
ದರ್ಶನ್ (Actor Darshan) ನಟನೆಯ 'ಕಲಾಸಿಪಾಳ್ಯ' ಚಿತ್ರದ ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ಅವರು ಕನ್ನಡ ಸಿನಿಮಾ ಅಭಿಮಾನಿಗಳ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ. ಎಲ್ಲರ ಅಭಿಮಾನಿಗಳೂ ಬೇರೆ ನಟನಟಿಯರ ಸಿನಿಮಾಗಳನ್ನೂ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕಾರಣ, ಎಲ್ಲರೂ ಊಹಿಸಬಹುದಾದಂತೆ, ಇತ್ತೀಚಿನ ಬೆಳವಣಿಗೆಯಾದ 'ದರ್ಶನ್ ಅಭಿಮಾನಿಗಳು ತಾವು ದರ್ಶನ್ ಜೈಲಿನಿಂದ ಬಿಡುಗಡೆ ಆಗೋವರೆಗೆ ಬೇರೆ ನಟರ ಚಿತ್ರಗಳನ್ನು ನೋಡೋದಿಲ್ಲ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆ ನೀಡುತ್ತಿರುವುದು.
ಈ ಬಗ್ಗೆ ಯೂಟ್ಯೂಬ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಓಂ ಪ್ರಕಾಶ್ ರಾವ್ 'ಎಲ್ಲಾರ ಮನೆಯ ದೋಸೆನೂ ತೂತೇರಿ... ಹಿಂದೆ ತಿರುಗಿ ನೋಡಿ, ಒಲೆ ಹಚ್ಚತಾ ಇರ್ತೀವಿ.. ಯಾಕೆ ಇದೆಲ್ಲಾ ಬೇಕು? ಕರ್ನಾಟಕದ ಕಲಾಭಿಮಾನಿ ದೇವರುಗಳೆಲ್ಲಾ ಒಂದೇ.. ನಮ್ಮ ಸಿನಿಮಾನೂ ನೋಡಿ, ಬೇರೆ ಹೀರೋ ಸಿನಿಮಾನೂ ನೋಡಿ, ಅಭಿಮಾನ ಅನ್ನೋದು ನೀವು ನೀವು ಇಷ್ಟ ಪಡೋ ವ್ಯಕ್ತಿಗಳು ಮಾಡೋ ಕೆಲಸಕ್ಕೆ, ಪ್ರತಿಭೆಗೆ.. ಅವ್ರು ಮಾಡೋ ಪರ್ಸನಲ್ ಕೆಲಸಗಳಿಗೂ ದಯವಿಟ್ಟು ಅಭಿಮಾನಿ ಆಗ್ಬೇಡಿ ದಯವಿಟ್ಟು.. ಇದು ಎಲ್ಲರ ಅಭಿಮಾನಿಗಳ ಬಳಿ ನನ್ನ ರಿಕ್ವೆಸ್ಟ್..' ಎಂದಿದ್ದಾರೆ ಕನ್ನಡದ 'ಲಾಕಪ್ ಡೆತ್' ಖ್ಯಾತಿಯ ನಿರ್ದೇಶಕ ಓಂ ಪ್ರಕಾಶ್ ರಾವ್.
ಮಾಸ್ಕ್ಮ್ಯಾನ್ ಬಘೀರನ ಹಿಂದಿದ್ಯಾ ಸೀಕ್ರೆಟ್; ಬಘೀರನಿಗೆ ಸ್ಫೂರ್ತಿನಾ ಬಾಲಿವುಡ್ ಬಿಗ್ ಬಿ?
ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಬಳ್ಳಾರಿ ಜೈಲು ಸೇರಿರುವುದು ಎಲ್ಲರಿಗೂ ಗೊತ್ತು. ಈ ಬಗ್ಗೆ ದರ್ಶನ್ ಅಭಿಮಾನಿಗಳಿಗೆ ಸಹಜವಾಗಿ ಬೇಸರವಿದೆ. ತಮ್ಮ 'ಡಿ ಬಾಸ್' ಜೈಲಿನಿಂದ ಹೊರಗೆ ಬರೋವರೆಗೂ ತಾವು ಬೇರೆ ಯಾವುದೇ ನಟರ ಸಿನಿಮಾ ನೋಡೋದಿಲ್ಲ ಎಂದು ದರ್ಶನ್ ಫ್ಯಾನ್ಸ್ ಹೇಳಿದ್ದಾರೆ. ಈ ಹೇಳಿಕೆ ಹಿನ್ನೆಲೆಯಲ್ಲಿ ಪ್ರಶ್ನೆ ಕೇಳಲಾಗಿದೆ, ಅವರು ಹೀಗೆ ಉತ್ತರಿಸಿದ್ದಾರೆ.
ಅದು ಹಳೆಯ ನ್ಯೂಸ್ ಎಂದುಕೊಳ್ಳುವಂತೆ ಇಲ್ಲ, ಏಕೆಂದರೆ, ದರ್ಶನ್ ಹೊರಗೆ ಬರೋದು ಯಾವತ್ತೋ ಏನೋ..! ಒಟ್ಟಿನಲ್ಲಿ, ತಮ್ಮ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿ ಕಾಟ ಕೊಟ್ಟಿದ್ದಕ್ಕೆ ನಟ ದರ್ಶನ್ ಅವನಿಗೆ ಬುದ್ಧಿ ಕಲಿಸಲು ಮುಂದಾಗಿ ಈ ಅನಾಹುತ ನಡೆದಿದೆ.
ಶ್ರೀವಲ್ಲಿ-ಪುಷ್ಪರಾಜ್ ಬರೋ ದಿನ ಫಿಕ್ಸ್ ಆಗಿದ್ದು ನಿಜ; ಟವೆಲ್ ಹಿಡಿದೇ ನಿಂತ ಫ್ಯಾನ್ಸ್!
ರೇಣುಕಾಸ್ವಾಮಿ ಕೊಲೆ ಆಗಿದ್ದು, ಸದ್ಯ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಆರೋಪಿಗಳಾಗಿ ಜೈಲಿನಲ್ಲಿ ಇದ್ದಾರೆ. ಸದ್ಯ ನಟ ದರ್ಶನ್‌ಗೆ ಬೇಲ್ ಕೂಡ ಸಿಕ್ಕಿಲ್ಲ. ಅವರು ಯಾವತ್ತು ಹೊರಗೆ ಬರುತ್ತಾರೋ, ಮುಂದೆ ಯಾವತ್ತು ಅವರ ನಟನೆಯ ಸಿನಿಮಾ ತೆರೆಗೆ ಬರುತ್ತೋ ಯಾರಿಗೆ ಗೊತ್ತು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.