
79ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಟೆನ್ನಿಸ್ ಕೃಷ್ಣ ತಮ್ಮ 45 ವರ್ಷಗಳ ಸಿನಿ ಜರ್ನಿ ಹೇಗಿತ್ತು..ಈಗ ಹೇಗಿದೆ ಎಂದು ಹಂಚಿಕೊಂಡಿದ್ದಾರೆ.
'ಇಲ್ಲಿನ ರಾಜಕೀಯ, ಪರ್ಸಂಟೇಜ್, ಗುಂಡು- ತುಂಡು ಕೊಟ್ಟು ಕೆಲವು ಬಂದಾಗ ಅವಕಾಶಗಳು ಕಡಿಮೆ ಆಯ್ತು. ಸಾಯಂಕಾಲ ಗುಂಡು ತುಂಡು ಕೊಡಿಸುತ್ತಾರೆ ಅಲ್ವಾ...ಅಥವಾ ಸಿನಿಮಾ ಇಲ್ಲದ ಸಮಯದಲ್ಲಿ ಖರ್ಚಿಗೆ ದುಡ್ಡು ಕೊಡುತ್ತಾರೆ ಅಲ್ವಾ ಅವರಿಗೆ ಮಾತ್ರ ಹೆಚ್ಚಿಗೆ ಅವಕಾಶ ಕೊಡುವುದು. ಯುಟ್ಯೂಬ್‌ನಲ್ಲಿ ಅನೇಕರು ಮಾತನಾಡಿರುವ ವಿಡಿಯೋ ನೋಡಿ ಸಾಕ್ಷಿ ಸಿಗುತ್ತದೆ. ಈ ರೀತಿ ಜನರು ಇರುವಾಗ ನಾನು ಯಾಕೆ ಬೇಕು? ದೊಡ್ಡಣ್ಣ ಯಾಕೆ ಬೇಕು? ಬ್ಯಾಂಕ್ ಜನಾರ್ಧನ್ ಯಾಕೆ ಬೇಕು? ಬಿರಾದರ್ ಯಾಕೆ ಬೇಕು? ಉಮೇಶ್ ಅಣ್ಣ ಯಾಕೆ ಬೇಕು?. ಹೊಸ ಕಲಾವಿದರಿಗೆ ಅವಕಾಶ ಕೊಡಲಿ ಆದರೆ ಪ್ರತಿ ಚಿತ್ರದಲ್ಲೂ ಇಬ್ಬರು ಹಿರಿಯ ಕಲಾವಿದರಿಗೆ ಅವಕಾಶ ಕೊಡಲಿ ಅಂತ ಪ್ರೆಸ್‌ಮೀಟ್‌ನಲ್ಲಿ ನಾನು ಮಾತನಾಡಿದ ಮೇಲೆ ಕೆಲವರಿಗೆ ಅವಕಾಶ ಸಿಗಲು ಶುರುವಾಯ್ತು' ಎಂದು ಬಿ ಗಣಪತಿ ಸಂದರ್ಶನದಲ್ಲಿ ಟೆನ್ನಿಸ್ ಕೃಷ್ಣ ಮಾತನಾಡಿದ್ದಾರೆ.
ಹಿರಿಯ ಕಲಾವಿದರಿಗೆ ಚಿತ್ರರಂಗದಲ್ಲಿ ಅವಕಾಶವಿಲ್ಲವೆಂದು ಕಾಮಿಡಿ ಸ್ಟಾರ್ ಬೇಸರ!
ಇತ್ತೀಚಿಗೆ ಚಿತ್ರರಂಗದಲ್ಲಿ ದೊಡ್ಡವರು ಪ್ರಶ್ನೆ ಮಾಡಿದ್ದರು..ನಿಮ್ಮ ಸಿನಿಮಾಗಳು ಕಡಿಮೆ ಆಗಿದೆ ಎಂದು. ಸ್ವಾಮಿ ದೊಡ್ಡ ದೊಡ್ಡವರು ಸಿನಿಮಾಗೆ ಕರೆಯುತ್ತಿಲ್ಲ. ಅಲ್ಲಿ ಒಂದು ಗುಂಪು ತಯಾರು ಆಗಿದೆ. ನಟರಿಗೆ ನಿರ್ಮಾಪಕರಿಗೆ ಸುಳ್ಳು ಹೇಳಿ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಪ್ಪಾ ನಂಜಪ್ಪ ಮಗಾ ಗುಂಜಪ್ಪ ಚಿತ್ರದ ಮೂಲಕ ನಟನಾಗುವ ಅವಕಾಶಗಳು ಇತ್ತು ಆದರೆ ಸಿನಿಮಾ ರಿಲೀಸ್‌ಗೆ ತೊಂದರೆ ಆಗುತ್ತಿತ್ತು. ನಿರ್ಮಾಪಕರು 1 ಲಕ್ಷ ಫೈನಾನ್ಸ್ ತೆಗೆದುಕೊಂಡರು..ರೀಲ್ಸ್ ತೆಗೆದುಕೊಂಡು ಹೊರ ಬರಬೇಕು ಆಗ ಬಿಡಲಿಲ್ಲ. ಮಾರನೆ ದಿನ ಬೆಳಗ್ಗೆ ತರಲು ಹೋಗಿದ್ದಾರೆ ಆದರೆ ಅಲ್ಲಿ ಜನ ಬಿಟ್ಟು ಕಾವಲು ಬಿಟ್ಟಿದ್ದರು. ಮೂರು ಥಿಯೇಟರ್‌ಗಳಲ್ಲಿ ಸಿನಿಮಾ ಟಿಕೆಟ್ ರಿಲೀಸ್ ಮಾಡಿದ್ದಾರೆ ಆದರೆ ರೀಲ್ ಬಂದಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು. ಮೂರು ವಾರ ಸಿನಿಮಾ ಮುಂದಕ್ಕೆ ಹೋಗಿದೆ. ಸಿನಿಮಾ ಒಳ್ಳೆ ಹೆಸರು ಮಾಡಿತ್ತು. ನಿರ್ಮಾಪಕರಿಗೆ ಲಾಸ್ ಇಲ್ಲ. ಹೀರೋ ಆಗಿ ತೊಲಗಿದೆ ನಮಗೆ ಜಾಗ ಸಿಗ್ತು ಅಂತ ಕೆಲವರು ಮಾತನಾಡಿದ್ದಾರೆ. ಯಾವ ಪಿಕ್ಚರ್ ನೋಡಿದರೂ ನೀನೇ ಸಾಯ್ತಿಯಾ ಎಂದು ನೇರವಾಗಿದೆ ಹೇಳಿದ್ದಾರೆ' ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ.
ಅದಿತಿ ಪ್ರಭುದೇವ ಸೀಮಂತ; ಹಸಿರು ಸೀರೆಯಲ್ಲಿ ಮಿಂಚಿದ ನಟಿ
ಇವತ್ತಿಗೂ ನಾವು ಚೆನ್ನಾಗಿದ್ದೀವಿ ಯಾವ ತೊಂದರೆ ಇಲ್ಲ. ತೆಲುಗು ಭಾಷೆಯಲ್ಲಿ ಹಿರಿಯ ಕಲಾವಿದರು ಎಲ್ಲಾ ಸಿನಿಮಾಗಳಲ್ಲಿ ಇದ್ದಾರೆ ಆದರೆ ಇಲ್ಲಿ ಯಾಕೆ ರಾಜಕೀಯ?. ಈಗ ಇರುವ ಹೀರೋಗಳಿಗೆ ಏನೂ ಗೊತ್ತಿರುವುದಿಲ್ಲ. ಪರ್ಸಂಟ್ ವಿಚಾರ ಗೊತ್ತಿರುವುದಿಲ್ಲ. ಹೀರೋಗಳಿಗೂ ಸುಳ್ಳು ಹೇಳಿರುತ್ತಾರೆ ನಿರ್ಮಾಪಕರಿಗೂ ಸುಳ್ಳು ಹೇಳ್ತಾರೆ ದುಡ್ಡು ಮಾಡ್ತಾರೆ ಎಂದಿದ್ದಾರೆ ಕೃಷ್ಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.