ನಟ ಜಗ್ಗೇಶ್ ವೈಕುಂಠ ಏಕಾದಶಿ ದಿನವೇ ಶ್ರೀ ಗುರು ರಾಯರು ಹಾಗೂ ಹರಿಯ ನಾಮಧರಿಸಿ ಮನೆಗೆ ಹೊಸ ಅತಿಥಿಯಾಗಿ ಅಮೇರಿಕನ್ ಟೆಡಿಯರ್ ಜಾತಿಯ ನಾಯಿ ಮರಿಯನ್ನು ಬರಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಒನ್ ಆ್ಯಂಡ್ ಓನ್ಲಿ ನವರಸ ನಾಯಕ ಹಾಗೂ ಅಭಿಮಾನಿಗಳ ಪ್ರೇರಕ ಜಗ್ಗೇಶ್ ಮಹಾನ್ ದೈವ ಭಕ್ತರು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ. ದಿನ ಶುರುವಾಗುತ್ತಿದ್ದಂತೆ ಅಭಿಮಾನಿಗಳಿಗೆ ಮಂತ್ರಾಲಯ ಗುರು ರಾಯರ ಅಲಂಕಾರ ಫೋಟೋದೊಂದಿಗೆ ಶುಭ ಕೋರುತ್ತಾರೆ.
ಸ್ಯಾಂಡಲ್‌ವುಡ್ ಯಂಗ್ ಕಪಲ್ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!
ನಿನ್ನೆ( ಜನವರಿ 06) ವೈಕುಂಠ ಏಕಾದಶಿ ಪ್ರಯುಕ್ತ ಶ್ರೀನಿವಾಸನ ದರ್ಶನ ಪಡೆದು ಆನಂತರ ಮನೆಗೆ ಹೊಸ ಅತಿಥಿಯಾಗಿ ನಾಯಿ ಮರಿಯನ್ನು ಬರಮಾಡಿಕೊಂಡಿದ್ದಾರೆ. ವಿಶೇಷವೇನೆಂದರೆ ಈ ನಾಯಿ ಮರಿಯ ಹಣೆಯ ಮೇಲೆ ನಾಮ ಹೋಲುವ ತಿಲಕವಿದೆ. ಇದು 50,000 ರೂ. ಬೆಲೆ ಬಾಳವ ಅಮೇರಿಕನ್ ಟೆಡಿಯರ್ ಜಾತಿಗೆ ಸೇರಿದ್ದು.
ಚಿತ್ರ ವಿಮರ್ಶೆ: ಕಾಳಿದಾಸ ಕನ್ನಡ ಮೇಷ್ಟ್ರು
ನಾಯಿ ಮರಿ ಮನೆಯಲ್ಲಿ ಬಟ್ಟೆ ಕಚ್ಚಿಕೊಂಡು ತುಂಟಾಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಮೇರಿಕನ್ ಟೆಡಿಯರ್ ನಾಯಿಗಳನ್ನು ಇಂಗ್ಲೆಂಡ್‌ನಲ್ಲಿ ಭೇಟಿಯಾಡಲು ಬಿಡುತ್ತಾರೆ. ಇದನ್ನು ಸರಿಯಾದ ರೀತಿಯಲ್ಲಿ ಟ್ರೇನ್ ಮಾಡಿದರೆ ಇದರಷ್ಟು ಪ್ರೀತಿ ಕೊಡುವ ನಾಯಿ ಮತ್ತೊಂದಿಲ್ಲ!