
City Lights Song Release-Duniya Vijay Son Samrat Vijay Matter-ಮಗ ಸಾಮ್ರಾಟ್ ಹಾಗ್ಊ ಕುಟುಂಬದ ಬಗ್ಗೆ ನಟ ದುನಿಯಾ ವಿಜಯ್ ಮಾತು
ಬಗ್ಗೆ ದುನಿಯಾ ನಟ ದುನಿಯಾ ವಿಜಯ್ ಅವರಿಗೆ ಡಿವೋರ್ಸ್ ಸಿಕ್ಕಿರುವ ಸಂಗತಿ ಬಹುತೇಕ ಎಲ್ಲರಿಗೂ ಗೊತ್ತಿದೆ. ನಟ ದುನಿಯಾ ವಿಜಯ್ ಹಾಗೂ ಮೊದಲ ಪತ್ನಿ ನಾಗರತ್ನ ಜೋಡಿಗೆ ಕರ್ನಾಟಕ ಹೈಕೋರ್ಟ್ ಡಿವೋರ್ಸ್ ಮಂಜೂರು ಮಾಡಿದೆ. ಪತ್ನಿಗೆ ₹2 ಕೋಟಿ ಜೀವನಾಂಶ ನೀಡಲು ನಟ ದುನಿಯಾ ವಿಜಯ್ ಅವರಿಗೆ ಕೋರ್ಟ್ ಆದೇಶಿಸಿದ್ದು, ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಿಜಯ್ ವಹಿಸಿಕೊಳ್ಳಲಿದ್ದಾರೆ.
ನ್ಯಾಯಾಲಯದ ತೀರ್ಪನ್ನು ಗೌರವಿಸಿ, ಹೊಸ ಬದುಕು ಆರಂಭಿಸುವುದಾಗಿ ವಿಜಯ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿದ್ದಾರೆ. ಇತ್ತ, ದುನಿಯಾ ವಿಜಯ್ ಮಾಜಿ ಪತ್ನಿ ನಾಗರತ್ನ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಇಬ್ಬರ ಪೋಸ್ಟ್‌ಗೆ ಕೂಡ ನೆಟ್ಟಿಗರು ವಿಭಿನ್ನ ಪೋಸ್ಟ್ ಮಾಡುತ್ತಿದ್ದಾರೆ.
ತಮ್ಮ ನಿರ್ದೇಶನ ಹಾಗೂ ಮಗಳ ನಟನೆಯ 'ಸಿಟಿ ಲೈಟ್ಸ್' ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ಸಹಜವಾಗಿ ಇತ್ತೀಚಿನ ಬೆಳವಣಿಗೆ, ಅಂದರೆ ದುನಿಯಾ ವಿಜಯ್ ಡಿವೋರ್ಸ್ ಹಾಗೂ ಕಾಲೇಜಿಗೆ ಹೋಗುತ್ತಿರುವ ಮಗನ ಹೊಡೆದಾಟದ ಘಟನೆ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಟ ದುನಿಯಾ ವಿಜಯ್ ಉತ್ತರ ಕೊಟ್ಟಿದ್ದಾರೆ.
'ಫ್ಯಾಮಿಲಿ ವಿಚಾರದ ಬಗ್ಗೆ ನಾನು ಇಲ್ಲಿ ಈಗ ಏನೂ ಮಾತನಾಡಲಾರೆ.. ಈಗಾಗಲೇ ನಾನು ನನ್ನ ಸಾಂಸಾರಿಕ ಜೀವನದ ಬಗ್ಗೆ ಸೋಶಿಯಲ್ ಪೋಸ್ಟ್ ಹಾಕಿದ್ದೇನೆ.. ಈಗ ನಾನು ಅದರ ಬಗ್ಗೆ ಏನೂ ಹೆಚ್ಚಿನ ಸಂಗತಿ ಹೇಳಲಾರೆ.. ನಾನು ಹೇಳಬೇಕಾದ ಎಲ್ಲ ವಿಚಾರವನ್ನೂ ನಾನು ಪೋಸ್ಟ್ ಮೂಲಕ ಹೇಳಿದ್ದೇನೆ, ಮಕ್ಕಳ ವಿಚಾರಕ್ಕೆ ಸಂಬಂಧಪಟ್ಟು ಕೂಡ ನಾನು ಬರೆದುಕೊಂಡಿದ್ದೇನೆ.
ಮಗನ ಪ್ರಕರಣದ ಬಗ್ಗೆಯೂ ಕ್ಲ್ಯಾರಿಟಿ ಕೊಟ್ಟ ವಿಜಿ, 'ಮಗನೇ ಆದ್ರೂ ತಪ್ಲು ಮಾಡಿದ್ರೂ ತಪ್ಪು ತಪ್ಪೇ.. ಕಾನೂನು ಅದನ್ನು ನೋಡಿಕೊಳ್ಳುತ್ತದೆ.. ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ.. ಮಗನ ಜೊತೆ ಮಾತಾಡಿದ್ದೇನೆ, ಬುದ್ಧಿ ಹೇಳಿದ್ದೇನೆ. ಮಕ್ಕಳು ಅಂದಾಗ ಜಗಳ ಇರುತ್ತೆ.. ಎಲ್ಲರ ಲೈಫ್ ನಲ್ಲೂ ಇದ್ದೇ ಇರುತ್ತೆ.. ನಾನೂ ಕೂಡ ನನ್ನ ಮಗನಿಗೆ ಬುದ್ದಿ ಹೇಳಿದ್ದೇನೆ. ಆದರೆ, ಫ್ಯಾಮಿಲಿ ವಿಚಾರಗಳನ್ನು ಮತ್ತೆ ಮತ್ತೆ ಎಲ್ಲಾ ಕಡೆಯಲ್ಲೂ ಮಾತಡಲ್ಲ, ಮಾತನಾಡೋಕೂ ಇಷ್ಟಪಡಲ್ಲ' ಎಂದು ಕ್ಲಾರಿಟಿ ಕೊಟ್ಟು ನಟ ವಿಜಯ್ ತಮ್ಮ ಮಾತು ಮುಗಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.