ಸಿನಿಮಾಗಳೂ ಅಷ್ಟೇ, ಕಲಾವಿದರು ಅಷ್ಟೇ, ಇಂದು ಭಾಷೆಯ ಹಂಗಿಲ್ಲದೇ ಎಲ್ಲರೂ ಎಲ್ಲಾ ಕಡೆ ನಟಿಸುವ ಒಳ್ಳೆಯ ಪರಿಪಾಠ ಬೆಳೆದುಬಂದಿದೆ. ಹೀಗಾಗಿ ಇನ್ಮುಂದೆ ನಟಿಸಲು ಸಿನಿಮಾ ಎನ್ನುವುದಷ್ಟೇ, ಯಾವ ಲ್ಯಾಂಗ್ವೇಜ್ ಎಂಬ..
'ನನ್ನ ಕೆರಿಯರ್ ಶುರುವಿನಲ್ಲಿ ನಾನು ಕನ್ನಡಕ್ಕೇ ಕಮಿಟ್ ಆಗಿದ್ದೆ. ಕಾರಣ, ನನಗೆ ನಟನೆಗೆ ಕಂಫರ್ಟೇಬಲ್ ಎನಿಸಿದ್ದು ಕನ್ನಡ ಲ್ಯಾಂಗ್ವೇಜ್. ನನಗೆ ಗೊತ್ತಿರೋದು ಕನ್ನಡ ಭಾಷೆ ಮಾತ್ರ. ಅದು ಬಿಟ್ರೆ ನನಗೆ ಬೇರೆ ಯಾವುದೇ ಭಾಷೆ ನೆಟ್ಟಗೆ ಬರಲ್ಲ. ಅದೊಂದೇ ಮನಸ್ಸಿಲ್ಲಿ ಇರೋದ್ರಿಂದ ನಾನು ಕನ್ನಡದಲ್ಲೇ ಇರ್ಬೇಕು ಅಂತ, ನಂಗೆ ಕನ್ನಡ ಸಿನಿಮಾ ಅನ್ನೋದು ಕಂಫರ್ಟ್ ಝೋನ್ ಆಗ್ಬಿಟ್ಟಿತ್ತು. ಹೀಗಾಗಿ ನಾನು ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿರಲಿಲ್ಲ.
ಆದ್ರೆ ಯಾವಾಗ ಕೋವಿಡ್ ಬಂತೋ ಆವಾಗ ಜಗತ್ತಲ್ಲಿ ಎಲ್ಲವೂ ಚೇಂಜ್ ಆಗೋದಕ್ಕೆ ಶುರುವಾಯ್ತು. ಪ್ಯಾನ್ ಇಂಡಿಯಾ ಸಿನಿಮಾಗಳು ಬರೋದಕ್ಕೆ ಶುರುವಾಯ್ತು, ಓಟಿಟಿಯಲ್ಲಿ ಹೊಸ ಹೊಸ ರೀತಿಯ ಸಿನಿಮಾಗಳು, ವೆಬ್ ಸಿರೀಸ್ ಎಲ್ಲ ಬರೋದಕ್ಕೆ ಶುರುವಾಯ್ತು. ಎಲ್ಲಾ ಕಡೆ ಔಟ್ ಆಫ್ ಬಾಕ್ಸ್ ಥಿಂಕ್ ಮಾಡೋದಕ್ಕೆ ಶುರು ಮಾಡಿದ್ರು. ನಂಗೆ ಆ ಟೈಮ್‌ನಲ್ಲಿ ಅವಕಾಶಗಳು ಸ್ವಲ್ಪ ಜಾಸ್ತಿನೇ ಬರೋದಕ್ಕೆ ಶುರುವಾಯ್ತು. ಯಾಕೆ ನಾನು ಈ ಚಾನ್ಸ್ ಮಿಸ್ ಮಾಡ್ಕೋಬೇಕು?
undefined
'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಆಗಿದ್ದೇಕೆ, ವಿಕ್ಟೋರಿಯಾ ಫಾಲ್ಸ್ ಮೇಲೆ ಕ್ಯಾಮೆರಾ ಇಟ್ಟಿದ್ರಾ ದ್ವಾರಕೀಶ್!
ಇಂಥ ಅವಕಾಶಗಳು ಬಂದಾಗ ಯೂಸ್ ಮಾಡ್ಕೋಬೇಕು ಅಂತ ಆಗ ಥಿಂಕ್ ಮಾಡೋಕೆ ಶುರು ಮಾಡಿದೆ. ಆಕ್ಚುವಲಿ ಹೇಳ್ಬೇಕು ಅಂದ್ರೆ ಕನ್ನಡ ಹೀರೋಯಿನ್ಸ್‌ಗೆ ತೆಲುಗು ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶಗಳ ಜತೆ ರೆಸ್ಪೆಕ್ಟ್ ಕೂಡ ಇದೆ. ತುಂಬಾ ಚೆನ್ನಾಗಿ ವೆಲ್‌ಕಮ್ ಮಾಡ್ತಾರೆ. ಹೀಗಾಗಿ ನಾನು ಕೂಡ ತೆಲುಗು ಚಿತ್ರರಂಗದ ಅವಕಾಶವನ್ನು ವೆಲ್‌ಕಮ್ ಮಾಡಿ ಆ ಭಾಷೆಯ ಚಿತ್ರಗಳಲ್ಲಿ ನಟಿಸಲು ಶುರು ಮಾಡಿದೆ. ಈಗಂತೂ ನಟನಟಿಯರಿಗೆ ಭಾಷೆಯ ಬ್ಯಾರಿಕೇಡ್ ಇಲ್ಲ.
ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!
ಸಿನಿಮಾಗಳೂ ಅಷ್ಟೇ, ಕಲಾವಿದರು ಅಷ್ಟೇ, ಇಂದು ಭಾಷೆಯ ಹಂಗಿಲ್ಲದೇ ಎಲ್ಲರೂ ಎಲ್ಲಾ ಕಡೆ ನಟಿಸುವ ಒಳ್ಳೆಯ ಪರಿಪಾಠ ಬೆಳೆದುಬಂದಿದೆ. ಹೀಗಾಗಿ ಇನ್ಮುಂದೆ ನಟಿಸಲು ಸಿನಿಮಾ ಎನ್ನುವುದಷ್ಟೇ, ಯಾವ ಲ್ಯಾಂಗ್ವೇಜ್ ಎಂಬ ಪ್ರಶ್ನೆಯೇ ಉದ್ಭವಿಸುವ ಚಾನ್ಸ್ ಕಡಿಮೆ' ಎಂದಿದ್ದರು ಕನ್ನಡ ಮೂಲದ ನಟಿ ಆಶಿಕಾ ರಂಗನಾಥ್ (Ashika Ranganath).ಅಂದಹಾಗೆ, ನಟಿ ಆಶಿಕಾ ರಂಗನಾಥ್ ಅವರು ಮದಗಜ, ನಾ ಸಾಮಿ ರಂಗ, ಮುಗುಳ್ನಗೆ, ರಾಂಬೋ 2, ರೈಮೋ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಯ್ಯೋ, ಸ್ಟಾರ್ ಹೀರೋಯಿನ್ ಆದ್ರೂ ರಶ್ಮಿಕಾ ಮಂದಣ್ಣ ಅಮ್ಮನ ಬಳಿ ಇದನ್ನು ಕೇಳೋದು ಮಾತ್ರ ಬಿಟ್ಟಿಲ್ವಂತೆ!