Arjun Sarja Tested Covid +ve: ಸ್ಯಾಂಡಲ್‌ವುಡ್‌ ನಟನಿಗೂ ತಗುಲಿದ ವೈರಸ್!

Suvarna News   | Asianet News
Published : Dec 14, 2021, 02:30 PM IST
Arjun Sarja Tested Covid +ve: ಸ್ಯಾಂಡಲ್‌ವುಡ್‌ ನಟನಿಗೂ ತಗುಲಿದ ವೈರಸ್!

ಸಾರಾಂಶ

ಸೋಷಿಯಲ್ ಮೀಡಿಯಾ ಮೂಲಕ ಕೊರೋನಾ ಸೋಂಕು ತಗುಲಿರುವುದಾಗಿ ಖಚಿತ ಪಡಿಸಿದ ನಟ ಅರ್ಜುನ್.   

ಕನ್ನಡ ಚಿತ್ರರಂಗ ಯಂಗ್ ಆ್ಯಂಡ್ ಹ್ಯಾಂಡ್ಸಮ್ ನಟ ಅರ್ಜುನ್ (Arjun Sarja) ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆ ಮೂಲಕ ತಮ್ಮ ಕೊರೋನಾ ಸೋಂಕು (Covid19) ತಗುಲಿರುವುದಾಗಿ ಬರೆದುಕೊಂಡಿದ್ದಾರೆ. ಐಸೋಲೇಷನ್‌ನಲ್ಲಿರುವ ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳು ಗಾಬರಿ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

ಅರ್ಜುನ್ ಪೋಸ್ಟ್‌: 
ಹಾಯ್ ಎಲ್ಲರಿಗೂ, ನನಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಅಗತ್ಯ ಕ್ರಮಗಳನ್ನು ಕೈಗೊಂಡು, ನಾನು ಐಸೋಲೇಟ್ (Isolate) ಆಗಿರುವೆ. ನನ್ನ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರೂ ದಯವಿಟ್ಟು ಕೊರೋನಾ ಟೆಸ್ಟ್ (Covid19 test) ಮಾಡಿಸಿಕೊಳ್ಳಿ.  ನಾನು ಆರಾಮ್ ಆಗಿದ್ದೀನಿ. ದಯವಿಟ್ಟು ನೀವೆಲ್ಲರೂ ಸೇಫ್ ಆಗಿರಿ, ಮಾಸ್ಕ್ ಧಿರಿಸುವುದನ್ನು ಮರೆಯಬೇಡಿ. ರಾಮ ಭಕ್ತ ಹನುಮಾನ್ ಕಿ ಜೈ' ಎಂದು ಬರೆದುಕೊಂಡಿದ್ದಾರೆ. 

ಐಶ್ವರ್ಯ ಪೋಸ್ಟ್‌:
ಕಳೆದ ವರ್ಷ ಅರ್ಜುನ್ ಹಿರಿಯ ಪುತ್ರ ಐಶ್ವರ್ಯಾಗೂ (Aishwarya Arjun Sarja) ಕೊರೋನಾ ಸೋಂಕು ತಗುಲಿತ್ತು.  'ನಾನು ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ಈಗ ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದೇನೆ. ವೈದ್ಯರ (Doctor) ಸಲಹೆ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ,' ಎಂದು ಸಂದೇಶದಲ್ಲಿ ತಿಳಿಸಿದ್ದರು. 

ನಟ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯಾಗೂ ವಕ್ಕರಿಸಿದ ಕೊರೋನಾ

59 ವರ್ಷದ ಅರ್ಜುನ್ ಫಿಟ್ನೆಸ್‌ (Fitness) ಮತ್ತು ಆರೋಗ್ಯದ (Health) ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸುತ್ತಾರೆ. ಕೆಲವು ದಿನಗಳ ಹಿಂದೆ ಖಾಸಗಿ ಟಿವಿ ಕಾರ್ಯಕ್ರಮದಲ್ಲಿ  (TV Show) ಕಾಣಿಸಿಕೊಂಡಿದ್ದು, ಶೋ ನಿಯಮದ ಪ್ರಕಾರ ಕೋವಿಡ್‌ ಟೆಸ್ಟ್ ಮಾಡಿಸಿಕೊಳ್ಳ ಬೇಕಿತ್ತು. ಈ ವೇಳೆ ಪಾಸಿಟಿವ್ ಎಂದು ತಿಳಿದು ಬಂದಿದೆ. 

ಕಮಲ್ ಕೊರೋನಾ:
ಕೆಲವು ದಿನಗಳ ಹಿಂದೆ ಬಹುಭಾಷಾ ನಟ ಕಮಲ್ ಹಾಸನ್‌ (Kamal Hassan) ವಿದೇಶದಿಂದ ಭಾರತಕ್ಕೆ ಹಿಂದಿರುಗಿದಾಗ ಕೊರೋನಾ ಟೆಸ್ಟ್ ಮಾಡಿಸಿದ್ದರು. ಅವರಿಗೂ ಕೊರೋನಾ ಸೋಂಕು ದೃಢವಾದ ಬಳಿಕ ಚೆನ್ನೈನ (Chennai) ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಒಂದು ವಾರಗಳ ಕಾಲ ಚಿಕಿತ್ಸೆ ಪಡೆದುಕೊಂಡು, ಆನಂತರ ತಮ್ಮ ನಿವಾಸದಲ್ಲಿ ಕ್ವಾರಂಟೈನ್‌ ಆಗಿದ್ದರು. 

ಕಮಲ್‌ ಹಾಸನ್‌ಗೆ ಕೊರೊನಾ ಪಾಸಿಟಿವ್: ಆಸ್ಪತ್ರೆಗೆ ದಾಖಲು

ಕರೀನಾ ಕೊರೋನಾ:
ಕಮಲ್ ಮಾತ್ರವಲ್ಲದೆ ಬಾಲಿವುಡ್ ನಟಿ ಕರೀನಾ ಕಪುರ್ (Kareena Kapoor) ಮತ್ತು ಅಮೃತಾ ಅರೋರಾಗೂ ಕೊರೋನಾ ಸೊಂಕು ದೃಢವಾಗಿದೆ.  ಎಎನ್‌ಐ ಪ್ರಕಾರ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (Municipal Coorporation) ಹೇಳಿಕೆಯಲ್ಲಿ, ನಟಿರಾದ ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾ (Amruta Arora) ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇಬ್ಬರೂ ಕೋರೋನಾ ನಿಯಮಗಳನ್ನು ಉಲ್ಲಂಘಿಸಿ, ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇಬ್ಬರು ನಟಿಯರ ಸಂಪರ್ಕಕ್ಕೆ ಬಂದವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಬಿಎಂಸಿ ಆದೇಶಿಸಿದೆ.

Kareena Kapoor Tested Positive: ಬೇಬೋಗೆ ಕೊರೋನಾ ಪಾಸಿಟಿವ್, ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ ಮಾಡ್ತಿದ್ರು ಎಂದ BMC

    ಕಳೆದ ವಾರ, ಕರೀನಾ ಮತ್ತು ಅಮೃತಾ ಅವರು ಮಲೈಕಾ ಅರೋರಾ, ಕರಿಷ್ಮಾ ಕಪೂರ್ (Karishma Kapoor) ಮತ್ತು ಕರೀನಾ ಅವರ ಮ್ಯಾನೇಜರ್ ಪೂನಂ ದಮಾನಿಯಾ ಸೇರಿದಂತೆ ತಮ್ಮ ಸ್ನೇಹಿತರು ಮತ್ತು ಒಡಹುಟ್ಟಿದವರೊಂದಿಗೆ ರಿಯಾ ಕಪೂರ್ ಅವರ ಮನೆಯಲ್ಲಿ ಆರಂಭಿಕ ಕ್ರಿಸ್ಮಸ್ ಪಾರ್ಟಿಯಲ್ಲಿ (Christmas Party) ಭಾಗವಹಿಸಲು ಸೇರಿದ್ದರು. ಬುಧವಾರ ಕರಣ್ ಜೋಹರ್ (Karan Johar) ಅವರ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ಇಬ್ಬರೂ ಭಾಗವಹಿಸಿದ್ದರು. ಇದರಲ್ಲಿ ಅರ್ಜುನ್ ಕಪೂರ್ (Arjun Kapoor) ಮತ್ತು ಆಲಿಯಾ ಭಟ್ (Alia Bhat) ಸಹ ಹಾಜರಿದ್ದರು. ಚಿತ್ರವು ಈ ತಿಂಗಳು ಬಿಡುಗಡೆಯಾಗಿ 20 ವರ್ಷಗಳನ್ನು ಪೂರೈಸಿದ ಕಾರಣ ಚಲನಚಿತ್ರ ನಿರ್ಮಾಪಕರು K3G ಬ್ಯಾಷ್ ಅನ್ನು ಆಯೋಜಿಸಿದ್ದರು.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
    ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?