'ಮತ್ಸ್ಯಗಂಧ' ಚಿತ್ರವು ಉತ್ತರ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸುವ ಕಥಾವಸ್ತುವನ್ನು ಒಳಗೊಂಡಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಕರಾವಳಿ ಎಂದೊಡನೆ ಅದು ಮಂಗಳೂರು ಎಂದುಕೊಳ್ಳುತ್ತಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಕರಾವಳಿ ಇದೆ..
ಸ್ಯಾಂಡಲ್‌ವುಡ್ ಅಂಗಳದಲ್ಲಿ 'ಮತ್ಸ್ಯಗಂಧ' ಘಮಲು ದಿನೇ ದಿನೇ ಹೆಚ್ಚಾಗ್ತಿದೆ. ಚಿತ್ರಮಂದಿರದಲ್ಲಿ ಭರ್ಜರಿ ಮೀನೂಟಕ್ಕೆ ಎಲೆ ಹಾಸಲಾಗ್ತಿದೆ. ಮತ್ಸ್ಯಗಂಧ ಅಡುಗೆಯ ಪರಿಮಳ ಪ್ರೇಕ್ಷಕರ ಬಾಯಲ್ಲಿ ನೀರೂರಿಸುತ್ತಿದೆ. ಇದೀಗ ಬಗೆ ಬಗೆಯ ಕಂಟೆಂಟ್ಸ್ ಗಳನ್ನ ಚಿತ್ರತಂಡ ಒಂದೊಂದಾಗಿ ರಿಲೀಸ್ ಮಾಡ್ತಿದೆ.
ಅದ್ರಂತೆ ಇವತ್ತು 'ಕಡಲ ಒಡಲ ಮೇಲೆ..' ಅನ್ನೋ ಜಾನಪದ ಸೊಗಡು ಭರಿತ ಉತ್ತರ ಕನ್ನಡ ಪರಿಸರ, ಸಂಸ್ಕೃತಿ ಹಾಗೂ ಅಲ್ಲಿನ ಬದುಕಿನ ಚಿತ್ರಣವನ್ನ ಹೇಳುವ ಹಾಡು ರಿಲೀಸ್ ಆಗಿದೆ.
ಪ್ರಶಾಂತ್ ಸಿದ್ದಿ ಸಂಗೀತ ದೇವರಾಜ್ ಪೂಜಾರಿ ಸಾಹಿತ್ಯ ಹೇಮಂತ್ ಹಾಡಿರೋ ಈ ಹಾಡು ಮತ್ಸ್ಯಗಂಧ ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಈಗಾಗ್ಲೇ ಮತ್ಸ್ಯಗಂಧ ಟೀಸರ್ 1.4 ಮಿಲಿಯನ್ ದಾಟಿದೆ. ಭಾಗೀರಥಿ ಹಾಡು ಮಿಲಿಯನ್ ಮುಟ್ತಿದೆ. ಕುವ್ವಾ ಕುವ್ವಾ ಕ್ಲಿಕ್ ಆಗಿದೆ. ಇದ್ರೊಂದಿಗೆ ಮತ್ಸ್ಯ ಗಂಧ ಚಿತ್ರತಂಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸ್ತಿದೆ. ಇದೇ ತಿಂಗಳ 23ಕ್ಕೆ, 23 ಫೆಬ್ರವರಿ 2024 ರಂದು ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.
ಶುರುವಾಗ್ತಿದೆ ಐಶ್ವರ್ಯ ಪಿಸ್ಸೆ-ನಾಗಾರ್ಜುನ ಜೋಡಿ 'ಕಸ್ತೂರಿ' ಕಲರವ; ಸೋಮವಾರದಿಂದ ನೋಡಿ ಸ್ಟಾರ್ ಸುವರ್ಣ!
ಇದೀಗ ರಿಲೀಸ್ ಆಗಿರೋ ಕಡಲ ಒಡಲ ಹಾಡು ಚಿತ್ರದ ಥೀಮನ್ನು ವಿವರಿಸ್ತಿದೆ ಎನ್ನಬಹುದು. ಈ ಹಾಡು ನೋಡ್ತಿದ್ರೆ, ಮತ್ಸ್ಯಗಂಧದ ಮೇಲೆ ನಿರೀಕ್ಷೆ ಮತ್ತಷ್ಟು ಇನ್ನಷ್ಟು ಹೆಚ್ಚಿಸ್ತಿದೆ. ಕನ್ನಡ ಪಿಚ್ಚರ್ ಅರ್ಪಿಸುವ ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್ ನಿರ್ಮಾಣದಲ್ಲಿ ಮತ್ಸ್ಯಗಂಧ ತಯಾರಾಗಿದೆ. ಈ ಚಿತ್ರವನ್ನ ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ಚಿತ್ರಕ್ಕಿದ್ದು, ಪೃಥ್ವಿ ಅಂಬರ್, ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾಬಳ ಈ ಚಿತ್ರದಲ್ಲಿದೆ.
ವಿನಯ್ ರಾಜ್‌ಕುಮಾರ್ 'ಒಂದು ಸರಳ ಪ್ರೇಮಕಥೆ' ಬಿಡುಗಡೆಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್
'ಮತ್ಸ್ಯಗಂಧ' ಚಿತ್ರವು ಉತ್ತರ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸುವ ಕಥಾವಸ್ತುವನ್ನು ಒಳಗೊಂಡಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಕರಾವಳಿ ಎಂದೊಡನೆ ಅದು ಮಂಗಳೂರು ಎಂದುಕೊಳ್ಳುತ್ತಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಕರಾವಳಿ ಇದೆ. ಭಟ್ಕಳ, ಕುಮಟಾ, ಹೊನ್ನಾವರ, ಅಂಕೋಲಾ ಕಾರವಾರ ಸೇರಿದಂತೆ ಹಲವು ಜಿಲ್ಲೆಗಳು ಸಾಕಷ್ಟು ಉದ್ದನೆಯ ಕರಾವಳಿ ತೀರವನ್ನು ಹೊಂದಿವೆ. ಅಲ್ಲಿನ ಸಂಸ್ಖೃತಿ ಮಂಗಳೂರು ಸಂಸ್ಖೃತಿಗಿಂತ ಬಹಳಷ್ಟು ಭಿನ್ನವಾಗಿದೆ. ಆದರೆ, ಈ ಬಗ್ಗೆ ಹೊರಜಗತ್ತಿಗೆ ಅಷ್ಟಾಗಿ ಗೊತ್ತಿಲ್ಲ. ಅದನ್ನು ತಿಳಿಸುವ ಪ್ರಯತ್ನಕ್ಕೆ 'ಮತ್ಸ್ಯಗಂಧ' ಚಿತ್ರವು ಪ್ರಯತ್ನಿಸುತ್ತಿದೆ.
ನಾವು ತಲೆ ಬಗ್ಗಿಸದೇ ಇದ್ದಿದ್ದರೆ ಆಸ್ಪತ್ರೆ ಸೇರಿಕೊಳ್ಳಬೇಕಿತ್ತು; ಯಾಕೆ ಹೀಗಂದಿದ್ರು ನಟ ಡಾ ವಿಷ್ಣುವರ್ಧನ್...!?