
ಪ್ಯಾನ್ ಇಂಡಿಯಾ ನಟ ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ವಿನೂತನವಾಗಿ ಮೂಡಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾರರ್ ಟ್ರೇಲರ್ ದೊಡ್ಡ ಪ್ರಮಾಣದಲ್ಲಿ ಹಂಚಿಕೆ ಆಗುತ್ತಿದ್ದು, ಕುತೂಹಲ ಮತ್ತು ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸಿದೆ.
‘6-5=2’ ಚಿತ್ರವು ಇದೇ ರೀತಿ ಕುತೂಹಲ ಮೂಡಿಸಿತ್ತು. ಸೆ.11ಕ್ಕೆ ತೆರೆಗೆ ಬರಲಿರುವ ಈ ಚಿತ್ರವನ್ನು ‘ಬ್ಲಿಂಕ್’ ಚಿತ್ರದ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶಿಸಿದ್ದಾರೆ. ವಿಶೇಷ ಎಂದರೆ ಎರಡು ವಾರಗಳ ಮೊದಲೇ ಆಯ್ದ ಪ್ರೇಕ್ಷಕರಿಗೆ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ಹಾಕಲಾಗಿತ್ತು.
ದೀಕ್ಷಿತ್ ಶೆಟ್ಟಿ, ‘ಇದೊಂದು ಯೂನಿಕ್ ಕಾನ್ಸೆಪ್ಟ್ ಒಳಗೊಂಡ ಫೌಂಡ್ ಫೂಟೇಜ್ ಹಾರರ್, ಥ್ರಿಲ್ಲರ್ ಚಿತ್ರ. ನಮ್ಮ ಚಿತ್ರದಲ್ಲಿ ಬಿಜಿಎಂ ಇಲ್ಲ. 12 ಕ್ಯಾಮೆರಾ ಉಪಯೋಗಿಸಿ ಚಿತ್ರೀಕರಿಸಿದ್ದೇವೆ. ನಾನು ಬೇರೆ ಯಾವುದೇ ಭಾಷೆ ಚಿತ್ರದಲ್ಲಿ ನಟಿಸಿದರೂ, ಅಲ್ಲಿ ದುಡಿದ ದುಡ್ಡನ್ನು ಕನ್ನಡಕ್ಕೆ ತಂದು ಹಾಕುತ್ತೇನೆ. ಕಳೆದ ವಾರ ನಮ್ಮ ಚಿತ್ರದ ಪೇಯ್ಡ್ ಪ್ರೀಮಿಯರ್ ನಡೆಸಿದೆವು, ಬುಕ್ ಮೈ ಶೋನಲ್ಲಿ ಕೆಲವೇ ಗಂಟೆಗಳಲ್ಲಿ ಫುಲ್ ಆಯ್ತು. ಸಿನಿಮಾ ನೋಡಿದ ನಂತರ ಅದ್ಭುತ ಥ್ರಿಲ್ಲಿಂಗ್ ಎಕ್ಸ್‌ಪಿರಿಯನ್ಸ್ ಅನುಭವಿಸಿದ ಖುಷಿ ಪ್ರೇಕ್ಷಕರ ಮುಖದಲ್ಲೂ ಕಾಣುತ್ತಿತ್ತು’ ಎನ್ನುತ್ತಾರೆ.
ಶ್ರೀನಿಧಿ, ‘ಹಾರರ್ ಚಿತ್ರವನ್ನು ಅದೆಷ್ಟು ನೈಜವಾಗಿ ತರಬಹುದು ಎಂದು ಯೋಚಿಸಿದಾಗ ಈ ಕಾನ್ಸೆಪ್ಟ್ ಹೊಳೆಯಿತು. ಆರಂಭದಲ್ಲಿ ಚಿತ್ರಕ್ಕೆ ‘ಬ್ಲಾಗ್’ ಎನ್ನುವ ಹೆಸರಿತ್ತು. ಯಾಕೆಂದರೆ ಚಿತ್ರದಲ್ಲಿರುವ ಎಲ್ಲರೂ ಬ್ಲಾಗರ್‌ಗಳೇ. ಇದು ಬ್ಲಾಗರ್‌ಗಳ ಬದುಕಿನ ಕತೆ. ಮೊದಲ 20 ನಿಮಿಷ ನಿಮ್ಮನ್ನು ನಗಿಸುತ್ತದೆ. ನಂತರ ಸೀಟ್ ಎಡ್ಜ್‌ನಲ್ಲಿ ಕೂರಿಸುತ್ತೆ’ ಎಂದರು. ಭರತ್, ಜೀವನ್ ಶಿವಕುಮಾರ್, ತೇಜಸ್ ಎಸ್.ಎಂ, ಪ್ರಿಯಾ ಜೆ.ಆಚಾರ್, ನಲ್ಮೆ ನಚಿಯಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.