ಮದ್ವೆ ಆದ್ಮೇಲೆ ಮಕ್ಳು ಬೇಡ ಎಂದು ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುವವರಿಗೆ ನಟ ಭುವನ್ ಪೊಣ್ಣನ್ನ ಕೊಟ್ಟ ಸಲಹೆ ವೈರಲ್!

Published : Jul 23, 2024, 04:17 PM IST
ಮದ್ವೆ ಆದ್ಮೇಲೆ ಮಕ್ಳು ಬೇಡ ಎಂದು ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುವವರಿಗೆ ನಟ ಭುವನ್ ಪೊಣ್ಣನ್ನ ಕೊಟ್ಟ ಸಲಹೆ ವೈರಲ್!

ಸಾರಾಂಶ

ವರ್ಷದೊಳಗೆ ಗುಡ್ ನ್ಯೂಸ್ ಕೊಟ್ಟ ಸೆಲೆಬ್ರಿಟಿ ಕಪಲ್ಸ್‌. ಕಂದಮ್ಮನ ನಿರೀಕ್ಷೆಯಲ್ಲಿರುವ ಈ ಜೋಡಿ ಕೊಟ್ಟ ಸಲಹೆ ಇದು....  

ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಕಪಲ್ಸ್‌ ಭುವನ್ ಪೊಣ್ಣನ್ನ ಮತ್ತು ಹರ್ಷಿಕಾ ಪೂಣಚ್ಚ ಆಗಸ್ಟ್‌ 24, 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ. ವರ್ಷ ತುಂಬುವಷ್ಟರಲ್ಲಿ ಈ ಜೋಡಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಇಷ್ಟು ಬೇಗ ಮಗುನಾ? ಸಿನಿಮಾರಂಗ ಬಿಟ್ಟು ಬಿಡುತ್ತೀರಾ? ಎಂದೆಲ್ಲಾ ಪ್ರಶ್ನೆ ಮಾಡುವವರಿಗೆ ಈಗಾಗಲೆ ಉತ್ತರ ಕೊಟ್ಟಿದ್ದಾರೆ. ಈ ಫ್ಯಾಮಿಲಿ ಪ್ಲ್ಯಾನಿಂಗ್ ಕಾನ್ಸೆಪ್ಟ್‌ ಫಾಲೋ ಮಾಡುವವರಿಗೆ ಭುವನ್ ಸಲಹೆ ಕೊಟ್ಟಿದ್ದಾರೆ.

'ಹರ್ಷಿಕಾ ಪೂಣಚ್ಚ ಮತ್ತು ನಾನು ಖುಷಿಯಾಗಿದ್ದೀವಿ. ನಮ್ಮ ಅಭಿಪ್ರಾಯ ಏನೆಂದರೆ ಸುಮಾರು ಜನ ಫ್ಯಾಮಿಲಿ ಪ್ಲ್ಯಾನಿಂಗ್ ಫ್ಯಾಮಿಲಿ ಪ್ಲ್ಯಾನಿಂಗ್ ಅನ್ಕೊಂಡು ಮದುವೆಯಾಗಿ 5 - 10 ವರ್ಷ ಮಕ್ಕಳು ಮಾಡಿಕೊಳ್ಳದೆ ಹಾಗೆ ಇರುತ್ತಾರೆ. ಹಾಗೆ ಮಾಡಬೇಡಿ ಅದು ತಪ್ಪು. ಮದುವೆ ಆದ ಮೇಲೆ ಮಕ್ಕಳು ಮಾಡಿಕೊಳ್ಳಿ ಸಂಸಾರವನ್ನು ನಡೆಸಿಕೊಂಡು ಹೋಗಿ ಸದ್ಯಕ್ಕೆ ಪೊಲಿಟಿಕಲ್ ಸಂದರ್ಭ ನೋಡಿದರೆ ಈ ಜಗತ್ತು ಎಷ್ಟು ದಿನ ಇರುತ್ತೆ ಇರಲ್ಲ ಗೊತ್ತಿಲ್ಲ. ಇದ್ದಷ್ಟು ದಿನ ಖುಷಿಯಾಗಿ ಇರೋಣ ಅಷ್ಟೇ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ ಭುವನ್.

ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿದ ಹರ್ಷಿಕಾ ಪೂಣಚ್ಚ; ಪಾಸಿಟಿವ್ ಎಂದು ಕಣ್ಣೀರಿಟ್ಟ ನಟಿ!

'ಖಂಡಿತಾ ನಾನು ಭುವನ್ ಅವರು ಹೇಳಿದ್ದನ್ನು ಒಪ್ಪಿಕೊಳ್ಳುತ್ತೀನಿ ನಮ್ಮ ನಿರ್ಧಾರ ಕೂಡ ಅದೇ ಆಗಿತ್ತು. ಸಾಕಷ್ಟು ವರ್ಷಗಳ ಕಾಲ ನಾವು ಸ್ನೇಹಿತರಾಗಿದ್ದು ಆಮೇಲೆ ಮದುವೆ ಮಾಡಿಕೊಂಡಿದ್ದು  ಮದುವೆ ಆದ ಮೇಲೆ ಮಕ್ಕಳ ವಿಚಾರದಲ್ಲಿ ನಾವು ತಯಾರಾಗಿದ್ದೆವು...ದೇವರು ಆಶೀರ್ವಾದ ಕೊಟ್ಟರೆ ನಾವು ಸ್ವೀಕರಿಸುವುದಾಗಿ. ಪ್ರೆಗ್ನೆನ್ಸಿ ಸಮಯದಲ್ಲಿ ನಾನು ಇಷ್ಟೋಂದು ಆಕ್ಟಿವ್ ಆಗಿದ್ದೀನಿ ಆಂದ್ಮೇಲೆ ಮುಂದೆನೂ ಸಿನಿಮಾ ಮಾಡೇ ಮಾಡುತ್ತೀನಿ. ಮಗು ಹುಟ್ಟಿದ ಮೇಲೆ ಮಗುವಿಗೆ ಎಷ್ಟು ಸಮಯ ಕೊಡಬೇಕು ಅದನ್ನು ಕೊಡಲು ನಾನು ರೆಡಿಯಾಗಿರುವೆ' ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. 

ಪ್ರೆಗ್ನೆಂಟ್ ಎಂದು ತಿಳಿದಾಗ ವಿಡಿಯೋ ಕಾಲ್ ಮಾಡಿ ಕಣ್ಣೀರಿಟ್ಟೆ, ನಮ್ಮಲ್ಲಿ ಸೀಮಂತ ಇಲ್ಲ: ಹರ್ಷಿಕಾ ಪೂಣಚ್ಚ

ತಂದೆ ಪ್ರೀತಿಯನ್ನು ನನಗೆ ಭುವನ್ ಮೂಲಕ ಸಿಗುತ್ತಿದೆ. ನಿನಗೆ ಏನೇ ತಿನ್ನಲು ಆಸೆ ಆದರೆ ಹೊರಗಿನಿಂದ ತರಿಸಬೇಡ ನಾನೇ ಮನೆಯಲ್ಲಿ ಮಾಡಿಕೊಡುತ್ತೀನಿ ಅಂತಾರೆ ಭುವನ್. ನನ್ನ ತಂದೆ ಜೊತೆ ಭುವನ್‌ನ ಕಂಪೇರ್ ಮಾಡುವುದಿಲ್ಲ ಆದರೆ ತಂದೆ ಜಾಗದಲ್ಲಿ ನಿಂತು ಪ್ರತಿಯೊಂದನ್ನು ಮಾಡುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಇದು ಮೊದಲ ಮಗು ಹೀಗಾಗಿ ಪ್ರತಿಯೊಬ್ಬರು ಖುಷಿಯಾಗಿದ್ದಾರೆ. ಅಕ್ಟೋಬರ್‌ ತಿಂಗಳಿನಲ್ಲಿ ಮಗಳು ಅಥವಾ ಮಗ ಬರ್ತಾನೆ. ನನ್ನ ವೈದ್ಯರು ಇಲ್ಲಿ ಇರುವ ಕಾರಣ ಮದರ್‌ಹುಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದಿದ್ದಾರೆ ಹರ್ಷಿಕಾ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ