
ಸ್ಯಾಂಡಲ್‌ವುಡ್ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಇಂದು 3ನೇ ವರ್ಷದ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದು ರಾಧಿಕಾ ಪಂಡಿತ್ ತಮ್ಮ ಹಳೆಯ ಫೋಟೋ ಶೇರ್ ಮಾಡಿ ಪತಿಗೆ ವಿಶ್ ಮಾಡಿದ್ದಾರೆ. ಈ ಪೋಟೋವನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಾಣದ 'ಲಕ್ಕಿ' ಚಿತ್ರದ ಸಮಯದಲ್ಲಿ ತೆಗೆದಿರುವುದು ಅನಿಸುತ್ತದೆ.
ರಾಕಿಂಗ್ ಪ್ರಿನ್ಸಸ್ Ayra 'ಕ್ಯಾಂಡಿ' ಥೀಮ್ ಬರ್ತಡೇ ಫೋಟೋಗಳಿವು!
''ನಾನು ತುಂಬಾ ಹಳೆ ಫೋಟೋ ಶೇರ್ ಮಾಡಿದ್ದೀನಿ. ಇದರ ಅರ್ಥ ನಮ್ಮದು ಕೇವಲ 3 ವರ್ಷದ ಮದುವೆ ಅಲ್ಲ. ಎಷ್ಟೋ ವರ್ಷದ ಸಂಬಂಧ ಎಂದು. ಹ್ಯಾಪಿ ಆ್ಯನಿವರ್ಸರಿ ಮೈ ಸೋಲ್ ಮೇಟ್ ( ಫೋಟೋ ಕ್ಲಾರಿಟಿ ಬಗ್ಗೆ ಕ್ಷಮಿಸಿ) ಎಂದು ಬರೆದುಕೊಂಡು ವಿಶ್ ಮಾಡಿದ್ದಾರೆ.
ಇವರಿಬ್ಬರ ಲವ್ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್. 'ಮೊಗ್ಗಿನ ಮನಸು'ನಿಂದ ಅರಳಿದ ಪ್ರೀತಿ 'ಸಂತು ಸ್ಟ್ರೇಟ್ ಫಾರ್ವರ್ಡ್' ವರೆಗೂ ಹಿಟ್ ಆಗಿತ್ತು. ಡಿಸೆಂಬರ್ 9, 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಾಗೂ ಡಿಸೆಂಬರ್ 2, 2018 ರಲ್ಲಿ ಲಿಟಲ್ ಏಂಜಲ್ ಐರಾಳನ್ನು ಬರ ಮಾಡಿಕೊಂಡರು. ಅಷ್ಟೇ ಅಲ್ಲದೆ ಅಕ್ಟೋಬರ್ 30 ರಂದು ಜೂನಿಯರ್ ರಾಕಿ ಬಾಯ್‌ನ ಬರ ಮಾಡಿಕೊಂಡರು.
ರಾಧಿಕಾ ಎರಡನೇ ಬೇಬಿ ಶವರ್; ಐರಾ ಕಾಣಿಸಿಕೊಂಡಿದ್ದು ಹೀಗೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.