ಇದೇನಪ್ಪಾ ಡಿಂಪಲ್‌ ಹುಡುಗಿ ಈಗ ಟಾಲಿವುಡ್‌ ಬೆಡಗಿ; ಯಾರಿರ್ತಾರೆ ಸ್ಯಾಂಡಲ್‌ವುಡ್‌ನಲ್ಲಿ?

By Suvarna News  |  First Published Dec 9, 2019, 10:12 AM IST

ಕನ್ನಡದ ಒನ್‌ ಆ್ಯಂಡ್‌ ಓನ್ಲಿ ಡಿಂಪಲ್ ಹುಡ್ಗಿ 'ಸೂಪರ್ ಮಚ್ಚಿ' ಚಿತ್ರದ ಮೂಲಕ ಟಾಲಿವುಡ್‌ ಹಾರುವುದು ಕನ್‌ಫರ್ಮ್‌ ಎಂದಿದ್ದಾರೆ. 


'ಬುಲ್ ಬುಲ್' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಡಿಂಪಲ್ ಹುಡುಗಿ ಬಿಂದ್ಯಾ ರಾಮ್ ಅಲಿಯಾಸ್ ರಚಿತಾ ರಾಮ್‌ ಈಗ ಸ್ಯಾಂಡಲ್‌ವುಡ್ ಸಾಕು ಎಂದು ಟಾಲಿವುಡ್‌ಗೆ ಹಾರಲು ರೆಡಿಯಾಗಿದ್ದಾರೆ. 

Tap to resize

Latest Videos

undefined

ಕೆಲ ದಿನಗಳಿಂದ ರಚಿತಾ ಟಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿ ಕೊಡುವ ವಿಚಾರದ ಬಗ್ಗೆ ಗುಸುಗುಸು ಕೇಳಿ ಬರುತ್ತಿದ್ದು  ಪ್ರೀತಿಯ ಅಕ್ಕನ ಮದುವೆ ನಂತರ ಹರಿದಾಡುತ್ತಿದ್ದ ಮಾತುಗಳಿಗೆ ಬ್ರೇಕ್ ಹಾಕಿದ್ದಾರೆ. ಸುಮಾರು 15 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಮಿಂಚಿರುವ ರಚಿತಾ ಪುಲಿ ವಾಸು ನಿರ್ಮಾಣದ 'ಸೂಪರ್ ಮಚ್ಚಿ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಡುವುದರ ಬಗ್ಗೆ ಕನ್‌ಫರ್ಮ್‌ ಮಾಡಿದ್ದಾರೆ.

'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'

'ವಿಜೇಥಾ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಮೇಗಸ್ಟಾರ್ ಚಿರಂಜೀವಿ ಕಿರಿಯ ಅಳಿಯ ಕಲ್ಯಾಣ ಯಶಸ್ಸು ಕಾಣದ ಕಾರಣ ಚಿತ್ರರಂಗದಿಂದ ಕೊಂಚ ಬ್ರೇಕ್‌ ತೆಗದುಕೊಂಡು ಈಗ ಮಾಸ್ಟರ್ ಪ್ಲ್ಯಾನ್ ಮೂಲಕ ಪುಲಿ ವಾಸು ಜೊತೆ ಕೈ ಜೋಡಿಸಿದ್ದಾರೆ. 'ಟಾಲಿವುಡ್‌ ಚಿತ್ರದಲ್ಲಿ ನಾನು ನಟಿಸುತ್ತಿರುವುದು ಕನ್‌ಫರ್ಮ್‌. ನಾನು ತುಂಬಾ ಎಕ್ಸೈಟ್‌ ಆಗಿದ್ದೀನಿ. ಇದಕ್ಕೆ ಚಿರಂಜೀವಿ ಅಳಿಯ ನಟ. ಹೈದರಾಬಾದ್‌ನಲ್ಲಿ ಶೂಟಿಂಗ್ ಶುರುವಾಗಲಿದೆ ನಾನು ಅಲ್ಲಿಗೆ ಹೋಗಬೇಕಿದೆ' ಎಂದು ಖಾಸಗಿ ವೆಬ್‌ಸೈಟ್‌ಗೆ ಮಾಹಿತಿ ನೀಡಿದ್ದಾರೆ.

click me!