ಅಪ್ಪು ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದ ರಂಗಾಯಣ ರಘು. ಆ ಕರಾಳ ದಿನ ಯಾರೂ ಮರೆಯುವುದಿಲ್ಲ....
ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸುಮಾರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಅಪ್ಪು ಸಿನಿಮಾ ಅಂದ್ಮೇಲೆ ರಘು ಅಣ್ಣ ಇರಲೇ ಬೇಕು ಅನ್ನುವಷ್ಟು ಇವರ ಕಾಂಬಿನೇಷನ್ ಹಿಟ್ ಆಗಿತ್ತು. ಅಪ್ಪು ಕೊನೆಯ ಜೇಮ್ಸ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಪ್ಪು ಹೋದ ಮೇಲೆ ತುಂಬಾ ನೋವಾಯ್ತು ಎಂದು ಒಂದು ಹಳೆ ಫೋನ್ ನೋಡಿ ಭಾವುಕರಾಗಿದ್ದಾರೆ.
'ಅಪ್ಪು ಸರ್ ನೆನಪಾಗುತ್ತಾರೆ. ಏಕೆಂದರೆ ನಾನು 17 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರು ಹೋದ ದಿನ ಎಲ್ಲರಿಗೂ ಕರಾಳ ನೆನಪು. ಇಡೀ ಊರು ಅಳುತ್ತಿದ್ದಂತ ದೃಶ್ಯಗಳನ್ನು ಎಲ್ಲರೂ ನೋಡಿದ್ದೀವಿ. ಅಗಲುವ ಮೂರ್ನಾಲ್ಕು ದಿನಗಳ ಮುನ್ನ ಫೈಟಿಂಗ್ ಸೀನ್ ಮಾಡಿದ್ವಿ ಆಗ ಯಾವುದೇ ರೀತಿಯ ಸೂಚನೆ ಇರಲಿಲ್ಲ. ಜಾಕಿ ಚಿತ್ರದಲ್ಲಿ ಈ ಫೋನ್ ಬಳಸಿ ಅಪ್ಪು ಫೋಟೋ ಕ್ಲಿಕ್ ಮಾಡಿದ್ದು. ಅಪ್ಪುಗೆ ಇದ್ದಂತ ದೊಡ್ಡ ಶಕ್ತಿ ಏನೆಂದರೆ ದೊಡ್ಡವರಿಗೆ ಹೇಗೆ ಮರ್ಯಾದೆ ಕೊಡುತ್ತಾರೆ ಚಿಕ್ಕವರಿಗೂ ಅದೇ ರೀತಿ ನೋಡಿಕೊಳ್ಳುತ್ತಾರೆ. ಸಿನಿಮಾ ಶೂಟಿಂಗ್ ಅಂತ ಪ್ರಯಾಣ ಮಾಡುವಾಗ ಕಣ್ಣು ಇಲ್ಲದವರು ಒಂದು ರಾಜ್‌ಕುಮಾರ್ ರೀತಿ ಇರುವೆ ಎನ್ನುತ್ತಿದ್ದರು. ಅವರನ್ನು ಯಾವತ್ತೂ ಮರೆಯಲಾಗಷ್ಟು. ಪ್ರತಿಯೊಬ್ಬ ಕಲಾವಿದನನ್ನು ಪಟ್ಟಿಗೆ ಸೇರಿಸುವ ಶಕ್ತಿ ಇದ್ದಿದ್ದು ಅಪ್ಪು ಸರ್‌ಗೆ ಮಾತ್ರ' ಎಂದು ಸ್ಟಾರ್ ಸುವರ್ಣ ವಾಹಿನಿ ಆಯೋಜಿಸಿದ ಕಳೆದ ವರ್ಷದ ದಸರ ಹಬ್ಬದಂದು ರಘು ಮಾತನಾಡಿದ್ದಾರೆ.
ಈಗಲೂ ಟೀಸರ್, ಟೈಟಲ್, ಪೋಸ್ಟರ್, ಮ್ಯೂಸಿಕ್, ಪ್ರೀ ರಿಲೀಸ್ ಲಾಂಚ್ ಕಾರ್ಯಕ್ರಮವಿದ್ದರೂ ಅಪ್ಪು ಸ್ಥಾನದಲ್ಲಿ ಇರುವ ಅಶ್ವಿನಿ ಪುನೀತ್ ರಾಜ್‌ಕುಮಾರ್‌ರನ್ನು ಆಹ್ವಾನಿಸುತ್ತಾರೆ. ಬಣ್ಣದ ಪ್ರಪಂಚಕ್ಕೆ ಕಾಲಿಡುತ್ತಿರುವ ಕಲಾವಿದರು ವಜ್ರೇಶ್ವರಿ ಕಂಬೈನ್ಸ್ ಮತ್ತು ಪಿಆರ್‌ಕೆ ಸ್ಟುಡಿಯೋಗೆ ಕಾಲಿಟ್ಟು ಅಪ್ಪು ಆಶೀರ್ವಾದ ಪಡೆಯುತ್ತಾರೆ. ಸಿನಿಮಾ ಮಾತ್ರವಲ್ಲ ಹೋಟೆಲ್ ಮತ್ತು ಬಟ್ಟೆ ಅಂಗಡಿ ಓಪನಿಂಗ್‌ಗೂ ಕರೆಯುತ್ತಾರೆ. ಅಪ್ಪು ಮಾಡುತ್ತಿದ್ದ ಸಮಾಜ ಸೇವೆಯನ್ನು ಅಶ್ವಿನಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪು ಕನಸಿನಂತೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಒಂದು ಡಿಗ್ರಿ ಇರ್ಬೇಕು ಇಲ್ಲ ಮನೆ ಮಾಡ್ಬೇಕು; ಗಾಯಕ ವಿಜಯ್ ಪ್ರಕಾಶ್‌ಗೆ ಮಾವನಿಂದ ಎದುರಾದ ಸವಾಲ್!