100 ಕೋಟಿ ಆಸ್ತಿ ಬೇಡ, ಒಬ್ಬ ತಂದೆಯಾಗಿ ನನಗಿದು ಖುಷಿಯಾದ ವಿಷಯ: ಚಂದನ್ ಶೆಟ್ಟಿ ತಂದೆ ರಿಯಾಕ್ಷನ್

By Vaishnavi Chandrashekar  |  First Published Jul 23, 2024, 11:54 AM IST

ಮಗನ ಸಿನಿಮಾ ನೋಡಿ ಹೊರ ಬರುತ್ತಿದ್ದಂತೆ ಸಂತಸ ವ್ಯಕ್ತ ಪಡಿಸಿದ ತಂದೆ. ಜನರ ಪ್ರೀತಿ ಗೆದ್ದಿಬಿಟ್ರು ಶೆಟ್ರು.....


ಕನ್ನಡ ರ್ಯಾಪರ್ ಚಂದನ್ ಶೆಟ್ಟಿ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ಜುಲೈ 19ರಂದು ಸಿನಿಮಾ ರಾಜಾದ್ಯಂತ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಚಂದನ್ ಶೆಟ್ಟಿ ನಟನೆ, ಅರುಣ್ ಅಮುಕ್ತ್‌ ನಿರ್ದೇಶನದ ಸಿನಿಮಾವಿದು. ಸುಬ್ರಹ್ಮಣ್ಯ ಕುಕ್ಕೆ ಹಾಗೂ ಎಸಿ ಶಿವಲಿಂಗೇಗೌಡ ನಿರ್ಮಾಪಕರು. ಸುನೀಲ್ ಪುರಾಣಿಕ್, ಅರವಿಂದ್ ರಾವ್, ಪ್ರಶಾಂತ್ ಸಂಬರ್ಗಿ, ಅಮರ್, ಮನೋಜ್, ಮನಸ್ವಿ ಸೇರಿದಂತೆ ದೊಡ್ಡ ತಾರ ಬಳಗ ಈ ಸಿನಿಮಾದಲ್ಲಿ ಇದೆ. 

ಮಕ್ಕಳು ಪೋಷಕರು ಜೊತೆಯಾಗಿ ಕೂತು ನೋಡುವ ಚಿತ್ರವಿದು ಎಂದು ಚಂದನ್ ಶೆಟ್ಟಿ ಪ್ರಚಾರದ ಸಮಯದಿಂದಲೂ ಹೇಳುತ್ತಿದ್ದಾರೆ.  ಈ ಸಿನಿಮಾವನ್ನು ಚಂದನ್ ಶೆಟ್ಟಿ ತಂದೆ ವೀಕ್ಷಿಸಿ ಖುಷಿ ವ್ಯಕ್ತ ಪಡಿಸಿದ್ದಾರೆ.'ನನ್ನ ಮಗ ಚಂದನ್ ಶೆಟ್ಟಿ ಒಂದು ದಾಖಲೆ ಮಾಡಿದ್ದಾರೆ ದಾಖಲೆಯನ್ನು ಸೃಷ್ಟಿ ಮಾಡಿದ್ದಾನೆ. ಒಬ್ಬ ತಂದೆಯಾಗಿ ಇದು ನನಗೆ ಖುಷಿಯಾದ ವಿಷಯ. ಜೀವನದಲ್ಲಿ ನನಗೆ ಇನ್ನೇನು ಬೇಕು? ಯಾವ 100 ಕೋಟಿ ಆಸ್ತಿನೂ ಬೇಡ ಸರ್. ಮೀಡಿಯಾದವರು ಪ್ರತಿಯೊಬ್ಬರು ನನ್ನ ಮಗನ ಸಿನಿಮಾ ನೋಡಿ ಆತನನ್ನು ಗುರುತಿಸಬೇಕು' ಎಂದು ಮಾತನಾಡಿದ್ದಾರೆ.

Tap to resize

Latest Videos

ಬಿಗ್ ಬಾಸ್‌ ಮನೆಯಲ್ಲಿ ರೊಮ್ಯಾನ್ಸ್; ಸೆಕ್ಸ್‌ ವಿಡಿಯೋ ವೈರಲ್ ಬೆನ್ನಲೆ ಅರೆಸ್ಟ್‌ಗೆ ಮನವಿ ಮಾಡಿದ ಶಿವಸೇನಾ ಕಾರ್ಯದರ್ಶಿ!

ದುರಹಂಕಾರದಲ್ಲಿ ಮರೆಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುದೊಂದು ದಿನ ಸರಿ ದಾರಿಗೆ ಬರುತ್ತಾರೆ. ಮಾಡಿದ ತಪ್ಪನ್ನು ಅರ್ಥ ಮಾಡಿಕೊಂಡು ತಲೆ ತಗ್ಗಿಸುತ್ತಾರೆ. ಈ ವಿದ್ಯಾರ್ಥಿಗಳನ್ನು ಸರಿ ದಾಡಿಗೆ ತಂದವರು ಯಾರು ಅನ್ನೋದು ಈ ಸಿನಿಮಾದಲ್ಲಿ ನೋಡಬೇಕು.  ಈ ಸಿನಿಮಾ ಮೂಲಕ ಹೆತ್ತವರಿಗೂ ಪಾಠ ಮಾಡಿದ್ದಾರೆ ನಿರ್ದೇಶಕ ಅರುಣ್ ಅಮುಕ್ತ. ತಿಂಗಳಿಗೊಂದು ಹೊಸ ಟೆಕ್ನಾಲಜಿ ಬರುತ್ತಿರುವ ಕಾಲದಲ್ಲಿ ಯುವಪೀಳಿಗೆಯ ಹಾದಿ ತಪ್ಪುವುದರಲ್ಲಿ ಪೋಷಕರ ಪಾಲು ಎಷ್ಟಿದೆ ಎಂದು ತಿಳಿಸಿದ್ದಾರೆ.

click me!