ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪನನ್ನು ನೋಡಲು ಆಗಮಿಸಿದ್ದ ಹಾಸ್ಯ ನಟ ಸಾಧು ಕೋಕಿಲ ಅವಕಾಶ ಸಿಗದೇ ವಾಪಸ್ ಹೋಗಿದ್ದಾರೆ.
ಬೆಂಗಳೂರು (ಜು.23): ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪನನ್ನು ನೋಡಲು ಆಗಮಿಸಿದ್ದ ಹಾಸ್ಯ ನಟ ಹಾಗೂ ಸಂಗೀತ ಸಂಯೋಜಕ ಸಾಧು ಕೋಕಿಲ ಅವರು ಅವಕಾಶ ಸಿಗದೇ ವಾಪಸ್ ಹೋಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹ್ಆರ ಜೈಲು ಸೇರಿ ಬರೋಬ್ಬರಿ 33 ದಿನಗಳನ್ನು ವಿಚಾರಣಾಧೀನ ಕೈದಿಯಾಗಿ ಕಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಹಲವು ನಾಯಕ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ಬಂದು ನಟ ದರ್ಶನ್‌ನಲ್ಲಿ ಜೈಲಿನಲ್ಲಿ ಭೇಟಿಯಾಗಿ ಹೋಗಿದ್ದಾರೆ. ಆದರೆ, ಈವರೆಗೆ ಸಾಧುಕೋಕಿಲ ಅವರು ಬಂದು ಭೇಟಿ ಮಾಡಿರಲಿಲ್ಲ. ಆದದರಿಂದ ಮಂಗಳವಾರ ಬೆಳಗ್ಗೆ ನಟ ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ.
ನಟ ದರ್ಶನ್ ಜೈಲಲ್ಲಿ ಪ್ರತಿದಿನ ಬಿರಿಯಾನಿ ತಿನ್ನೋಕಾಗಲ್ಲ, ಬೇಧಿ ಆಗಿದ್ರೆ ಸಪ್ಪೆ ಊಟ ಕೊಡಿ; ಎಸ್‌ಪಿಪಿ ಪ್ರಸನ್ನಕುಮಾರ
ಆದರೆ, ಜೈಲಿನ ಅಧಿಕಾರಿಗಳು ಈಗಾಗಲೇ ನಟ ದರ್ಶನ್ ಅವರನ್ನು ಭೇಟಿ ಮಾಡಿವುದಕ್ಕೆ ವಾರಕ್ಕೆ ಎರಡೇ ಬಾರಿ ಅವಕಾಶ ನೀಡಲಾಗುತ್ತದೆ. ಅದರಂತೆ ಈಗಾಗಲೇ ಎರಡು ಬಾರಿ ಭೇಟಿ ಮಾಡುವ ಅವಕಾಶ ಮುಕ್ತಾಯಗೊಂಡಿದೆ. ಈಗ ಯಾರೇ ಬಂದರೂ ನಟ ದರ್ಶನ್ ಭೇಟಿ ಮಾಡಲು ಅವಕಾಶವಿಲ್ಲ ಎಂದು ಜೈಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸ್ಯನಟ ಸಾಧುಕೋಕಿಲ ಅವರು ಜೈಲಿನಿಂದ ವಾಪಸ್ ಮನೆಯೆಡೆಗೆ ವಾಪಸ್ ಹೋಗಿದ್ದಾರೆ. ಇನ್ನು ನಟ ದರ್ಶನ್‌ಗೆ ಭೇಟಿ ಮಾಡಲು ಗುರುವಾರ ಅವಕಾಶ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಾರ ನಟ ದರ್ಶನ್ ಭೇಟಿ ಮಾಡಲು ಇರುವ ಅವಕಾಶಗಳು ಮುಕ್ತಾಯಗೊಂಡಿವೆ. ಈ ಹಿನ್ನೆಲೆಯಲ್ಲಿ ಗುರುವಾರ ದರ್ಶನ್ ಕುಟುಂಬದವರು ಬಂದು ಭೇಟಿ ಮಾಡಲಿದ್ದಾರೆ. ಅವರೊಂದಿಗೆ ನಾನು ಕೂಡ ಬಂದು ದರ್ಶನ್ ಭೇಟಿ ಮಾಡುತ್ತೇನೆ. ಇನ್ನು ಒಬ್ಬೊಬ್ಬರೇ ಬಂದು ನೋಡಿದರೆ ಒಂದು ಭೇಟಿಯ ಸಂಪೂರ್ಣ ಅವಕಾಶವೇ ಮುಗಿದು ಹೋಗಲಿದೆ. ನಾನು ಬೇಟಿ ಆದ್ರೆ ಈ ವಾರದಲ್ಲಿ ಬೇರೆಯವರಿಗೆ ಅವಕಾಶ ಆಗ್ತಿರಲಿಲ್ಲ. ಹಾಗಾಗಿ ಗುರುವಾರ ಬರ್ತೀನಿ ಎಂದು ಹೇಳಿ ಮನೆಯತ್ತ ಹೊರಟರು.