ಸಿನಿಮಾದಲ್ಲಿ ಚಾನ್ಸ್​ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ: ಸ್ಯಾಂಡಲ್​ವುಡ್​ ನಟನ ವಿರುದ್ಧ ಯುವತಿ ದೂರು

By Suvarna News  |  First Published Feb 19, 2024, 6:16 PM IST

ಸಿನಿಮಾದಲ್ಲಿ ಚಾನ್ಸ್​ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡುತ್ತಿರುವ ಸ್ಯಾಂಡಲ್​ವುಡ್​ ನಟನ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ.
 


ನೀನು ನೋಡಲು ಚೆನ್ನಾಗಿದ್ದೀಯಾ, ಸಿನಿಮಾ ನಾಯಕಿ ಆಗಬಹುದು. ನಿನಗೆ ಹೀರೊಯಿನ್ ಚಾನ್ಸ್ ಕೊಡಿಸುತ್ತೇನೆ ಎಂದು ಯಾಮಾರಿಸಿ,  ಯುವತಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಸ್ಯಾಂಡಲ್‌ವುಡ್ ನಟನ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ನಟ ಸಂತೋಷ್ ವಿರುದ್ಧ ಯುವತಿಯೊಬ್ಬರು ಮಾಡಿರುವ ಆರೋಪ ಇದಾಗಿದೆ. ಸಿನಿಮಾದಲ್ಲಿ ಚಾನ್ಸ್​ ಕೊಡಿಸುವುದಾಗಿ ನಂಬಿಸಿ  ಮೈಸೂರು, ಗೋವಾಗೆ ಕರೆದೊಯ್ದು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ತಮ್ಮಿಬ್ಬರ ಖಾಸಗಿ ಕ್ಷಣಗಳನ್ನು ಫೋನ್‌ನಲ್ಲಿ ಸೆರೆಹಿಡಿದುಕೊಂಡಿದ್ದಾನೆ ಎಂದು ಯುವತಿ ಸಂತೋಷ್​ ವಿರುದ್ಧ ಆರೋಪಿಸಿದ್ದಾರೆ. ಇದೀಗ ನಟನ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.  

ರಾಯಚೂರು ಮೂಲದ   ಯುವತಿ ಕುಟುಂಬಸ್ಥರ ಜೊತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಯುವತಿಗೆ ಸಿನಿಮಾದಲ್ಲಿ ನಟಿಸುವ ಆಸೆ ಕೂಡ ಇದ್ದುದನ್ನೇ ಬಂಡವಾಳ ಮಾಡಿಕೊಂಡಿರುವುದಾಗಿ ಯುವತಿ ಹೇಳಿದ್ದಾರೆ. 5 ವರ್ಷಗಳ ಹಿಂದೆ ತಮಗೆ ಈತನ ಪರಿಚಯವಾಗಿತ್ತು. ತಾನು ಸಿನಿಮಾ ನಟ ಎಂದು ಹೇಳಿರುವ ಆತ, ನನಗೂ ಚಾನ್ಸ್​ ಕೊಡುವುದಾಗಿ ಹೇಳಿ ಹತ್ತಿರವಾಗಿದ್ದ. ನಂತರ ಪ್ರೀತಿ ಮಾಡುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ, ನಂತರ ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದಾನೆ ಎಂದಿದ್ದಾರೆ.

Tap to resize

Latest Videos

ಕಾಲು ಮುಟ್ಟಿದ್ದ, ಬೆನ್ನು ಉಜ್ಜಲು ಕರೆದಿದ್ದ ಎಂದು ಆರೋಪಿಸಿರುವ ರಾಧಿಕಾ ಆಪ್ಟೆ ಸಿನಿ ಇಂಡಸ್ಟ್ರಿ ಕುರಿತು ಹೇಳಿದ್ದೇನು?
 
  ಇದೀಗ ವಿಡಿಯೋ ತೋರಿಸಿ ಆತ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾನೆ. ಆತ ಮೋಸ ಮಾಡಿದ ವಿಷಯ ತಿಳಿಯುತ್ತಲೇ ಆತನಿಗೆ ಪ್ರಶ್ನೆ ಮಾಡಿದಾಗ  ವಿಷಯ ಯಾರಿಗಾದ್ರೂ ಹೇಳಿದ್ರೆ ನಿನ್ನ ಫೋಟೋ, ವಿಡಿಯೋವನ್ನು ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲದೇ ನನ್ನ ಬಳಿಯಿದ್ದ ಹಣ, ಒಡವೆಗಳನ್ನೆಲ್ಲಾ ಕಿತ್ತುಕೊಂಡು ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಯುವತಿ ದೂರಿದ್ದಾರೆ. ಅಂದಹಾಗೆ ಯುವತಿ  6 ತಿಂಗಳ ಹಿಂದೆಯೂ ದೂರು ನೀಡಿದ್ದರು. ಆದರೆ ಇದುವರೆಗೆ ಏನೂ ಕ್ರಮ ತೆಗೆದುಕೊಂಡಿರಲಿಲ್ಲ ಎನ್ನುವುದು ಆರೋಪ. ಈಗ  ಮತ್ತೆ ಹಲ್ಲೆ ಮಾಡಿರುವ ಕಾರಣ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನನ್ನ ಮೇಲೆ ಹಲ್ಲೆ ಮಾಡುತ್ತಿರುವುದು ಮಾತ್ರವಲ್ಲದೇ, ಆತ  ಮನೆ ಬಳಿ‌ ಹೋಗಿ "ನಾನು ಕರೆದಾಗ ನೀನು ಬರಬೇಕು, ಇಲ್ಲದಿದ್ದರೆ ನಿನ್ನೊಟ್ಟಿನ ಖಾಸಗಿ ಫೋಟೊ, ವಿಡಿಯೋಗಳನ್ನ ವೈರಲ್ ಮಾಡುತ್ತೇನೆ, ನಿನ್ನ ತಂದೆ ತಾಯಿಗೂ ತೋರಿಸುತ್ತೇನೆ' ಎಂದು ಬೆದರಿಸುತ್ತಿದ್ದಾನೆ ಎಂದಿದ್ದಾರೆ. 
ಭಾರತವಾಯ್ತು, ಅಮೆರಿಕದಲ್ಲೂ 'ಅನಿಮಲ್' ದಾಖಲೆ! ಹೆಣ್ಣಿನ ದೌರ್ಜನ್ಯ, ಕ್ರೌರ್ಯದ ಚಿತ್ರಕ್ಕೆ ಇನ್ನೊಂದು ಯಶಸ್ಸು

click me!