ಜಾಲಿ ಮೋಡ್‌ನಲ್ಲಿ ಯುವರಾಜ್‌; ದುಬೈನಲ್ಲಿ ಫ್ಲೈ ಬೋರ್ಡಿಂಗ್ ವಿಡಿಯೋ ನೋಡಿ!

Suvarna News   | Asianet News
Published : Jan 06, 2020, 01:37 PM ISTUpdated : Jan 06, 2020, 01:39 PM IST
ಜಾಲಿ ಮೋಡ್‌ನಲ್ಲಿ ಯುವರಾಜ್‌; ದುಬೈನಲ್ಲಿ ಫ್ಲೈ ಬೋರ್ಡಿಂಗ್  ವಿಡಿಯೋ ನೋಡಿ!

ಸಾರಾಂಶ

2020 ರಲ್ಲಿ ಕನ್ನಡ ಚಿತ್ರರಂಗಕ್ಕೆ ಬರುವುದಾಗಿ ಭರವಸೆ ಮೂಡಿಸಿರುವ ಯುವ ರಾಜ್‌ಕುಮಾರ್‌ ಈಗ ದುಬೈನಲ್ಲಿ ಜಾಲಿ ಮೋಡ್‌ನಲ್ಲಿ ಫ್ಲೈಬೋರ್ಡಿಂಗ್ ಮಾಡಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.   

ಕನ್ನಡ ಚಿತ್ರರಂಗದ ಎವರ್‌ ಗ್ರೀನ್‌ ನಟ, ಸಕಲಕಲಾ ವಲ್ಲಭ ಡಾ.ರಾಜ್‌ ಕುಮಾರ್‌ ಅವರ ಕುಟುಂಬದ ಕುಡಿಗಳು ಒಬ್ಬೊಬ್ಬರಾಗಿ ಸ್ಯಾಂಡಲ್‌ವುಡ್‌ಗೆ  ಪಾದಾರ್ಪಣೆ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಅವರ ಇಬ್ಬರು ಮಕ್ಕಳು - ಯುವ ರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ  ತೊಡಗಿಸಿಕೊಂಡಿದ್ದಾರೆ. 

ರಾಜ್ ಕುಮಾರ್ ಮೊಮ್ಮಗ ಯುವರಾಜ್ - ಶ್ರೀದೇವಿ ಮ್ಯಾರೆಜ್ ಫೋಟೋಸ್!

ಇನ್ನು 2020 ವರ್ಷವನ್ನು ದುಬೈನಲ್ಲಿ ಆಚರಿಸುವ ಮೂಲಕ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ.  ಫ್ಲೈ ಬೋರ್ಡಿಂಗ್ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್  'ಜಾಕಿ' ಚಿತ್ರದ ಹಾಡಿಗೆ ಟಿಕ್‌ಟಾಕ್‌ ಮಾಡಿದ್ದಾರೆ. 

 

ಕೆಜಿಎಫ್ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಪುನೀತ್ ಅವರು ಯುವ ರಾಜ್‌ಕುಮಾರ್ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ ಭರ್ಜರಿಯಾಗಿ ಕಾಣಿಸಲು ಯುವ ಜಿಮ್‌ನಲ್ಲಿ ಹೆಚ್ಚಿನ ಕಾಲಕಳೆಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!