ಅಕ್ಟೋಬರ್‌ನಲ್ಲೇ ಫೈಟ್‌ ಶೂಟಿಂಗ್‌ ಶುರು, ಬ್ಯಾಡ್‌ ಮ್ಯಾನರ್ಸ್‌ ಸುಕ್ಕಾ ಸಿನಿಮಾ: ಅಭಿಷೇಕ್‌ ಅಂಬರೀಶ್‌

Kannadaprabha News   | Asianet News
Published : Oct 05, 2020, 08:38 AM IST
ಅಕ್ಟೋಬರ್‌ನಲ್ಲೇ ಫೈಟ್‌ ಶೂಟಿಂಗ್‌ ಶುರು, ಬ್ಯಾಡ್‌ ಮ್ಯಾನರ್ಸ್‌ ಸುಕ್ಕಾ ಸಿನಿಮಾ: ಅಭಿಷೇಕ್‌ ಅಂಬರೀಶ್‌

ಸಾರಾಂಶ

‘ಕತೆ ಹೇಳುವುದಕ್ಕೆ ಮೊದಲೇ ಕ್ಯಾರೆಕ್ಟರ್‌ ಹೀಗಿರುತ್ತದೆ ಅಂತ ಒಂದು ಸಾಲು ಹೇಳಿದರು ಸೂರಿ. ಅದನ್ನು ಕೇಳಿದ ತಕ್ಷಣ ನಂಗೆ ಇದು ಸೂಕ್ತವಾಗುತ್ತದೆ, ನನ್ನನ್ನು ಯಾವ ರೀತಿ ನೋಡಬೇಕು ಅಂತ ಜನ ಬಯಸುತ್ತಿದ್ದಾರೋ ಅದೇ ಥರ ಈ ಪಾತ್ರ ಇದೆ ಅಂತ ನಂಗನ್ನಿಸಿತು. ಸೂರಿ ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.’

‘ಜಗತ್ತಲ್ಲಿ ಎಷ್ಟೋ ಪ್ರೊಫೆಷನ್‌ಗಳಿವೆ. ಆದರೆ ನಮ್ಮ ಪ್ರೊಫೆಷನ್‌ ಒಂದೇ ಮೆರಿಟ್‌ಗೆ ಬೆಲೆ ಕೊಡುವಂತಹ ಪ್ರೊಫೆಷನ್‌. ಬ್ಯಾಕ್‌ಗ್ರೌಂಡ್‌ ಇರಲಿ, ಇಲ್ಲದಿರಲಿ, ಹೆಸರಿರಲಿ ಇಲ್ಲದಿರಲಿ ಕಲೆಗೆ ಮಾತ್ರ ಇಲ್ಲಿ ಬೆಲೆ. ಕಲೆ ಇದ್ದರೆ, ಪ್ರತಿಭೆ ಇದ್ದರೆ ಮುಂದೆ ಬರುತ್ತೀರಿ. ಪ್ರತಿಭೆ ಇಲ್ಲದಿದ್ದರೆ ಎಂಥಾ ಬ್ಯಾಕ್‌ಗ್ರೌಂಡ್‌ ಇದ್ದರೂ ಹಂಗೇ ಹೊರಟು ಹೋಗುತ್ತೀರಿ. ಡಾಕ್ಟರ್‌ ಮಗ ಡಾಕ್ಟರ್‌ ಆಗಬಹುದು. ಆತ ಅಪ್ಪನಷ್ಟುಒಳ್ಳೆಯ ಸರ್ಜನ್‌ ಆಗದೇ ಇದ್ದರೂ ಡಾಕ್ಟರ್‌ ಆಗಿ ಉಳಿಯಬಲ್ಲ. ಆದರೆ ಒಬ್ಬ ಆ್ಯಕ್ಟರ್‌ ಮಗ ಒಳ್ಳೆಯ ಆ್ಯಕ್ಟರ್‌ ಆಗಿಲ್ಲದೇ ಹೋದರೆ ಆತ ಚಿತ್ರರಂಗದಲ್ಲಿ ಉಳಿಯಲು ಸಾಧ್ಯವೇ ಇಲ್ಲ.’

ಬ್ಯಾಡ್‌ ಮ್ಯಾನರ್ಸ್‌; ಅಭಿಷೇಕ್‌ ಅಂಬರೀಶ್ ಬರ್ತಡೇಗೆ ಪ್ರೋಮೊ! 

ಅಭಿಷೇಕ್‌ ಅಂಬರೀಶ್‌ ಮಾತು ಯಾವಾಗಲೂ ಹೀಗೆ. ನೇರ ದಿಟ್ಟನಿರಂತರ. ಚಿತ್ರರಂಗಕ್ಕೆ ಕಾಲಿಟ್ಟಒಂದೂವರೆ ವರ್ಷದಲ್ಲಿ ಮತ್ತಷ್ಟುಮಾಗಿದ್ದಾರೆ. ನಿಷ್ಟುರ ನಿಲುವು ಮತ್ತಷ್ಟುಗಟ್ಟಿಯಾಗಿದೆ. ಆರಾಮಾಗಿದೀನಿ, ಸಿನಿಮಾ ಇಲ್ಲದಿದ್ದರೂ ಹೀಗೇ ಇರುತ್ತೇನೆ ಎನ್ನುವ ಆ್ಯಟಿಟ್ಯೂಡ್‌ ಇದೆ. ಬದುಕಿನ ಮೇಲೆ ಪ್ರೀತಿ ಇದೆ. ಇಂಥಾ ಹೊತ್ತಲ್ಲಿ ಅವರು ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್‌’ ಚಿತ್ರದ ಚಿತ್ರೀಕರಣಕ್ಕೆ ರೆಡಿಯಾಗುತ್ತಿದ್ದಾರೆ. ಈಗಾಗಲೇ ಸ್ವಲ್ಪ ಸಣ್ಣ ಆಗಿದ್ದಾರೆ. ಮತ್ತಷ್ಟುಸಣ್ಣ ಆಗುವ ಪ್ರಯತ್ನ ಜಾರಿಯಲ್ಲಿದೆ.

"

ಯಾಕಿಷ್ಟಆಯಿತು ಬ್ಯಾಡ್‌ ಮ್ಯಾನರ್ಸ್‌ ಎಂದು ಕೇಳಿದರೆ ಗುಂಡಿನಂತೆ ಬಂತು ಉತ್ತರ.

‘ಕತೆ ಹೇಳುವುದಕ್ಕೆ ಮೊದಲೇ ಕ್ಯಾರೆಕ್ಟರ್‌ ಹೀಗಿರುತ್ತದೆ ಅಂತ ಒಂದು ಸಾಲು ಹೇಳಿದರು ಸೂರಿ. ಅದನ್ನು ಕೇಳಿದ ತಕ್ಷಣ ನಂಗೆ ಇದು ಸೂಕ್ತವಾಗುತ್ತದೆ, ನನ್ನನ್ನು ಯಾವ ರೀತಿ ನೋಡಬೇಕು ಅಂತ ಜನ ಬಯಸುತ್ತಿದ್ದಾರೋ ಅದೇ ಥರ ಈ ಪಾತ್ರ ಇದೆ ಅಂತ ನಂಗನ್ನಿಸಿತು. ಸೂರಿ ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.’

ಡ್ರಗ್ಸ್ ಕೇಸಲ್ಲಿ ಹೆಸರು: ಅವಕಾಶ ಕಳ್ಕೊಂಡ 'ಗಟ್ಟಿಮೇಳ' ನಟ? 

ಅಭಿಷೇಕ್‌ ಮಾತಲ್ಲಿ ಖುಷಿ ಇದೆ. ಸಿನಿಮಾ ಪಯಣದ ಬಗ್ಗೆ ತೃಪ್ತಿ ಇದೆ. ಚಿತ್ರರಂಗದ ಜರ್ನಿ ಬಗ್ಗೆ ಯೋಚಿಸುತ್ತಾ, ‘ಅಮರ್‌ ಸಿನಿಮಾ ಸಾಫ್ಟ್‌ ಶೇಡ್‌ ಇತ್ತು. ಸಾಫ್ಟ್‌ವೇರ್‌ ಸಿನಿಮಾ, ಕ್ಲಾಸ್‌ ಸಿನಿಮಾ ಅದು. ಆದರೆ ಬ್ಯಾಡ್‌ ಮ್ಯಾನರ್ಸ್‌ ಪೂರ್ತಿ ವಿರುದ್ಧ. ಇದು ಸುಕ್ಕಾ ಸಿನಿಮಾ’ ಎಂದರು. ಆ ಮಾತಲ್ಲಿ ಹೊಸ ಸಿನಿಮಾದಲ್ಲಿ ಮಾಸ್‌ ಹೀರೋ ಆಗುವುದರ ಸೂಚನೆ ಇತ್ತು.

ಅವರು ಮಾತಿಗೆ ಸಿಕ್ಕಿದ್ದು ತಮ್ಮ ಹುಟ್ಟುಹಬ್ಬದ ದಿನ. ಅಂಬರೀಶ್‌ ಸಮಾಧಿಗೆ ನಮಸ್ಕಾರ ಮಾಡಲು ತೆರಳುತ್ತಿದ್ದರು. ‘ಅಂಬರೀಶ್‌ ಮಗನಿಗೆ ಇಂಡಸ್ಟ್ರಿಯಲ್ಲಿ ಒಬ್ಬನೇ ಒಬ್ಬ ವೈರಿ, ದುಷ್ಮನ್‌ ಇಲ್ಲ. ಅದು ನನ್ನ ತಂದೆ ಸಂಪಾದನೆ. ಇಂಡಸ್ಟ್ರಿಯಲ್ಲಿ ಇರುವವರೆಲ್ಲರೂ ನಮ್ಮ ಹಿತೈಷಿಗಳೇ’ ಎಂದರು. ಸ್ವಲ್ಪ ಕೆಣಕಿ ಪ್ರಶ್ನೆ ಕೇಳಿದ್ದಕ್ಕೆ, ಎಲ್ಲರೂ ನಮ್ಮ ಹಿತವರು ಎಂದು ಅಂಬಿ ಸ್ಟೈಲಲ್ಲೇ ಗುಡುಗಿದರು.

ಅಂಬರೀಶ್‌ ನಕ್ಕಂತಾಯಿತು.

ಅಭಿಯ ಸತ್ವ ಹೊರತರುವ ಪ್ರಯತ್ನ: ದುನಿಯಾ ಸೂರಿ

ದುನಿಯಾ ಸೂರಿ ಪ್ರತೀಕ್ಷಣ ಕತೆ ಬಗ್ಗೆ ಯೋಚಿಸುವವರು. ಸದ್ಯಕ್ಕೆ ಫೈಟ್‌ ಕುರಿತು ಯೋಚನೆ ಮಾಡುತ್ತಿದ್ದಾರೆ. ಈ ತಿಂಗಳಲ್ಲೇ ಫೈಟ್‌ ಮೂಲಕ ಶೂಟಿಂಗ್‌ ಶುರು ಮಾಡಲಿದ್ದಾರೆ. ಬ್ಯಾಡ್‌ಮ್ಯಾನರ್ಸ್‌ ಬಗ್ಗೆ ಕೇಳಿದಾಗ ಅವರು ಹೇಳಿದ್ದಿಷ್ಟು- ‘ರೆಬೆಲ್‌ ಅನ್ನುವ ವಿಷಯ ಮತ್ತು ಈ ಹುಡುಗನನ್ನು ಇಟ್ಟುಕೊಂಡು ಹೊಸತಾಗಿ ಏನು ಮಾಡುತ್ತೇವೆ ಅಂತ ಪ್ರಯತ್ನಿಸುತ್ತಿದ್ದೇವೆ. ಇವತ್ತಿನ ಪ್ರೆಸೆಂಟೇಷನ್‌ ಇರುವ ಸಿನಿಮಾ. ಅಭಿಷೇಕ್‌ರಲ್ಲಿ ಒಂದಷ್ಟುಸ್ಟಫ್‌ ಇದೆ. ಅವರ ಸತ್ಯವನ್ನು ತೋರಿಸಬೇಕು’.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?