ಧ್ರುವತಾರೆ ನಮ್ಮ 5 ವರ್ಷದ ಕನಸೆಂದು ಬೆಳ್ಳಿತೆರೆಗೆ ಕಾಲಿಟ್ಟ 'ಇನ್ಸ್ಟಾ ಕಪಲ್' ಪ್ರತೀಕ್-ಮೌಲ್ಯ ಜೋಡಿ

ಪ್ರತೀಕ್  ನಿರ್ದೇಶನದ 'ಧ್ರುವತಾರೆ' ಎಂಬ ಟೈಟಲ್ ನ ಫ್ಯಾಮಿಲಿ ಎಂಟರ್ಟೈನರ್ ಸೆಪ್ಟೆಂಬರ್ 20 ರಂದು  ಜಿ.ಪಿ.ಬ್ಯಾನರ್‌ನ ಅಡಿಯಲ್ಲಿ ಬಿಡುಗಡೆಯಾಗಲಿದೆ ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
 


ಆತ್ಮ ವೈ ಆನಂದ್, ವಿದ್ಯಾರ್ಥಿ 

ಇಷ್ಟು ದಿನ ರೀಲ್ಸ್ ಮೂಲಕ ಎಲ್ಲರ ಮನಗೆದ್ದಿದ್ದ ಪ್ರತೀಕ್ ಮತ್ತು ಮೌಲ್ಯ ಸ್ಯಾಂಡಲ್ ವುಡ್ ಗೆ  ಪ್ರವೇಶ ಮಾಡುತ್ತಿದ್ದಾರೆ. ಹೌದು! ಪ್ರತೀಕ್  ನಿರ್ದೇಶನದ 'ಧ್ರುವತಾರೆ' ಎಂಬ ಟೈಟಲ್ ನ ಫ್ಯಾಮಿಲಿ ಎಂಟರ್ಟೈನರ್ ಸೆಪ್ಟೆಂಬರ್ 20 ರಂದು  ಜಿ.ಪಿ.ಬ್ಯಾನರ್‌ನ ಅಡಿಯಲ್ಲಿ ಬಿಡುಗಡೆಯಾಗಲಿದೆ ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

Latest Videos

ಕಳೆದ ವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ 'ಧ್ರುವತಾರೆ' ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ 'ಈ‌‌ ಸಿನಿಮಾ ನಮ್ಮ 5 ವರ್ಷದ ಕನಸು' ಎಂದು ಬರೆದುಕೊಂಡಿದ್ದರು. 'ಒಂದ್ ಕಥೆ ಹೇಳ್ಲ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ಪ್ರತೀಕ್ ಈ‌ ಬಾರಿ  ತಮ್ಮದೇ ಕಥೆಗೆ ಆಕ್ಷನ್ ಕಟ್ ಹೇಳಿದ್ದು, ಸೂರಜ್ ಜೋಯಿಸ್ ಸಂಗೀತ ನೀಡಿದ್ದಾರೆ.
 



'ಧ್ರುವತಾರೆ‌ ಓಂದು ಆಧುನಿಕ ಕಾಲದ ಪ್ರೇಮ ಕಥೆಯಾಗಿದೆ, ಕುಟುಂಬದ ಎಲ್ಲಾ ಸದಸ್ಯರು ನೋಡಬಹುದಾದಂತ ಸಿನಿಮಾ' ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿರುವ ಈ ಜೋಡಿ , ಸಿನಿಮಾ ಯಶಸ್ಸು ಕಾಣಲು ಕಾದು ನೋಡುತ್ತಿದ್ದಾರೆ. ಪ್ರತೀಕ್ ಮತ್ತು ಮೌಲ್ಯ  ನಾಯಕ-ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವು ದೂಡ್ಡ  ತಾರಾ ಬಳಗವನ್ನೇ ಹೊಂದಿದೆ, ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ರಮೇಶ್ ಭಟ್, ಮೂಗು ಸುರೇಶ್ ಹಾಗೂ ಅಶ್ವಿನ್ ರಾವ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

click me!