ದರ್ಶನ್ಗೆ ಕಾಡ್ತಿರೋ ಆರೋಗ್ಯ ಸಮಸ್ಯೆ ಒಂದಲ್ಲ.. ಎರಡಲ್ಲ. ಒಗ್ಗದ ಜೈಲೂಟ.. ಬೆನ್ನು ನೋವಿನ ಕಾಟ.. ರಾತ್ರಿಯೆಲ್ಲಾ ನಿದ್ದೆಯಿಲ್ಲ..!
ತೆರೆ ಮೇಲೆ ಆರಡಿ ಐರಾವತನಂತೆ ಮಿಂಚುತ್ತಿದ್ದ ದರ್ಶನ್ ಜೈಲು ಸೇರಿದ ಮೇಲೆ ದೈಹಿಕ, ಮಾನಸಿಕ ಸಮಸ್ಯೆಗಳಿಂದ ಕುಗ್ಗಿ ಹೋಗಿದ್ದಾರೆ. ಅದರಲ್ಲೂ ಬೆನ್ನು ನೋವು ದರ್ಶನ್ಗೆ ಅದ್ಯಾಪರಿ ಕಾಟ ಕೊಡುತ್ತಿದೆ ಅಂದ್ರೆ ಒಂದು ಸಣ್ಣ ಹ್ಯಾಂಡ್ಬ್ಯಾಗ್ ಎತ್ತೋದಕ್ಕೂ ದರ್ಶನ್ ಪರದಾಡ್ತಾ ಇದ್ದಾರೆ. ಅಷ್ಟಕ್ಕೂ ದರ್ಶನ್ಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು ಒಂದೆರಲ್ಲ. ಜೈಲು ಸೇರಿದ ಮೇಲೆ ಹಳೆಯ ಗಾಯಗಳೆಲ್ಲಾ ಹೊರಬಂದು ದರ್ಶನ್ಗೆ ನರಕ ದರ್ಶನ ಮಾಡಿಸುತ್ತಿದೆ.
ಯೆಸ್! ಬಳ್ಳಾರಿ ಜೈಲಲ್ಲಿ ದರ್ಶನ್ ಪಾಡು ನೋಡೋದಕ್ಕೆ ಆಗ್ತಾ ಇಲ್ಲ. ನಡೆಯೋದಕ್ಕೂ ಆಗದೇ, ಸಣ್ಣದೊಂದು ಹ್ಯಾಂಡ್ ಬ್ಯಾಗ್ ಎತ್ತೋದಕ್ಕೂ ಕಷ್ಟ ಪಡ್ತಾ ಇರೋ ದರ್ಶನ್ ಸ್ಥಿತಿ ಕಂಡು ಫ್ಯಾನ್ಸ್ ಕಣ್ಣೀರು ಸುರಿಸ್ತಾ ಇದ್ದಾರೆ. ಹೇಗಿದ್ದ ದಾಸ ಹೀಗ್ಯಾಕಾದ ಅಂತ ಮರುಕ ಪಡ್ತಾ ಇದ್ದಾರೆ. ಅಸಲಿಗೆ ದರ್ಶನ್ ಹೈಟು, ವೇಟು, ಪರ್ಸನಾಲಿಸಿಟಿ ಅಪ್ಪಟ ಅಕ್ಷನ್ ಹೀರೋ ಆಗೋದಕ್ಕೆ ಹೇಳಿ ಮಾಡಿಸಿದಂಥದ್ದು. ಆರಡಿ ದರ್ಶನ್ ಬಿಗ್ ಸ್ಕ್ರೀನ್ ಮೇಲೆ ನಡೆದು ಬರ್ತಾ ಇದ್ರೆ ಅಕ್ಷರಶಃ ಐರಾವತ. ದರ್ಶನ್ ಗದೆಯೆತ್ತಿ ದುರ್ಯೋಧನನ ವೇಷದಲ್ಲಿ ಬರ್ತಾ ಇದ್ರೆ ಸಾಹೋರೇ ಸಾಹೋ ಅಂತ ಹಾಡೋದೇ ಬೇಕಿಲ್ಲ. ದರ್ಶನ್ ಎದುರಾಳಿ ವಿಲನ್ಗಳನ್ನು ಎತ್ತೆತ್ತಿ ಬೀಸಾಕ್ತಾ ಇದ್ರೆ ಅದು ಸಿನಿಮೀಯ ರೀತಿ ಅನ್ನಿಸೋದಿಲ್ಲ. ಆತನ ಹೈಟು, ಪರ್ಸನಾಲಿಟಿ ಎದುರು ಎಂಥಾ ವಿಲನ್ ಇದ್ರೂ ಸಪ್ಪೆ ಸಪ್ಪೆ.
undefined
ಆಟ, ಗಲಾಟೆ ಮಧ್ಯೆ ಹನುಮಂತನ ತುಂಟಾಟ; ‘ಒಂದೇ ವಾರಕ್ಕೆ ತಲೆ ಆಫ್ ಆಗೈತ್ರಿ’ ಅಂದಿದ್ದೇಕೆ?
ಆದ್ರೆ ಇಂಥಾ ದರ್ಶನ್ ಇವತ್ತು ಹೇಗ್ ಆಗಿದ್ದಾರೆ ಆಂದರೆ ಗದೆ ಎತ್ತೋದಿರಲಿ ತಮ್ಮದೇ ಬಟ್ಟೆ ಬರೆಗಳಿರೋ ಎರಡೇ ಎರಡು ಬ್ಯಾಗ್ ಎತ್ತೋಕೆ ಪರದಾಡ್ತಾ ಇದ್ದಾರೆ. ಜೈಲುವಾಸ ದರ್ಶನ್ನ ಹಿಂಡಿ ಹಿಪ್ಪೆ ಮಾಡಿದೆ. ಅಷ್ಟೇ ಅಲ್ಲ ದೇಹದಲ್ಲಿರೋ ಹಲವು ಆರೋಗ್ಯ ಸಮಸ್ಯೆಗಳು ಹೊರಬಂದು ನರಕ ದರ್ಶನ ಮಾಡಿಸ್ತಾ ಇವೆ. ಹೌದು ದರ್ಶನ್ಗೆ ಜಸ್ಟ್ ಬೆನ್ನು ನೋವು ಮಾತ್ರ ಅಲ್ಲ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿವೆ. ಹಿಂದೆ ಮಾಡಿಕೊಂಡ ಎಡವಟ್ಟುಗಳು, ತಿಂದ ಪೆಟ್ಟುಗಳು ಈಗ ಬಿಟ್ಟೂ ಬಿಡದೇ ಭಾದೆ ಕೊಡ್ತಾ ಇವೆ. ಅಸಲಿಗೆ 2013ರಲ್ಲಿ ಬೃಂದಾವನ ಸಿನಿಮಾದ ಚಿತ್ರೀಕರಣ ಮಾಡೋ ವೇಳೆ ದರ್ಶನ್ ಕುದುರೆ ಸವಾರಿ ಮಾಡೋವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದರು. ಆ ರಭಸಕ್ಕೆ ದರ್ಶನ್ ಬೆನ್ನು ಮೂಳೆ ಮುರಿದಿತ್ತು. ಅದೇ ನೋವು ಈಗಲೂ ದರ್ಶನ್ನ ಕಾಡ್ತಾ ಇದೆ.
ಅಮಾಯಕ ಹನುಮಂತಣ್ಣನ ಬಣ್ಣ ಬಯಲು ಮಾಡಿದ ಯೋಗರಾಜ್ ಭಟ್; ಏನಿದು ಸೈಲೆಂಟ್ ಪ್ಲ್ಯಾನ್?
ಸಂಗೊಳ್ಳಿ ರಾಯಣ್ಣ ಶೂಟಿಂಗ್ ವೇಳೆಯೂ ದರ್ಶನ್ ಕುದುರೆ ಸವಾರಿಯಿಂದ ಪೆಟ್ಟು ಮಾಡಿಕೊಂಡಿದ್ದರು. ಇನ್ನೂ ಮಿ.ಐರಾವತ ಶೂಟಿಂಗ್ ವೇಳೆ ಜಿಮ್ ಮಾಡೋ ಸಮಯದಲ್ಲಿ ದರ್ಶನ್ ಕೈ ಮೂಳೆ ಮುರಿದಿತ್ತು. ಇತ್ತೀಚಿಗೆ ಡೆವಿಲ್ ಸಿನಿಮಾದ ಫೈಟಿಂಗ್ ಸಮಯದಲ್ಲೂ ದರ್ಶನ್ ಎಡಗೈ ಮೂಳೆ ಮುರಿದಿತ್ತು. ತೆರೆ ಮೇಲೆ ಆಕ್ಷನ್ ಸೀನ್ಸ್ ಮಾಡೋ ನಟರಿಗೆ ಇಂಥಾ ಏಟುಗಳು ಸಾಮಾನ್ಯ. ಅಂತೆಯೇ ದರ್ಶನ್ ಮೈಯಲ್ಲಿರೋ ಅದೆಷ್ಟು ಮೂಳೆಗಳು ಮುರಿದು ವಾಪಾಸ್ ಕೂಡಿಕೊಂಡಿವೆಯೋ ಲೆಕ್ಕವೇ ಇಲ್ಲ. ಇನ್ನೂ 2018ರಲ್ಲಿ ಮೈಸೂರಿನಲ್ಲಿ ಓವರ್ ಸ್ಪೀಡ್ನಲ್ಲಿ ಕಾರ್ ಓಡಿಸ್ತಾ ಇದ್ದ ದರ್ಶನ್, ಡಿವೈಡರ್‌ಗೆ ಗುದ್ದಿ ಕೈ ಮುರಿದುಕೊಂಡಿದ್ದರು. ಆಗಲೂ ದರ್ಶನ್ಗೆ ತೀವ್ರ ಪೆಟ್ಟಾಗಿತ್ತು. ಈ ಕೈ ಫ್ಯಾಕ್ಚರ್ ಕೂಡ ದರ್ಶನ್ ಗೆ ಪದೇ ಪದೇ ನೋವು ಕೊಡ್ತಾ ಇದೆ.
ದರ್ಶನ್ಗೆ ಮೊದಲಿಂದಲೂ ಜೈಲೂಟ ಸೆಟ್ ಆಗ್ತಾ ಇಲ್ಲ. ಹೊರಗೆ ದುಬಾರಿ ಹೊಟೆಲ್ಗಳಲ್ಲಿ ತುಂಡು, ಗುಂಡು ಸವೀತಾ ಮೋಜು ಮಾಡಿಕೊಂಡಿದ್ದ ಸ್ಟಾರ್ ನಟನಿಗೆ ಜೈಲೂಟ ಹೇಗೆ ತಾನೇ ಸೇರಲಿಕ್ಕೆ ಸಾಧ್ಯ. ಅಂತೆಯೇ ದರ್ಶನ್ ತನಗೆ ಮನೆಯೂಟಕ್ಕೆ ಅವಕಾಶ ಕೊಡಿ ಅಂತ ಕೋರ್ಟ್ ಮುಂದೆ ಅಂಗಲಾಚಿದ್ರು. ಆದ್ರೆ ಕೋರ್ಟ್ ಅದಕ್ಕೆ ಅವಕಾಶ ಕೊಟ್ಟಿಲ್ಲ. ಪರಪ್ಪನ ಅಗ್ರಹಾರದಲ್ಲಿ ತನ್ನ ಪ್ರಭಾವ ಬಳಸಿ ಹೇಗೋ ಒಳ್ಳೆ ಊಟದ ವ್ಯವಸ್ಥೆ ಮಾಡಿಕೊಂಡಿದ್ದ ದರ್ಶನ್ಗೆ ಬಳ್ಳಾರಿ ಜೈಲಿನಲ್ಲಿ ಅಂಥಾ ಯಾವ ಅವಕಾಶವೂ ಇಲ್ಲ. ಬಳ್ಳಾರಿ ಸೀಮೆಯ ಊಟವಂತೂ ದರ್ಶನ್ಗೆ ಸುತಾರಾಂ ಸೇರ್ತಾ ಇಲ್ಲ. ಸೋ ಕಷ್ಟಪಟ್ಟು ಸೇರಿದಷ್ಟು ಊಟ ಸೇವಿಸ್ತಾ ಇದ್ದಾರೆ ದರ್ಶನ್.
ಒಂದು ಕಡೆ ಹೊಟ್ಟೆ ತುಂಬಾ ಊಟ ಇಲ್ಲ. ಇನ್ನೊಂದು ಕಡೆ ಬೆನ್ನು ನೋವು ದರ್ಶನ್ಗೆ ಬಾಧೆ ಕೊಡ್ತಾ ಇದೆ. ಮೆಡಿಕಲ್ ಬೆಡ್ ಕೊಟ್ಟಿದ್ದಾರಾದ್ರೂ ಅದರಿಂದ ನೋವು ಕಮ್ಮಿ ಆಗ್ತಾ ಇಲ್ಲ. ಪೇನ್ ಕಿಲ್ಲರ್ ಮಾತ್ರೆಗಳು ಕೆಲಸ ಮಾಡ್ತಾ ಇಲ್ಲ. ರಾತ್ರಿಯಿಡಿ ಕಣ್ಣು ಮುಚ್ಚೋದಕ್ಕೆ ಆಗ್ತಾ ಇಲ್ಲ. ಸೋ ಜೈಲು ಅಕ್ಷರಶಃ ನರಕದಂತೆ ಭಾಸವಾಗ್ತಾ ಇದೆ. ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ಮಾಡಿದ ತಪ್ಪಿಗೆ ದರ್ಶನ್ಗೆ ಬದುಕಿದ್ದಾಗಲೇ ನರಕ ದರ್ಶನವಾಗ್ತಾ ಇದೆ.