ಕಡಲೆಕಾಯಿ ಪರಿಷೆಯಲ್ಲಿ ದುನಿಯಾ ವಿಜಯ್; ಸಲಗ ಚಿತ್ರಕ್ಕೆ ಅದ್ಧೂರಿ ಕ್ಲೈಮ್ಯಾಕ್ಸ್‌!

Published : Dec 09, 2019, 10:42 AM IST
ಕಡಲೆಕಾಯಿ ಪರಿಷೆಯಲ್ಲಿ ದುನಿಯಾ ವಿಜಯ್; ಸಲಗ ಚಿತ್ರಕ್ಕೆ ಅದ್ಧೂರಿ ಕ್ಲೈಮ್ಯಾಕ್ಸ್‌!

ಸಾರಾಂಶ

ಅದು ಬೆಂಗಳೂರಿನ ಬಸವನಗುಡಿಯ ಬುಲ್‌ಟೆಂಪಲ್ ರಸ್ತೆಯಲ್ಲಿ ದೊಡ್ಡ ಗಣಪತಿ ದೇವಸ್ಥಾನ. ಸಾವಿರಾರು ಜನರಿಂದ ಕೂಡಿದ ಜಾತ್ರೆ. ಎಲ್ಲಿ ನೋಡಿದರೂ ಕಡಲೇ ಕಾಯಿ ರಾಶಿ. ಮತ್ತೊಂದು ಕಡೆ ಮಕ್ಕಳ ಆಟ-ಪಾಠ. ಪೊಲೀಸರ ಗುಂಪು. ಎಲ್ಲಿ ಟೆಂಕ್ಷನ್‌ನಲ್ಲಿ ಒಡಾಡುತ್ತಿದ್ದ ನಟ ದುನಿಯಾ ವಿಜಯ್

ಅದು ಬೆಂಗಳೂರಿನ ಬಸವನಗುಡಿಯ ಬುಲ್‌ಟೆಂಪಲ್ ರಸ್ತೆಯಲ್ಲಿ ದೊಡ್ಡ ಗಣಪತಿ ದೇವಸ್ಥಾನ. ಸಾವಿರಾರು ಜನರಿಂದ ಕೂಡಿದ ಜಾತ್ರೆ. ಎಲ್ಲಿ ನೋಡಿದರೂ ಕಡಲೇ ಕಾಯಿ ರಾಶಿ. ಮತ್ತೊಂದು ಕಡೆ ಮಕ್ಕಳ ಆಟ-ಪಾಠ. ಪೊಲೀಸರ ಗುಂಪು. ಎಲ್ಲಿ ಟೆಂಕ್ಷನ್‌ನಲ್ಲಿ ಒಡಾಡುತ್ತಿದ್ದ ನಟ ದುನಿಯಾ ವಿಜಯ್. 

ಮತ್ತೆ ಲಾಂಗ್ ಹಿಡಿದ ದುನಿಯಾ ವಿಜಯ್!

ಅವರನ್ನೇ ಫಾಲೋ ಮಾಡುತ್ತಿದ್ದ ಒಂದಿಷ್ಟು ಗ್ಯಾಂಗ್.ತಮಗೆ ತಾವೇ ಆ್ಯಕ್ಷನ್ ಹೇಳಿಕೊಂಡು ಫೀಲ್ಡಿಗಿಳಿದ ನಟ ವಿಜಯ್, ಕೈಯಲ್ಲಿ ಲಾಂಗು. ಅವರನ್ನು ಸುತ್ತುವರಿದವರ ಕೈಯಲ್ಲೂ ಲಾಂಗು. ಅಲರ್ಟ್ ಆದ ಪೊಲೀಸರ ಕಣ್ಣು ತಪ್ಪಿಸಿ ಕಡಲೆಕಾಯಿ ರಾಶಿಗಳ ನಡುವೆ ಗ್ಯಾಂಗ್‌ನ ಕಾಳಗ. ಇದಕ್ಕೂ ಮುನ್ನ ಒಂದಿಷ್ಟು ಹೋಮ- ಹವನ. ಜತೆಗೆ ಸಣ್ಣಗೆ ತೊಟ್ಟುಕ್ಕುತ್ತಿದ್ದ ಮಳೆ ಹನಿಗಳು.

ಅದ್ಧೂರಿ ವೆಚ್ಚದಲ್ಲಿ ಸಲಗ ಕ್ಲೈಮ್ಯಾಕ್ಸ್‌ ಚಿತ್ರೀಕರಣ!

- ಹೀಗೆ ಕಡಲೆಕಾಯಿ ಜಾತ್ರೆಯಲ್ಲಿ ಫೈಟ್‌ಗಿಳಿದಿದ್ದು ‘ಸಲಗ’ ಚಿತ್ರತಂಡ. 50 ಸಾವಿರಕ್ಕೂ ಹೆಚ್ಚು ಮಂದಿಯ ನಡುವೆ ಜೂನಿಯರ್ ಕಲಾವಿದರನ್ನು ಇಟ್ಟುಕೊಂಡು
ಸತತವಾಗಿ ಒಂದು ವಾರ ಕೇವಲ ರಾತ್ರಿ ಹೊತ್ತಿನಲ್ಲೇ ಸಲಗ ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕ ಕಂ ಚಿತ್ರದ ನಾಯಕ ದುನಿಯಾ
ವಿಜಯ್. 

ರಾತ್ರಿ 8 ಗಂಟೆಗೆ ಆರಂಭವಾಗುತ್ತಿದ್ದ ಚಿತ್ರೀಕರಣ ಬೆಳಗ್ಗಿನ ಜಾವ 5 ಗಂಟೆವರೆಗೂ ನಡೆಯುತ್ತಿತ್ತು. ಕನ್ನಡದಲ್ಲಿ ರಾತ್ರಿ ಹೊತ್ತಿನಲ್ಲೇ ಹತ್ತು ದಿನಗಳ ಕಾಲ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿಕೊಂಡ ಸಿನಿಮಾ ‘ಸಲಗ’ನಿಗೆ ಕೆ ಪಿ ಶ್ರೀಕಾಂತ್ ನಿರ್ಮಾಪಕರು. ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಚಿತ್ರ. ಜತೆಗೆ ಡಾಲಿ ಧನಂಜಯ್ ಅವರ ನಟನೆ. ಸಂಜನಾ ಆನಂದ್ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?