊಟ್ಟಿಲ ಗಿಫ್ಟ್ ಕೊಡುವುದಾಗಿ ಹೇಳಿದ್ದಾರೆ.

 

ಸ್ಯಾಂಡಲ್‌ವುಡ್‌ ರಾಕಿಂಗ್ ದಂಪತಿಯ ಮುದ್ದು ಮಗಳು ಐರಾ ಯಶ್ ಹುಟ್ಟುವ ಮೊದಲೇ ಸ್ಟಾರ್ ಕಿಡ್‌ ಆದವಳು. ಹುಟ್ಟುವ ಮುನ್ನವೇ ರೆಬೆಲ್ ಸ್ಟಾರ್ ಅಂಬಿ ತಾತನಿಂದ ಸರ್ಪೈಸ್ ಸ್ಪೆಷಲ್ ಗಿಫ್ಟ್ ಆಗಿ 600 ವರ್ಷಗಳ ಇತಿಹಾಸ ಇರುವ ಕಲಘಟಗಿ ತೊಟ್ಟಿಲ ಗಿಫ್ಟ್ ಬುಕ್ ಮಾಡಿದ್ದರು. ಆದರೆ, ತೊಟ್ಟಿಲು ಶಾಸ್ತ್ರಕ್ಕೆ ಸರಿಯಾಗಿ ಇದು ಡೆಲಿವರಿ ಆಗಲಿಲ್ಲ. ಐರಾಗೆ ಆ ಅದೃಷ್ಟ ಒಲಿಯಲೇ ಇಲ್ಲ.

ರಾಧಿಕಾ ಎರಡನೇ ಬೇಬಿ ಶವರ್; ಐರಾ ಕಾಣಿಸಿಕೊಂಡಿದ್ದು ಹೀಗೆ!

 

ರಾಧಿಕಾ ಸೀಮಂತಕ್ಕೆ ಅಂಬರೀಷ್ ಹಾಜರಾಗಿದ್ದರು. ಅದು ಮುಗಿದ ಕೂಡಲೇ ಸಾಗವಾನಿ ಮರದಿಂದ ಮಾಡುವ ಬಣ್ಣ ಬಣ್ಣದ ತೊಟ್ಟಿಲನ್ನು ಅವರು ಯಶ್ ಮಗುವಿಗೆಂದೇ ಆರ್ಡರ್ ಕೊಟ್ಟಿದ್ದರು. ಆದರೆ ಯಶ್ ಮಗಳನ್ನು ನೋಡುವ ಭಾಗ್ಯವೂ ಅಂಬರೀಷ್‌ಗೆ ಸಿಗಲಿಲ್ಲ. ಆ ಮುನ್ನವೇ ಅವರು ಇಹಲೋಕ ತ್ಯಜಿಸಿದರು. ಅಷ್ಟೇ ಅಲ್ಲ ಐರಾಳ ತೊಟ್ಟಿಲು ಶಾಸ್ತ್ರವೂ ಮುಗಿದರೂ ಗಿಫ್ಟ್ ಬರಲೇ ಇಲ್ಲ.

 

ನಂತರ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾದ ಸುಮಲತಾರಿಗೆ ಐರಾಳನ್ನು ಭೇಟಿಯಾಗಲೂ ಸಮಯ ಸಿಕ್ಕಿರಲ್ಲಿಲ್ಲ. ಕೆಲವು ದಿನಗಳ ಹಿಂದೆ ಯಶ್, ರಾಧಿಕಾ ಮತ್ತು ಐರಾ ಅಂಬಿ ನಿವಾಸಕ್ಕೆ ಭೇಟಿ ನೀಡಿ 3 ಗಂಟೆಗಳ ಕಾಲ ಅಜ್ಜಿಯೊಂದಿಗೆ ಆಡಿ ಬಂದಿದ್ದಾಳೆ. ಚಿನ್ನದ ಸರದ ಗಿಫ್ಟ್ ಸಹ ಪಡೆದಿದ್ದಳು.

ರೆಬೆಲ್ ಸ್ಟಾರ್ ಮನೆಯಲ್ಲಿ ಅಬ್ಬರಿಸಿದ ಐರಾ!

 

ಇಂದು (ಅ.24) ಕಂಠೀರವ ಸ್ಟೂಡಿಯೋದಲ್ಲಿ ಅಂಬರೀಶ್ 11 ತಿಂಗಳ ತಿಥಿ ಪೂಜೆಗೆ ಆಗಮಿಸಿದ ಸುಮಲತಾ ಐರಾಳ ತೊಟ್ಟಿಲು ಹಾಗೂ ಅಭಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 'ಐರಾಳಿಗೆ ತೊಟ್ಟಿಲು ಶಾಸ್ತ್ರಿ ಮಾಡಲಿಲ್ಲ ಅದಕ್ಕೆ ಕೊಡಲು ಆಗಲಿಲ್ಲ ಆದರೆ ಯಶ್ ಎರಡನೇ ಮಗುವಿಗೆ ಕೊಡುತ್ತೇನೆ. ಮಗಳನ್ನು ನೋಡಬೇಕು ಕರೆದುಕೊಂಡು ಬಾ, ಇಲ್ಲ ಅವಳು ಸ್ಕೋಲ್‌ಗೆ ಹೋದಾಗ ಕರ್ಕೊಂಡು ಬರ್ತಿಯಾ ಎಂದು ಛೇಡಿಸಿದ್ದಕ್ಕೆ ಯಶ್ ದಂಪತಿ ಮನೆಗೆ ಭೇಟಿ ನೀಡಿದ್ದರು, ' ಎಂದು ಐರಾ ಬಗ್ಗೆ ಹೇಳಿದರು ಸುಮಲತಾ.

ಅಂಬಿ ಕೊಟ್ಟ ಈ ತೊಟ್ಟಿಲಲ್ಲೇ ಯಶ್ ಮಗಳು ಬೆಳೆಯುತ್ತಾಳೆ; ಇಲ್ಲಿದೆ ಫೋಟೋ

'ಅಮರ್' ಚಿತ್ರದ ನಂತರ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ಅಭಿ ತನ್ನ ಮುಂದಿನ ಚಿತ್ರವನ್ನು 2020ರಲ್ಲಿ ಶುರುಮಾಡಲಿದ್ದಾನೆ, ಚಿತ್ರಕಥೆ ಕೇಳಿ, ಮಾರ್ಗದರ್ಶನ ನೀಡೋಕೆ ಸಮಯ ಸಿಗ್ತಿಲ್ಲ' ಎಂದು ಮಗನ ಮುಂದಿನ ಚಿತ್ರದ ಬಗ್ಗೆ ಹೇಳಿದ್ದಾರೆ ಮಂಡ್ಯ ಎಂಪಿಯೂ ಆಗಿರುವ ಸುಮಲತಾ.

 ಅಕ್ಟೋಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ