
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಜೈಲು ಸೇರಿದ್ದರು. ಜೈಲು ವಾಸದಲ್ಲಿ ದರ್ಶನ್‌ಗೆ ತೀವ್ರ ಬೆನ್ನು ನೋವು ಶುರುವಾಗಿದೆ. ವೈದ್ಯರ ವರದಿ ಪ್ರಕಾರ ತಕ್ಷಣವೇ ಚಿಕಿತ್ಸೆ ಅಗತ್ಯವಿದ್ದ ಕಾರಣ 6 ವಾರಗಳ ಮಧ್ಯಂತರ ಜಾಮೀನು ಪಡೆದು ದರ್ಶನ್ ಹೊರ ಬಂದಿದ್ದಾರೆ. ದರ್ಶನ್ ಹೊರ ಬಂದಿರುವ ಸಂಭ್ರಮದಲ್ಲಿ ಅಭಿಮಾನಿಗಳು ಮತ್ತು ಸ್ನೇಹಿತರು ಈ ವರ್ಷ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ದರ್ಶನ್ ಆಪ್ತ ಸ್ನೇಹಿತ ತರುಣ್ ಸುಧೀರ್ ಈ ಸಮಯದಲ್ಲಿ ವಿಜಯಲಕ್ಷ್ಮಿ ಬಾಬಿ ಸಪೋರ್ಟ್ ಮೆಚ್ಚಿದ್ದಾರೆ.
'ನಿಜವಾಗಲೂ ವಿಜಯಲಕ್ಷ್ಮಿ ಅವರು ವಾರಿಯರ್, ರಿಯಲ್ ಫೈಟರ್ ಅಂತಲೇ ಹೇಳಬೇಕು. ಇಷ್ಟೋಂದು ಲೋಡ್ ಪ್ರೆಶರ್ ತೆಗೆದುಕೊಂಡು ದರ್ಶನ್ ಸರ್ ಪರವಾಗಿ ನಿಂತಿದ್ದಾರೆ. ಒಬ್ಬರ ನಿಂತು ಫೈಟ್ ಮಾಡುತ್ತಿರುವುದು ನೋಡಿ ಖುಷಿ ಆಯ್ತು. ನನ್ನ ಮದುವೆಯ ಕಾರ್ಡ್ ಕೊಡಲು ಹೋದಾಗ ವಿಜಯ್ ಲಕ್ಷ್ಮಿ ಅತ್ತಿಗೆ ಒಂದೇ ಮಾತು ಹೇಳಿದ್ದು 'ತರುಣ್ ಹೊರಗಡೆ ಜನರ ಈ ರೀತಿ ಮಾತನಾಡುತ್ತಾರೆ ಹೀಗೆ ಹೇಳುತ್ತಾರೆ ಎಂದು ನಾನು ಮಾಡುತ್ತಿಲ್ಲ ಇದು ನನ್ನ ಕರ್ತವ್ಯ ನನಗೋಸ್ಕರ ಮಾಡುತ್ತೀನಿ. ನನ್ನ ಗಂಡನನ್ನು ಬಿಡಿಸಿಕೊಂಡು ಬರಲು ಎಷ್ಟು ಕಷ್ಟ ಆಗಲಿ ಏನೇ ಎದುರಾಗಲಿ ನಾನು ಫೈಟ್ ಮಾಡುತ್ತೀನಿ. ಯಾರ ಸಪೋರ್ಟ್ ಇರಲಿ ಇಲ್ಲದೆ ಇರಲಿ ಇದು ನನ್ನ ಕರ್ತವ್ಯ ನಾನು ಹೋರಾಟ ಮಾಡುತ್ತೀನಿ' ಎಂದಿದ್ದಾರೆ. ಇದರಲ್ಲಿ ಗೆಲ್ಲಬೇಕು ಎಂದು ಮಾನಸಿಕವಾಗಿ ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದಾರೆ ಹೀಗಾಗಿ ಬಿಗ್ ಸೆಲ್ಯೂಟ್ ವಿಜಿ ಬಾಬಿಗೆ' ಎಂದು ತರುಣ್ ಸುಧೀರ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮಗಳ ಜೊತೆ ದೀಪಾವಳಿ ಫೋಟೋಶೂಟ್ ಮಾಡಿದ ಅದಿತಿ ಪ್ರಭುದೇವ; ಮತ್ತೊಂದು ಗುಡ್
'ಕೆಲವೊಂದು ಪರಿಸ್ಥಿತಿಗಳು ಕೆಲವೊಂದು ಟೆಂಪರ್‌ಮೆಂಟ್‌ಗಳಿಂದ ಕೆಲವೊಂದು ಸಂದರ್ಭಗಳಲ್ಲಿ ಏನಾಗುತ್ತದೆ ಎಂದು ಗೊತ್ತಿರುವುದಿಲ್ಲ. ಅವರ ಪಾಯಿಂಟ್ ಆಫ್ ವ್ಯೂನಲ್ಲಿ ನೋಡಿದಾಗ ಮಾತ್ರ ನಮಗೆ ಅರ್ಥ ಆಗುವುದು, ಅವರಿಗೆ ಇರುವ ಪ್ರೆಶರ್ ಅವರಿಗೆ ಎದುರಾಗಿರುವ ಸಮಸ್ಯೆಗಳು ಮತ್ತು ಅವರ ಸುತ್ತ ಹೇಗಿದೆ ಮುಖ್ಯವಾಗುತ್ತದೆ. ಯಾವುದೋ ವಿಚಾರಕ್ಕೆ ದರ್ಶನ್ ಸರ್ ರಿಯಾಕ್ಟ್ ಮಾಡಿರುತ್ತಾರೆ ಅಂದ್ರೆ ಅದರ ಹಿಂದೆ ತುಂಬಾ ದೊಡ್ಡದು ಏನೋ ನಡೆದಿರುತ್ತದೆ...ಯಾರಿಗೋ ಬೈಯಬೇಕು ಏನೋ ಆಗಿರುತ್ತದೆ. ಮನುಷ್ಯ ಅಂದ ಮೇಲೆ ಸಣ್ಣ ಪುಟ್ಟ ತಪ್ಪುಗಳು ಆಗಿರುತ್ತದೆ. ಹಾಗೆನೆ ದರ್ಶನ್ ಸರ್ ಮಾಡಿರುವಂತ ಒಳ್ಳೆ ಕೆಲಸಗಳು ಮತ್ತು ಒಳ್ಳೆ ಕಾರ್ಯಗಳನ್ನು ಗಮನದಲ್ಲಿ ಇಟ್ಟಿಕೊಳ್ಳಬೇಕು. ದರ್ಶನ್ ಸರ್ ಬಂದಿರುವ ಹಾದಿಯಲ್ಲಿ ಯಾವುದನ್ನು ಸರಿ ಮಾಡಿಕೊಳ್ಳಬೇಕು ಯಾವುದು ತಪ್ಪು ಹೇಗಿರಬೇಕು ಎಂದು ಪ್ರತಿಯೊಂದನ್ನು ತಿಳಿದುಕೊಂಡಿರುತ್ತಾರೆ' ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಜನರಿಗೆ ಕನೆಕ್ಟ್ ಆಗುವುದಿಲ್ಲ ಎಂದು ತಂದೆ ಕೊಟ್ಟ ಹೆಸರನ್ನು ತೆಗೆದುಬಿಡಿ ಎಂದುಬಿಟ್ಟ ನಿರ್ದೇಶಕರು:ರಘು
'ಮುಖ್ಯವಾಗಿ ದರ್ಶನ್ ಸರ್ ಆರೋಗ್ಯ ಮುಖ್ಯ. ಅವರಿಗೆ ಆರೋಗ್ಯ ಸಿವಿಯರ್ ಆಗಿ ಎಂದು ರಿಪೋರ್ಟ್ ಬಂದಿದೆ. ಹೀಗಾಗಿ ಚಿಕಿತ್ಸೆ ಪಡೆದು ಜನರನ್ನು ಭೇಟಿ ಮಾಡಲು ರೆಡಿಯಾಗಿದ್ದೀನಿ ಎಂದು ಹೇಳಿದಾಗ ನಾನೇ ಮೊದಲು ಅವರನ್ನು ಭೇಟಿ ಮಾಡಲು ಹೋಗುವುದು' ಎಂದಿದ್ದಾರೆ ತರುಣ್ ಸುಧೀರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.