ರಾಜಸ್ಥಾನ್ ರಾಯಲ್ಸ್ ಪರವಾಗಿ ಆಟವಾಗುತ್ತಿರುವ ಶ್ರೇಯಸ್ ಗೋಪಾಲ್ ಖಾಸಗಿ ಸಂದರ್ಶನವೊಂದರಲ್ಲಿ ತಮಗಿಷ್ಟದ ನಟಿಯರ ಹೆಸರು ರಿವೀಲ್ ಮಾಡಿದ್ದಾರೆ.
ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ ಪರ ಆಟವಾಗುತ್ತಿರುವ ಕನ್ನಡಿಗ ರಾಮಸ್ವಾಮಿ ಶ್ರೇಯಸ್ ಗೋಪಾಲ್ ಆಲ್ರೌಂಡರ್ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ. ರೈಟ್ ಹ್ಯಾಂಡ್ ಬ್ಯಾಟಿಂಗ್, ಲೆಫ್ಟ್ ಹ್ಯಾಂಡ್ ಬೌಲಿಂಗ್ ಮಾಡುವ ಕ್ರಿಕೆಟರ್ ಶ್ರೇಯಸ್ 2011ರಲ್ಲಿ Under19ನಲ್ಲಿ ಆಟವಾಡಿದ್ದರು.
ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ಒದಗಿಸಿದ ಶ್ರೇಯಸ್!
undefined
ಸ್ಟಾರ್ ಸ್ಪೋರ್ಟ್ ವಾಹಿನಿ ನಡೆಸಿದ ಸಂದರ್ಶನದಲ್ಲಿ ಶ್ರೇಯಸ್ ತನ್ನಗಿಷ್ಟದ ನಟಿಯರ ಬಗ್ಗೆ ಮಾತನಾಡಿದ್ದಾರೆ. ನಿಮಗೆ ದೀಪಿಕಾ ಇಷ್ಟನಾ ಅಥವಾ ಕತ್ರಿನಾ ಇಷ್ಟನಾ ಎಂದು ಕೇಳಿದಕ್ಕೆ 'ನನ್ನ ಬಾಲ್ಯದಿಂದಲ್ಲೂ ದೀಪಿಕಾ ನನ್ನ ಕ್ರಶ್. ಅವರು ನನಗೆ ತುಂಬಾ ಇಷ್ಟ' ಎಂದು ಹೇಳಿದ್ದಾರೆ.
ಇನ್ನು ಕನ್ನಡಿಗ ಅಂದ್ಮೇಲೆ ಕನ್ನಡ ಬಗ್ಗೆ ಕೇಳಬೇಕಲ್ವಾ? ಸ್ಯಾಂಡಲ್‌ವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಾಧಿಕಾ ಇವರಿಬ್ಬರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದಕ್ಕೆ ರಾಧಿಕಾ ಪಂಡಿತ್ ಎಂದು ಹೇಳಿದ್ದಾರೆ. ಬಾಲಿವುಡ್- ಸ್ಯಾಂಡಲ್‌ವುಡ್ ಯಾವುದು ಇಷ್ಟ ಎಂದು ಕೇಳಿದಕ್ಕೆ'ಸ್ಯಾಂಡಲ್‌ವುಡ್ ಬಗ್ಗೆ ಹೆಚ್ಚಾಗಿ ಫಾಲೋ ಮಾಡದಿದ್ದರೂ ನನಗೆ ಸ್ಯಾಂಡಲ್‌ವುಡ್ ಇಷ್ಟು' ಎಂದಿದ್ದಾರೆ.
ಸೆಲ್ಫಿ ಕ್ಲಿಕ್ ಮಾಡುತ್ತಿದ್ದ ರಾಧಿಕಾ; ಬೋರಾಗಿ ವಿಡಿಯೋ ಮಾಡಿದ ಯಶ್-ಐರಾ!
ಈ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಶೇರ್ ಮಾಡಲಾಗಿತ್ತು. ಅರೇ ಕನ್ನಡಿಗನಾಗಿ ಇಂಗ್ಲೀಷ್‌ನಲ್ಲಿ ಮಾತನಾಡಿ ಬಾಲಿವುಡ್ ನಟಿ ಕ್ರಶ್ ಎಂದು ಹೇಳಿದ್ದೀರಾ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ.