ಈ ವ್ಯಕ್ತಿಗಾಗಿ 15 ವರ್ಷ ಬಳಿಕ 'ಪ್ರೈಡ್‌ ಆಫ್‌ ಕನ್ನಡ ಸಿನಿಮಾ' ಅವಾರ್ಡ್‌ ಸ್ವೀಕರಿಸಿದ ಕಿಚ್ಚ!

Suvarna News   | Asianet News
Published : Jan 06, 2020, 02:10 PM ISTUpdated : Jan 06, 2020, 03:32 PM IST
ಈ ವ್ಯಕ್ತಿಗಾಗಿ 15 ವರ್ಷ ಬಳಿಕ 'ಪ್ರೈಡ್‌ ಆಫ್‌ ಕನ್ನಡ ಸಿನಿಮಾ' ಅವಾರ್ಡ್‌ ಸ್ವೀಕರಿಸಿದ ಕಿಚ್ಚ!

ಸಾರಾಂಶ

ಯಾವುದೇ ಅವಾರ್ಡ್‌ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ಕಿಚ್ಚ ಸುದೀಪ್ 15 ವರ್ಷದ ಬಳಿಕ ಈ ವ್ಯಕ್ತಿಯ ಮಾತಿಗೆ ಬೆಲೆ ಕೊಟ್ಟು  ಜೀ ಸಿನಿ ಅವಾರ್ಡ್ಸ್‌ 2020 ರಲ್ಲಿ ಭಾಗಿಯಾಗಿದ್ದರು.   

ಕನ್ನಡ ಚಿತ್ರರಂಗದ ಪೈಲ್ವಾನ್ ಕಿಚ್ಚ ಸುದೀಪ್‌ ಪ್ರಶಸ್ತಿ ಕಾರ್ಯಕ್ರಮ ಎಂದು ಕೇಳಿದ್ರೆ ಸಾಕು ಒಂದು ಮೈಲಿ ದೂರ ನಿಲ್ಲುತ್ತಾರೆ ಅಂತದ್ರಲ್ಲಿ ಜೀ ಸಿನಿ ಅವಾರ್ಡ್ಸ್‌ಗೆ ಹೋಗಿರುವುದು ಜನರಿಗೆ ಅಚ್ಚರಿ ಹುಟ್ಟಿಸಿದೆ.

7 ವರ್ಷಗಳ ನಂತರ ಬ್ರೇಕಿಂಗ್ ನ್ಯೂಸ್ ಕೊಟ್ರು ಕಿಚ್ಚ ಸುದೀಪ್!

' ನಾನು ಪ್ರಶಸ್ತಿಗೆ ಬೆಲೆ ಕೊಡುವುದಿಲ್ಲ.  ನಾನು ಯಾವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ. ಇದರಿಂದ ನನಗೆ ಯಾವ ನೋವು ಆಗಿಲ್ಲ. ದೂರ ಇರುವುದರಿಂದ ಬಹಳ ಖುಷಿ ಸಿಕ್ಕಿದೆ ಎಂದು ಹೇಳಿ 15 ವರ್ಷಗಳಿಂದ ದೂರ ಉಳಿದರು.  ಆದರೆ ಜೀ ತಮಿಳು ವಾಹಿನಿಯ 'ಕನ್ನಡ ಚಿತ್ರರಂಗದ ಹೆಮ್ಮೆ' ಎಂಬ ಪ್ರಶಸ್ತಿಯಲ್ಲಿ  ನಯನ ತಾರಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರ ಬಗ್ಗೆ ಸಂತಸವನ್ನು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಕಿಚ್ಚನ ಹೊಸ ಅವತಾರ; ಕೋಟಿಗೊಬ್ಬ-3 ಲುಕ್‌ ಮಸ್ತೈತಿ ನೋಡಿ!

'ಹಲವು ವರ್ಷಗಳ ಬಳಿಕ ಪ್ರಶಸ್ತಿ ಪಡೆಯುತ್ತಿರುವುದು ಒಂದು ವಿಚಿತ್ರ ಅನುಭವ ನೀಡಿದೆ.  ಖುಷಿಯೂ ಆಗಿದೆ. ಜೀವನದಲ್ಲಿ ಪ್ರಶಸ್ತಿಯೇ ಮುಖ್ಯವಲ್ಲ ಎಂದು ಇದ್ದವನು ನಾನು. ಈಗ ಈ ನಿರ್ಧಾರವನ್ನು ನನ್ನ ಸ್ನೇಹಿತನಿಗಾಗಿ ಬದಲಾಯಿಸಿಕೊಂಡಿದ್ದೇನೆ.  ನನ್ನ ಇರುವಿಕೆ ಎಷ್ಟೋ ಜನರಿಗೆ ಸಂತೋಷ ತಂದುಕೊಟ್ಟಿದೆ ' ಎಂದು ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?