Google Most Searched: ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಟರ ಪೈಕಿ ನಮ್ಮ ಪುನೀತ್ ರಾಜ್‌ಕುಮಾರ್!

By Suvarna News  |  First Published Dec 14, 2021, 2:01 PM IST

ಪುನೀತ್ ರಾಜ್‌ಕುಮಾರ್ ಯಾರು? ಅವರು ಸಿನಿಮಾಗಳು ಎಷ್ಟು? ಅವರು ಸಮಾಜ ಸೇವೆಗಳ ಬಗ್ಗೆ?- ಹೀಗೆ ಗೂಗಲ್‌ನಲ್ಲಿ ಕನ್ನಡದ ನಟನ ಬಗ್ಗೆ ಈ ವರ್ಷ ಅತಿ ಹೆಚ್ಚು ಸರ್ಚ್‌ ಮಾಡಿದ್ದಾರೆ. 


ಕನ್ನಡ ಚಿತ್ರರಂಗದ ರಾಜ್ ದಿ ಶೋ ಮ್ಯಾನ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಕ್ಟೋಬರ್ 29ರಂದು ಹೃದಯಾಘಾತದಿಂದ (HeartAttack) ಕೊನೆ ಉಸಿರೆಳೆದರು. ಆರೋಗ್ಯವೇ ಭಾಗ್ಯ ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಎಂದು ಹೇಳುತ್ತಿದ್ದ ನಟ ಇನ್ನಿಲ್ಲ ಎಂದು ತಿಳಿಯುತ್ತಿದ್ದಂತೆ ಇಡೀ ಕರ್ನಾಟಕವೇ ಅನಾಥವಾದ ಅನುಭವವನ್ನು ಅನುಭವಿಸಿತ್ತು. ಸಖತ್ ಫಿಟ್ನೆಸ್ ಫ್ರೀಕ್ ಆಗಿದ್ದ ಪುನೀತ್‌ಗೆ ಈ ರೀತಿ ಆಗಲು ಕಾರಣವೇನು? ಎನ್ನವ ಪ್ರಶ್ನೆ ಈಗಲೂ ಕುಟುಂಬದ ಸದಸ್ಯರನ್ನು ಮತ್ತು ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.  

ಅಪ್ಪು ಅಗಲಿಕೆ ಕರ್ನಾಟಕಕ್ಕೆ ಮಾತ್ರ ಮೀಸಲಾಗಲಿಲ್ಲ. ಇಡೀ ಭಾರತದಲ್ಲಿ ಸುದ್ದಿ ಆಗಿತ್ತು.  ನಮ್ಮ ಸಮಾಜ ಸೇವೆಗಳ (Social Work) ಬಗ್ಗೆ ಯಾರಿಗೂ ಗೊತ್ತಾಗಬಾರದು, ಎಂದು ಸೈಲೆಂಟ್ ಆಗಿಯೇ ಮಾಡಿದ ಕೆಲಸಗಳು ಅಗಲಿದ ನಂತರ ಬೆಳಕಿಗೆ ಬಂದವು. ಅಪ್ಪು ಅಂತಿಮ ದರ್ಶನ ಪಡೆಯಲು ಬಂದ 25 ಲಕ್ಷಕ್ಕೂ ಹೆಚ್ಚಿನ ಜನರಲ್ಲಿ ಬಾಯಲ್ಲಿತ್ತು ಸತ್ಯ. ಹೇಗೆ ಸಹಾಯ ಮಾಡಿದ್ದರು, ಯಾವ ರೀತಿ ನೋಡಿಕೊಂಡರು ಎಂದು ಅಭಿಮಾನಿಗಳೇ ಹೇಳುತ್ತಿದ್ದರು. ನಿಜ ಏನು ಗೊತ್ತಾ? ಅಪ್ಪು ಸಹಾಯ ಮಾಡಿರುವ ವಿಚಾರಗಳು ಸಹೋದರರಾದ ಶಿವರಾಜ್‌ಕುಮಾರ್ (Shivarajkumar) ಮತ್ತು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರಿಗೂ ಗೊತ್ತಿರಲಿಲ್ಲ. ಅಪ್ಪು ಸಮಾಧಿ ಪೂಜೆ ಮಾಡಲು, ವೀಕ್ಷಿಸಲು ಈಗಲೂ ದಿನಕ್ಕೆ 20 ಸಾವಿರ ಮಂದಿ ಬರುತ್ತಾರೆ ಎನ್ನಲಾಗಿದೆ.

Dr Rajkumar Family: 'ಜಾತಿ, ಧರ್ಮ ಇಟ್ಕೊಂಡು ಡಾ. ರಾಜ್​ ಕುಟುಂಬ ಮಾತಾಡಲ್ಲ'

Tap to resize

Latest Videos

undefined

ಪ್ರತಿ  ವರ್ಷವೂ ಗೂಗಲ್ ಒಂದು ಲಿಸ್ಟ್ ರಿವೀಲ್ ಮಾಡುತ್ತದೆ. ಈ ವರ್ಷ ಅತಿ ಹೆಚ್ಚು ಸರ್ಚ್ ಆಗಿರುವ ವ್ಯಕ್ತಿಗಳು ಯಾರೆಂದು. ಅಂದರೆ ನೆಟ್ಟಿಗರು ಗೂಗಲ್‌ನ ಓಪನ್ ಮಾಡಿ ಯಾರ ಹೆಸರನ್ನು ಹುಡುಕಿದ್ದಾರೆ ಎಂದು. ಸಾಮಾನ್ಯಾವಗಿ ಬಾಲಿವುಡ್ ಸ್ಟಾರ್ ನಟರು ಈ ಲಿಸ್ಟ್‌ನಲ್ಲಿ ಇರುತ್ತಿದ್ದರು. ಕಳೆದ ವರ್ಷ ಸುಶಾಂತ್ ಸಿಂಗ್ (Sushant Sing) ಅತಿ ಹೆಚ್ಚು ಸರ್ಚ್ ಆಗಿದ್ದು, ಈ ವರ್ಷ ನಮ್ಮ ಹೆಮ್ಮೆಯ ಕನ್ನಡಿಗ ಪುನೀತ್ ರಾಜ್‌ಕುಮಾರ್‌ ಎಂದು ರಿವೀಲ್ ಮಾಡಿದೆ. ಹೀಗಾಗಿ ಗೂಗಲ್‌ಗೂ ಗೊತ್ತು ನಮ್ಮ ಅಪ್ಪು ಗತ್ತು ಎಂದು ಅಭಿಮಾನಿಗಳು ಈ ವಿಚಾರವನ್ನು ವೈರಲ್ ಮಾಡುತ್ತಿದ್ದಾರೆ. 

ಯಾವುದರ ಬಗ್ಗೆ ಹುಡುಕಿದ್ದಾರೆ?
- ಪುನೀತ್ ರಾಜ್‌ಕುಮಾರ್ ಫ್ಯಾಮಿಲಿ (Family)

- ಪುನೀತ್ ರಾಜ್‌ಕುಮಾರ್ ಸಿನಿಮಾಗಳು (Movies)

- ಪುನೀತ್ ರಾಜ್‌ಕುಮಾರ್ ಬಾಲ್ಯದ ಫೋಟೋಗಳು (Childhood Photos)

- ಪುನೀತ್ ರಾಜ್‌ಕುಮಾರ್ ವಯಸ್ಸು (Age)

- ಪುನೀತ್ ರಾಜ್‌ಕುಮಾರ್ ಪತ್ನಿ (Wife)

- ಪುನೀತ್ ರಾಜ್‌ಕುಮಾರ್ ಸಮಾಜ ಸೇವೆ

- ಪುನೀತ್ ರಾಜ್‌ಕುಮಾರ್ ಮನೆ (House)

- ಪುನೀತ್ ರಾಜ್‌ಕುಮಾರ್ ಬದುಕು ಮತ್ತು ಸಾವಿನ ದಿನಾಂಕ ಸಂಬಂಧ (Birth and Death date)

ಪುನೀತ್ ಅಗಲಿದ ದಿನವೇ ಕೇವಲ 8 ಗಂಟೆಗಳಲ್ಲಿ 10 ಮಿಲಿಯನ್‌ಗೂ ಅಧಿಕ ಮಂದಿ ಅವರ ಹೆಸರನ್ನು ಗೂಗಲ್‌ನಲ್ಲಿ ಹುಡುಕಿದ್ದಾರೆ. 

ಪುನೀತ್ ರಾಜ್‌ಕುಮಾರ್ ಜೇಮ್ಸ್‌ (James) ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಬೆಂಗಳೂರಿನ ದೇಗುಲವೊಂದರಲ್ಲಿ ಮುಹೂರ್ತ ನಡೆದಿದ್ದು, ಪತ್ನಿ ಅಶ್ವಿನಿ (Ashwini Puneeth Rajkumar) ಅವರೇ ಕ್ಲಾಪ್ ಮಾಡಿದ್ದರು. ಕೊರೋನಾ ಲಾಕ್‌ಡೌನ್‌ ಎದುರಾದ ಕಾರಣ ಚಿತ್ರೀಕರಣವನ್ನು ಕೆಲವು ದಿನಗಳ ಕಾಲ ನಿಲ್ಲಿಸಲಾಗಿತ್ತು. ಈ ಅವಧಿಯಲ್ಲಿ ಫಿಟ್ನೆಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ ಪುನೀತ್ ಅವರು ನ್ಯಾಷನಲ್ ಅವಾರ್ಡ್‌ (National Award winner) ವಿನ್ನರ್ ವೈಲ್ಡ್‌ಲೈಫ್‌ ಫೋಟೋಗ್ರಾಫರ್ ಅಮೋಘವರ್ಷ (Amoghavarsha) ಅವರ ಜೊತೆ ಕರ್ನಾಟಕದ ಕಾಡುಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಾಣಿ-ಪಕ್ಷಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಇದನ್ನು ನವೆಂಬರ್ 1ರಂದು ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಅಷ್ಟರಲ್ಲಿಯೇ ಅವರೇ ನಮ್ಮೊಟ್ಟಿಗೆ ಇಲ್ಲವಾದರು.

Yuva Rajkumar Film:ಪುನೀತ್‌ರಾಜ್‌ಕುಮಾರ್ ಅವರಿಗಾಗಿಯೇ ಬರೆದುಕೊಂಡಿದ್ದ ಕಥೆಗೆ ಯುವ ನಾಯಕ!

ಪಿಅರ್‌ಕೆ ಸಂಸ್ಥೆ,ಅಪ್ಪು ಸಮಾಜ ಸೇವೆ ಮತ್ತು ಹೊಸ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪತ್ನಿ ಅಶ್ವಿನಿ ಅವರು ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಐರನ್ ಲೇಡಿ ಡಾ.ಪಾರ್ವತಮ್ಮ ರಾಜ್‌ಕುಮಾರ್ (Dr. Parvathamma Rajumar) ಅವರ ಹುಟ್ಟು ಹಬ್ಬದ ದಿನ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದರು. ಎರಡು ಗಂಟೆಗಳ ಈ ಡಾಕ್ಯುಮೆಂಟರಿಗೆ 'ಗಂಧದ ಗುಡಿ' (Gandhada gudi) ಎನ್ನುವ  ಶೀರ್ಷಿಕೆ ನೀಡಲಾಗಿದೆ. ಕೊನೆಯದಾಗಿ ನಮ್ಮ ಗಂಧದ ಗುಡಿಯನ್ನು ಉಳಿಸಿ ಎಂದು ಡಾ.ರಾಜ್‌ಕುಮಾರ್ ಅವರ ಧ್ವನಿಯನ್ನು ಸೇರಿಸಲಾಗಿದೆ.

2021ರ Google Most Searched Actor List:

ಮೊದಲ ಸ್ಥಾನದಲ್ಲಿ ಬಾಲಿವುಡ್ ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ (Siddharth Shukla)
ಎರಡನೇ ಸ್ಥಾನದಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) 
ಮೂರನೇ ಸ್ಥಾನದಲ್ಲಿ ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ (Allu Arjun) 
ನಾಲ್ಕನೇ ಸ್ಥಾನದಲ್ಲಿ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 

click me!