ಬಿಗ್ ಬಾಸ್ ಬಳಿಕ ಸಂಗೀತಾ-ಚಾರ್ಲಿ ಭೇಟಿ; ನೆಟ್ಟಿಗರು ಎಂತೆಂತಹ ಕಾಮೆಂಟ್ ಹಾಕ್ತಿದಾರೆ ನೋಡ್ರಿ!

By Shriram Bhat  |  First Published Feb 19, 2024, 5:54 PM IST

ಸಂಗೀತಾ ಮತ್ತು ಚಾರ್ಲಿ ಮೀಟಿಂಗ್ ನೋಡಿದ ಸೋಷಿಯಲ್ ಮೀಡಿಯಾ ಮಂದಿ ವಿಭಿನ್ನ ಕಾಮೆಂಟ್ ಹಾಕುವುದರಲ್ಲಿ ನಿರತರಾಗಿದ್ದಾರೆ. ಸಂಗೀತಾ ಫ್ಯಾನ್ಸ್‌ಗಳು ಅವರ ಪರ ಬ್ಯಾಟಿಂಗ್ ಬೀಸಿದ್ದರೆ, ವಿರೋಧಿಗಳು ಚಾರ್ಲಿ ಪರ ನಿಂತು ಸಂಗೀತಾ ವಿರುದ್ಧ ಕೆಂಡ ಕಾರುತ್ತಿದ್ದಾರೆ. 


ಬಿಗ್ ಬಾಸ್ ಕನ್ನಡ ಸೀಸನ್‌ 10ರಲ್ಲಿ ಗ್ರಾಂಡ್‌ ಫಿನಾಲೆವರೆಗೂ ಮನೆಯಲ್ಲಿ ಉಳಿದುಕೊಂಡಿದ್ದ ಸ್ಪರ್ಧಿ, ಚಾರ್ಲಿ ಸಿನಿಮಾ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ (Sangeetha Sringeri) ಮತ್ತೆ ಆಕ್ವಿವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಯಾವತ್ತೂ ಕ್ರಿಯಾಶೀಲವಾಗಿದ್ದ ನಟಿ ಸಂಗೀತಾ, ಇತ್ತೀಚೆಗೆ ಬಿಗ್ ಬಾಸ್ ಕಾರಣಕ್ಕೆ 100 ದಿನಗಳು ಅಲ್ಲಿಂದ ಮರೆಯಾಗಿದ್ದರು. ಈಗ ಮತ್ತೆ ಸೋಷಿಯಲ್ ಪ್ಲಾಟ್‌ ಫಾರಂಗೆ ಎಂದಿನಂತೆ ವಾಪಸ್ ಬಂದಿದ್ದಾರೆ. ಇತ್ತೀಚೆಗೆ ಸಂಗೀತಾ ಮಾಡಿರುವ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. 

ಹಾಗಿದ್ದರೆ ನಟಿ, ಬಿಗ್ ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಅಂಥದ್ದು ಅದೇನು ಪೋಸ್ಟ್ ಮಾಡಿದ್ದರು ಅಂತೀರಾ! ಬಿಗ್ ಬಾಸ್ ಮುಗಿಸಿ ಹೊರಗೆ ಬಂದ ಸಂಗೀತಾ ತಮ್ಮ ಹಳೆಯ ಫ್ರೆಂಡು ಚಾರ್ಲಿ (Charlie Movie) ಸಿನಿಮಾದ ನಾಯಿ 'ಚಾರ್ಲಿ'ಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಚಾರ್ಲಿಯನ್ನು ಅಪ್ಪಿ ಮುದ್ದಾಡಿದ ಸಂಗೀತಾರನ್ನು ಚಾರ್ಲಿ (Charlie) ಕೂಡ ಮುದ್ದು ಮಾಡಿದೆ, ಸಂಗೀತಾ ಜತೆ ಆಟ ಆಡಿದೆ. ಅವರಿಬ್ಬರ ಆಟ-ತುಂಟಾಟಗಳನ್ನು ಕ್ಯಾಮೆರಾ ರೆಕಾರ್ಡ್‌ ಮಾಡಿಕೊಂಡಿದ್ದು ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. 

Tap to resize

Latest Videos

ರೋಡ್‌ನಲ್ಲಿ ಬೋರಲು ಬಿದ್ದ ರಾಮ; ಸೀತಾ ಕೇರ್‌ ಟೇಕರ್ ರಾಮನಿಗೆ ಹೀಗಾದ್ರೆ ಮುಂದೇನು ಗತಿ?

ಸಂಗೀತಾ ಮತ್ತು ಚಾರ್ಲಿ ಮೀಟಿಂಗ್ ನೋಡಿದ ಸೋಷಿಯಲ್ ಮೀಡಿಯಾ ಮಂದಿ ವಿಭಿನ್ನ ಕಾಮೆಂಟ್ ಹಾಕುವುದರಲ್ಲಿ ನಿರತರಾಗಿದ್ದಾರೆ. ಸಂಗೀತಾ ಫ್ಯಾನ್ಸ್‌ಗಳು ಸಹಜವಾಗಿಯೇ ಅವರ ಪರ ಬ್ಯಾಟಿಂಗ್ ಬೀಸಿದ್ದರೆ, ಅವರ ವಿರೋಧಿಗಳು ಚಾರ್ಲಿ ಪರ ನಿಂತು ಸಂಗೀತಾ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆದರೆ, ಅವರೆಲ್ಲರೂ ಒಂದು ಸಂಗತಿಯನ್ನು ಮರೆತಿದ್ದಾರೆ, ಅದೇನೆಂದರೆ ಸಂಗೀತಾ-ಚಾರ್ಲಿ ಹಳೆಯ ಫ್ರೆಂಡ್ಸ್, ವೈರಿಗಳಲ್ಲ. ಸಂಗೀತಾರನ್ನು ನೋಡಿದ ಚಾರ್ಲಿ ಅದೆಷ್ಟು ಖುಷಿಯಾಗಿದೆ ಎಂದರೆ ಸಂಗೀತಾ ಇದ್ದಷ್ಟೂ ಹೊತ್ತು ಅವರೇ ಸರ್ವಸ್ವ ಎಂಬಂತೆ ವರ್ತಿಸಿದೆ ಚಾರ್ಲಿ. 

ದುಷ್ಯಂತನ ಬಾಯಲ್ಲಿ ಬೆಳ್ಳುಳ್ಳಿ ಕಬಾಬ್; ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ವಿರಾಟ್ ಕೊಹ್ಲಿ!

ಒಟ್ಟಿನಲ್ಲಿ, ಸಂಗೀತಾ-ಚಾರ್ಲಿ ಮೀಟಿಂಗ್ ಸದ್ಯ ವೈರಲ್ ಆಗತೊಡಗಿದೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಅದೇನೇ ಇರಲಿ, ಬಿಗ್ ಬಾಸ್ ಮನೆಯಿಂದ ಮರಳಿದ ಸಂಗೀತಾ ಮತ್ತೆ ತಮ್ಮ ಹಳೆಯ ಜೀವನದ ಹಳಿಗೆ ಮರೆಯತೊಡಗಿದ್ದಾರೆ. ಬಿಗ್ ಬಾಸ್ ಕಪ್ ಗೆಲ್ಲಲು ಸಾಧ್ಯವಾಗದಿದ್ದರೂ ಹಲವು ಮನಸ್ಸುಗಳನ್ನು, ಹೃದಯಗಳನ್ನಂತೂ ಸಂಗೀತಾ ಗೆದ್ದಿದ್ದಾರೆ ಎನ್ನಬಹುದು. 

ರಾಮಾಚಾರಿಗೆ ಜೈಲೂಟ ಫಿಕ್ಸ್ ಆಗೋಯ್ತಾ; ಚಾರು ತಲೆಗೆ ಬ್ರಿಲಿಯಂಟ್ ಐಡಿಯಾ ಬರ್ತಿಲ್ಲ ಯಾಕೆ?

click me!