ಎರಡು ತಿಂಗಳ ಕಾಲ ಹಾಸಿಗೆ ಹಿಡಿದಿದ್ದು ನಿಜ ಆದರೆ ಪ್ಯಾರಲೈಸ್ ಆಗಿದ್ದು ಸುಳ್ಳು. ಆರೋಗ್ಯದ ಬಗ್ಗೆ ನಟಿ ಮಾನ್ಯ ಕೊಟ್ಟ ಅಪ್ಡೇಟ್......
ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಮಾನ್ಯ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಅತಿ ಹೆಚ್ಚು ತಮಿಳು ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ಈ ಸುಂದರಿ ಒಮ್ಮೆ ಅನಾರೋಗ್ಯದಿಂದ ಎರಡು ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು. ಅಯ್ಯೋ ಮಾನ್ಯಗೆ ಪ್ಯಾರಲೈಸ್ ಆಗಿದೆ ಹಾಗೆ ಹೀಗೆ ಎಂದು ಸುದ್ದಿ ಹಬ್ಬಿತ್ತು. ಈಗ ಸ್ವತಃ ಮಾನ್ಯ ಸ್ಪಷ್ಟನೆ ನೀಡಿದ್ದಾರೆ.
'ನನ್ನ ಮಗಳನ್ನು ನೋಡಿಕೊಳ್ಳಲು ಭಾರತದಿಂದ ನನ್ನ ತಾಯಿ ವಿದೇಶಕ್ಕೆ ಆಗಮಿಸಿದ್ದರು. ಆಗಷ್ಟೇ ಅವರಿಗೆ ಹೆಲ್ತ್ ಇನ್‌ಶ್ಯೂರೆನ್ಸ್ ಮತ್ತು ಗ್ರೀನ್ ಕಾರ್ಡ್ ಮಾಡಿಸಲಾಗಿತ್ತು. ತಾಯಿಗೆ ಸಕ್ಕರೆ ಕಾಯಿಳೆ ಇದ್ದ ಕಾರಣ ಕಿಡ್ನಿ ಸಮಸ್ಯೆ ಆಗಿತ್ತು. ಎರಡು ಕಿಡ್ನಿಗಳನ್ನು ಅಮ್ಮ ಕಳೆದುಕೊಂಡು ಆಗ ನಾನು ನನ್ನ ಕಿಡ್ನಿ ಕೊಡಲು ರೆಡಿಯಾಗಿತ್ತು ಆದರೆ ವೈದ್ಯರು ಹೇಳುತ್ತಾರೆ ನಾನು ಗರ್ಭಿಣಿ ಆಗಿದ್ದಾಗ ನನ್ನ ಕಿಡ್ನಿ ಒಂದು ಡ್ಯಾಮೇಜ್ ಆಗಿತ್ತು ಹೀಗಾಗಿ ತೆಗೆಯುವುದಿಲ್ಲ ಎಂದುಬಿಟ್ಟರು. ಟ್ರಾನ್ಸ್‌ಪ್ಲಾಂಟ್ ಮಾಡಿಸುವುದಕ್ಕೆ ನಾನು ಲಿಸ್ಟ್‌ನಲ್ಲಿ ಹೆಸರು ಹಾಕಿಸಿ ಕಾದು ಕಾದು ಕಳೆದ ವರ್ಷ ಆಪರೇಷನ್ ಆಯ್ತು. ಆಪರೇಷನ್ ಆದ್ಮೇಲೆ ಇನ್‌ಫೆಕ್ಷನ್ ಅಂತ ಎರಡು ಎರಡು ದಿನಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆ, ಈಗ ಸ್ವಲ್ಪ ತಿಂಗಳಿಂದ ಆರೋಗ್ಯವಾಗಿದ್ದಾರೆ. ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಸಿಗುತ್ತದೆ ಅಲ್ಲದೆ ನಾವು ಸರಿಯಾಗಿ ಊಟ ಮಾಡಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.' ಎಂದು ರಘುರಾಮ್ ಯೂಟ್ಯೂಬ್ ಸಂದರ್ಶನದಲ್ಲಿ ಮಾನ್ಯ ಮಾತನಾಡಿದ್ದಾರೆ.
ಗಂಡು ದಿಕ್ಕಿಲ್ಲದ ಸಂಸಾರವನ್ನು ನಾನೇ ನೋಡಿಕೊಂಡೆ; 'ಶಾಸ್ತ್ರಿ' ನಟಿ ಮಾನ್ಯ ಭಾವುಕ
ನಮ್ಮ ಫ್ಯಾಮಿಲಿಯಲ್ಲಿ ಎಲ್ಲರಿಗೂ ಡಯಾಬಿಟಿಕ್ಸ್ ಇದೆ ಹೀಗಾಗಿ ಮುನ್ನೆಚರಿಗೆ ಅಂತ ನಾನು ಮೊದಲೇ ಸ್ವೀಟ್ ತಿನ್ನುವುದು ಕಡಿಮೆ ಮಾಡಿದ್ದೀನಿ. ಯಾರೇ ಕೇಕ್ ಕೊಟ್ಟರು ನಾನು ಒಂದು ಸ್ಪೂನ್ ತಿಂದು ಸುಮ್ಮನಾಗುತ್ತಿದ್ದೆ. ಇಷ್ಟರ ನಡುವೆ ನನ್ನ ಆರೋಗ್ಯ ಸಮಸ್ಯೆ ಆಗಿತ್ತು. ಕೊರೋನಾ ಸಮಯದಲ್ಲಿ ಕೆಲಸದವರನ್ನು ನಾನು ಮನೆಗೆ ಕರೆಸಿಕೊಳ್ಳುತ್ತಿರಲಿಲ್ಲ, ಹಾಸಿಗೆ ಸರಿಸಿ ಕೆಲಸ ಮಾಡುವಾಗ ನನ್ನ ಬೆನ್ನು ಮೂಳೆಗೆ ಪೆಟ್ಟು ಬಿತ್ತು ಇದರಿಂದ ಎರಡು ತಿಂಗಳು ನಾನು ಬೆಡ್ ರೆಸ್ಟ್‌ನಲ್ಲಿ ಇರಬೇಕಿತ್ತು. ನನ್ನ ಪತಿ ದುಬೈನಲ್ಲಿ ಹೀಗಾಗಿ ಸಹಾಯಕ್ಕೆ ಯಾರೂ ಇರಲಿಲ್ಲ ಆಗ ವಾಕರ್ ಬಳಸಿ ನಾನು ಕೆಲಸ ಮಾಡುತ್ತಿದ್ದೆ. ತುಂಬಾ ಫಿಸಿಕಲ್ ಥೆರಪಿ ಮಾಡಿಸಿಕೊಂಡು ಬೇಗ ಚೇತರಿಸಿಕೊಂಡೆ ಎಂದು ಮಾನ್ಯ ಹೇಳಿದ್ದಾರೆ.