'ಬುದ್ದಿವಂತ'ನ ತಲೆಗೆ ಹುಳ ಬಿಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ 'ಒಳ್ಳೇ ಹುಡುಗ' ಪ್ರಥಮ್

Published : Feb 07, 2024, 08:21 PM ISTUpdated : Feb 07, 2024, 08:24 PM IST
'ಬುದ್ದಿವಂತ'ನ ತಲೆಗೆ ಹುಳ ಬಿಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ 'ಒಳ್ಳೇ ಹುಡುಗ' ಪ್ರಥಮ್

ಸಾರಾಂಶ

ಉಪೇಂದ್ರ ಹಾಗು ಪ್ರಥಮ್ ಮಧ್ಯೆ ಅದೇನೋ ಒಂದು ಮಾತುಕತೆ ನಡೆಯುತ್ತಿದೆ. ಆಗ ಪ್ರಥಮ್ 'ಮುಕುಂದ ಮುರಾರಿ ಚಿತ್ರದಲ್ಲಿ ಹೇಳ್ತೀರಾ- ದೇವರಿಲ್ಲ , ಅದೆಲ್ಲ ಭ್ರಮೆ ಅಂತ.. ಕಟ್ ಮಾಡಿದ್ರೆ ಮನೆಲ್ಲಿ ಕೂತ್ಕೊಂಡು ದೇವರ ಪೂಜೆ ಮಾಡ್ತೀರಾ' ಅಂತ ಪ್ರಥಮ್ ಕೇಳುತ್ತಾರೆ. 

ರಿಯಲ್ ಸ್ಟಾರ್ ಖ್ಯಾತಿಯ ಉಪೇಂದ್ರ ಹಾಗೂ ಒಳ್ಳೇ ಹುಡುಗ ಖ್ಯಾತಿಯ ಪ್ರಥಮ್ ಅವರಿಬ್ಬರ ಮಧ್ಯೆ ಸಂಭಾಷಣೆಯೊಂದು ನಡೆದಿದೆ. ಆ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಭಿನ್ನ ಕಾಮೆಂಟ್‌ಗಳು ಬರತೊಡಗಿವೆ. ಅದೇನು ಅಂಥ ಸಂಭಾಷಣೆ ಎಂದರೆ, ಮುಕುಂದ ಮುರಾರಿ (Mukunda Murari Movie )ಚಿತ್ರದ ಡೈಲಾಗ್ ಹಾಗು ನಟ ಉಪೇಂದ್ರರ ನಿಜಜೀವನಕ್ಕೆ ಲಿಂಕ್ ಮಾಡಿ ಪ್ರಥಮ್ ಕೇಳಿರುವ ಪ್ರಶ್ನೆಯದು. ಅದಕ್ಕೆ ಉಪೇಂದ್ರ ಕೊಟ್ಟ ಉತ್ತರ!

ಉಪೇಂದ್ರ (Upendra) ಹಾಗು ಪ್ರಥಮ್ (Pratham) ಮಧ್ಯೆ ಅದೇನೋ ಒಂದು ಮಾತುಕತೆ ನಡೆಯುತ್ತಿದೆ. ಆಗ ಪ್ರಥಮ್ 'ಮುಕುಂದ ಮುರಾರಿ ಚಿತ್ರದಲ್ಲಿ ಹೇಳ್ತೀರಾ- ದೇವರಿಲ್ಲ , ಅದೆಲ್ಲ ಭ್ರಮೆ ಅಂತ.. ಕಟ್ ಮಾಡಿದ್ರೆ ಮನೆಲ್ಲಿ ಕೂತ್ಕೊಂಡು ದೇವರ ಪೂಜೆ ಮಾಡ್ತೀರಾ' ಅಂತ ಪ್ರಥಮ್ ಕೇಳುತ್ತಾರೆ. ಪ್ರಥಮ್ ಪ್ರಶ್ನೆಗೆ ಅಷ್ಟೇ ಕೂಲಾಗಿ ಉತ್ತರಿಸುವ ಉಪೇಂದ್ರ 'ಇದು ಹೇಗಿದೆ ಅಂದ್ರೆ ನೀವು ಸಿನಿಮಾದಲ್ಲಿ ಒಂದು ಹುಡುಗಿನಾ ಲವ್ ಮಾಡಿ ಮದ್ವೆ ಆಗ್ತೀರಾ. ಆದ್ರೆ ನಿಜ ಜೀವನದಲ್ಲಿ ಯಾಕೆ ಅವ್ಳನ್ನ ಕರ್ಕೊಂಡು ಓಡಾಡ್ತಿಲ್ಲ ನೀವು ಎನ್ನುವಷ್ಟು...' ಅಂತ ಹೇಳವಲ್ಲಿಗೆ ವೀಡಿಯೋ ಕಟ್ ಆಗಿದೆ. 

ಉಪೇಂದ್ರ ಬಾಯಿಂದ ಬಂದ ಮುಂದಿನ ಮಾತು ಅಲ್ಲಿ ಇಲ್ಲದಿದ್ದರೂ ಜನರು ಬಗೆಬಗೆಯಾಗಿ ಊಹೆ ಮಾಡಿಕೊಂಡು ಕಾಮೆಂಟ್ ಹಾಕುತ್ತಿದ್ದಾರೆ. ಕೆಲವರು 'ಬುದ್ದಿವಂತನ ಎದುರು ತನ್ನ ಚಿಲ್ಲರೆ ಬುದ್ದಿಯನ್ನು ತೋರಿಸಲು ಹೋಗಿ ಪ್ರಥಮ್ ದಡ್ಡನೆಂದು ಪ್ರೂವ್ ಮಾಡಿಕೊಂಡಿದ್ದಾರೆ' ಎಂದಿದ್ದಾರೆ. ಇನ್ನೂ ಕೆಲವರು 'ಉಪೇಂದ್ರ ಅವರೇ, ಹಾಗಿದ್ದರೆ ನೀವು ಸಿನಿಮಾದಲ್ಲಿ ಹೇಳುವುದೇ ಒಂದು, ನಿಜ ಜೀವನದಲ್ಲಿ ಮಾಡುವುದೇ ಒಂದಾ' ಎಂದು ಕಾಲೆಳಿದಿದ್ದಾರೆ. 

ಅವರಿಗೆ ಭಕ್ತಿ ನಟನೆ ಆಗಿರಲಿಲ್ಲ, ಜೀವನವೇ ಆಗಿತ್ತು; ಹುಬ್ಬು ಸುಟ್ಟರೂ ಧ್ಯಾನ ಮಾಡುತ್ತಿದ್ರಾ ಡಾ ರಾಜ್‌ಕುಮಾರ್..!?

ಇನ್ನೂ ಹಲವರು ಉಪೇಂದ್ರರ ಪರವಾಗಿ ಬ್ಯಾಟ್ ಬೀಸಿ 'ಸಿನಿಮಾದಲ್ಲಿ ಹೇಳಿದ್ದನ್ನೆಲ್ಲ ನಿಜಜೀವನದಲ್ಲಿ ಮಾಡೋದಕ್ಕೆ ಯಾರಿಗಾದರೂ ಆಗುತ್ತಾ? ಅದೊಂದು ಪಾತ್ರವಾಗಿ ನಟಿಸುತ್ತಾರಷ್ಟೇ. ಪ್ರಥಮ್ ಪ್ರಶ್ನೆಯೇ ಅಸಂಭದ್ದ' ಎಂದಿದ್ದಾರೆ. ಒಟ್ಟಿನಲ್ಲಿ, ಅದೊಂದೇ ವೀಡಿಯೋಕ್ಕೆ ವಿಭಿನ್ನ ಎನ್ನುವಷ್ಟು ನೂರಾರು ಕಾಮೆಂಟ್‌ಗಳು ಬಂದಿವೆ. ಅವುಗಳಲ್ಲಿ, ಅವರವರ ಫ್ಯಾನ್ಸ್ ಯಾವ ರೀತಿಯಾಗಿ ತಮ್ಮ ಫೇವರೆಟ್ ನಟನನ್ನು ಸಪೋರ್ಟ್‌ ಮಾಡುತ್ತಾರೆ ಎಂಬುದನ್ನು ಗಮನಿಸಬಹುದು. 

ನಾವು ತಲೆ ಬಗ್ಗಿಸದೇ ಇದ್ದಿದ್ದರೆ ಆಸ್ಪತ್ರೆ ಸೇರಿಕೊಳ್ಳಬೇಕಿತ್ತು; ಯಾಕೆ ಹೀಗಂದಿದ್ರು ನಟ ಡಾ ವಿಷ್ಣುವರ್ಧನ್...!?

ಆದರೆ ಬಹುತೇಕರ ಕಾಮೆಂಟ್ 'ಸಿನಿಮಾ ಬೇರೆ ನಿಜ ಜೀವನ ಬೇರೆ.. ಉಪೇಂದ್ರ ಈ ಪ್ರಶ್ನೆಗೆ ನಿಜವಾಗಿಯೂ ಅವರಿಗೆ ಇರುವ 'ಬುದ್ಧಿವಂತ' ಖ್ಯಾತಿಗೆ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ' ಎಂದು ಉಪೇಂದ್ರರ ಉತ್ತರವನ್ನು ಮೆಚ್ಚಿಕೊಂಡಿದ್ದಾರೆ. 'ಲೋಕೋಃ ಭಿನ್ನ ರುಚಿಃ' ಎಂದಿರುವುದು ಇದಕ್ಕೇ ಅಲ್ಲವೇ' ಎನ್ನಬಹುದೇನೋ!

ದುರಂತ ಕಥೆಯಾಗಿರುವ ಸಮಂತಾ ಅದೆಂಥಾ ಮಾತು ಹೇಳಿದ್ರು; ಅಯ್ಯೋ ಪಾಪ ಅಂತಿದಾರೆ ಫ್ಯಾನ್ಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?