ರಾಜ್ ಬಿ ಶೆಟ್ಟಿ ತಮ್ಮ ಲವ್ವಿನ ರಹಸ್ಯ ಬಿಟ್ಟುಕೊಟ್ಟಿದ್ದಾರೆ. ನನ್ನ ಗರ್ಲ್ ಫ್ರೆಂಡ್ ಮಳೆಯಂತಾದರೆ, ಅಮ್ಮ ನದಿಯಂತೆ ಅಂದಿದ್ದಾರೆ. ಅಂದಹಾಗೆ ಅವರೀಗ ಲವ್ವಲ್ಲಿ ಬಿದ್ದಿರೋ ಹುಡುಗಿ ಯಾರು?
ರಾಜ್ ಬಿ ಶೆಟ್ಟಿ ಒಂದಿಷ್ಟು ಕಾಲ ಗಾಯಬ್ ಆಗಿರ್ತಾರೆ. ಆ ಟೈಮಲ್ಲಿ ಅವರು ಯಾರ ಕಣ್ಣಿಗೂ ಬೀಳಲ್ಲ, ಯಾರ ಜೊತೆಗೂ ಮಾತಾಡಲ್ಲ. ಯಾರಿಗೂ ಸಂದರ್ಶನ ಕೊಡಲ್ಲ. ಫೋನು ಸ್ವಿಚ್ ಆಫ್ ಅಥವಾ ನಾಟ್ ರೀಚೆಬಲ್. ಯಾವಾಗ ತನ್ನ ಸಿನಿಮಾ ಅನೌನ್ಸ್ ಮಾಡ್ತಾರೋ ಆವಾಗಿಂದ ಕಂಪ್ಲೀಟ್ ಆಕ್ಟಿವ್ ಆಗಿ ಬಿಡ್ತಾರೆ. ಲವ್ವಿಂದ ಹಿಡಿದು ಹಳೇ ಲವ್ವರ್ ತನಕ, ಹುಡುಗರ ಜೊತೆಗೆ ಪೋಲಿ ಜೋಕ್‌ನಿಂದ ಹಿಡಿದು ಫಿಲಾಸಫಿ ತನಕ ಎಲ್ಲವನ್ನೂ ಮಾತಾಡ್ತಾರೆ. ಸದ್ಯಕ್ಕೀಗ ಈ ತಿಂಗಳ ಕೊನೆಗೆ ಅವರ ಟೋಬಿ ಸಿನಿಮಾ ರಿಲೀಸ್ ಇರುವ ಕಾರಣ ಎಲ್ಲ ಕಡೆ ಫುಲ್ ಆಕ್ಟಿವ್ ಇದ್ದಾರೆ. ಈ ನಡುವೆ ಅವರ ಲವ್ ಲೈಫು ಸುದ್ದಿಯಲ್ಲಿದೆ.
ರಾಜ್ ಬಿ ಶೆಟ್ಟಿ ಲುಕ್, ಅವರು ಮಾತಾಡೋ ರೀತಿ ಎಲ್ಲ ನೋಡಿದ್ರೆ ವಯಸ್ಸು ನಲವತ್ತರ ಹತ್ತಿರತ್ತಿರ ಇರಬಹುದು ಅನ್ನೋ ಅನುಮಾನ ಬರುತ್ತೆ. ಆದರೆ ಅವರು ತಮ್ಮ ಗೆಳೆಯರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಅವರಿಂದ ಚಿಕ್ಕವರು. 1987ರಲ್ಲಿ ಹುಟ್ಟಿದ ಇವರಿಗೆ ಇನ್ನೂ ಮೂವತ್ತಾರು - ಮೂವತ್ತೇಳರ ಹರೆಯ. ಆದರೆ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ತನ್ನ ತಾಕತ್ತೇನು ಅನ್ನೋದನ್ನು ಇಡೀ ಇಂಡಿಯಾಗೆ ತೋರಿಸಿಕೊಟ್ಟ ಪ್ರತಿಭಾವಂತ.
ಹೀಗಿರೋ ರಾಜ್ ಶೆಟ್ರಿಗೆ ಇಲ್ಲೀವರೆಗೆ ಲವ್ವಾಗಿಲ್ವಾ. ರಕ್ಷಿತ್ ಶೆಟ್ಟಿ ಜೊತೆಗೆ ಕಾಂಪಿಟಿಷನ್‌ಗೆ ಬಿದ್ದ ಹಾಗೆ ಇವರೂ ಯಾಕೆ ಇನ್ನೂ ಬ್ಯಾಚ್ಯುಲರ್ ಆಗಿದ್ದಾರೆ ಅನ್ನೋದು ಹಲವರ ಪ್ರಶ್ನೆ. ಆದರೆ ರಾಜ್ ಶೆಟ್ಟಿ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ. ತಾನೀಗ ಒಂದು ಹುಡುಗಿ ಜೊತೆಗೆ ರಿಲೇಶನ್‌ಶಿಪ್‌ನಲ್ಲಿ ಇರೋದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ಆ ಹುಡುಗಿ ಯಾರು, ಅವರಿಬ್ಬರ ಲವ್‌ಸ್ಟೋರಿ ಏನು? ಅನ್ನೋ ಪ್ರಶ್ನೆಗೆ ಇಲ್ಲಿ ಉತ್ತರ ಇದೆ.
ಟೋಬಿ ಟ್ರೈಲರ್ ಅಷ್ಟೊಂದು ಹಿಟ್ ಆಗುವುದಕ್ಕೆ ಏನು ಕಾರಣ?
ರಾಜ್ ಬಿ ಶೆಟ್ಟಿ ಕಾಲೇಜಲ್ಲಿ ಓದುತ್ತಿರುವಾಗಲೇ ಪ್ರೀತಿಯಲ್ಲಿ (Love) ಬಿದ್ದವರು. ಪ್ರೀತಿ ವಿಚಾರದಲ್ಲಿ ಅವರ ವ್ಯಾಖ್ಯಾನವೇ ಬೇರೆ. ಒಂದಲ್ಲ ಎರಡಲ್ಲ ಸುದೀರ್ಘ ಆರು ವರ್ಷದ ಒಬ್ಬ ಹುಡುಗಿಯನ್ನ ಮನಸಾರೆ ಪ್ರೀತಿಸಿ ಬಳಿಕ ಆ ಪ್ರೀತಿಯನ್ನು ಕಳೆದುಕೊಂಡಿದ್ದಾರೆ ರಾಜ್ ಶೆಟ್ಟಿ. ಆ ಪ್ರೀತಿಯನ್ನು ಕಳೆದುಕೊಂಡ ಬಳಿಕ ಆದ ಬದಲಾವಣೆಗಳೇ ಇದೀಗ ಈ ಹಂತಕ್ಕೆ ಅವರನ್ನು ತಂದು ನಿಲ್ಲಿಸಿದೆ ಎಂದೂ ಹೇಳಿಕೊಳ್ಳುತ್ತಾರವರು. 'ಡಿಗ್ರಿಯಲ್ಲಿ ಒಬ್ಬಳು ಹುಡುಗಿ ಇದ್ದಳು. ನನ್ನ ಮತ್ತು ಅವಳ ನಡುವೆ ಆರು ವರ್ಷದ ರಿಲೇಷನ್(Relationship) ಇತ್ತು. ಆವತ್ತೆ ನಾನು ಅವಳಿಗೆ ಹೇಳಿದ್ದೆ, ಒಂದು ವೇಳೆ ನೀನು ಬಿಟ್ಟು ಹೋಗುತ್ತಿಯಾ ಎಂದರೆ ನಾನು ಯಾವುದೇ ಕಾರಣಕ್ಕೂ ಕಾರಣ ಕೇಳಲ್ಲ ಎಂದಿದ್ದೆ. ಆದರೆ, ಯಾಕೋ ಗೊತ್ತಿಲ್ಲ, ಆರು ವರ್ಷದ ಬಳಿಕ ಹಾಗೇ ಆಯ್ತು. ಆಗ ಒಂದು ವಿಷಯ ನನಗೆ ಗೊತ್ತಾಯ್ತು. ಅವಳು ನನ್ನನ್ನು ಬಿಟ್ಟು ಹೋಗದಿದ್ದರೆ, ನಾನು ಇನ್ನೂ ಕೆಟ್ಟ ಮನುಷ್ಯನಾಗಿಯೇ ಉಳಿಯುತ್ತಿದ್ದೆ ಎಂದು. ಹಾಗಂತ ಈಗ ನಾನೇನೂ ತುಂಬ ಒಳ್ಳೆಯವನಲ್ಲ. ಆದರೆ ಬ್ರೇಕಪ್ ಆಗಿ ಮುಂದೆ ಹೋಗ್ತಾ ಹೋಗ್ತಾ ನನಗೇ ನಿಧಾನಕ್ಕೆ ಅರ್ಥ ಆಗೋಕೆ ಶುರುವಾಯ್ತು. ಅವಳಿಗೆ ಪ್ರೀತಿ ಕೊಡೋಕೇ ಬರಲಿಲ್ಲ ನಂಗೆ ಅಂತ. ಅವಳು ಬ್ರೇಕಪ್ (breakup) ಮಾಡಿದ್ರಿಂದ ನಾನು ಬೆಳೆದೆ. ಆ ಬ್ರೇಕಪ್‌ನಿಂದ ನಾನು ಅವಳನ್ನು ದ್ವೇಷಿಸುವುದಿಲ್ಲ. ಬದಲಿಗೆ ಗೌರವಿಸುತ್ತೇನೆ. ನೀನು ಯೋಗ್ಯ ಅಲ್ಲ ಎಂದು ಅವಳು ತೋರಿಸಿದಳು' ಎಂದು ಹಳೇ ಲವ್ವಿನ ಕಥೆ ಹೇಳ್ತಾರೆ. ಆಮೇಲೇ ಒಂದು ಭಗ್ನಪ್ರೇಮ ಆಗಿದೆ. ಈಗ ಮತ್ತೆ ಲವ್ವಲ್ಲಿ ಬಿದ್ದಿದ್ದಾರೆ. 'ನಾವೀಗ ಇಬ್ಬರೂ ಸೇರಿ ಜೀವನವನ್ನು ಹುಡುಕುತ್ತಿದ್ದೇವೆ. ಅವಳಿಗೂ ಸಾಕಷ್ಟು ಹುಡುಕಾಟಗಳಿವೆ. ನನಗೂ ಹುಡುಕಾಟಗಳಿವೆ. ನಂದೆನೂ ರೂಲ್ಸ್ (rules) ಇಲ್ಲ, ಅವಳದ್ದೂ ಏನೂ ರೂಲ್ಸ್ ಇಲ್ಲ. ಇಬ್ಬರು ಹ್ಯಾಪಿಯಾಗಿರಬೇಕು (happy) ಅಷ್ಟೇ. ನೀನು ಬದುಕು ಕಲಿ, ನಾನೂ ಕಲಿಯುತ್ತೇನೆ. ನೋಡೋಣ ಎಂದಿದ್ದಾರೆ. ಒಟ್ನಲ್ಲಿ ನಡೆಯುತ್ತಿದೆ" ಎಂದಿದ್ದಾರೆ ರಾಜ್ ಶೆಟ್ಟಿ.
ಆ ಹುಡುಗಿ ಯಾರು ಅಂತ ಕೇಳಿದ್ರೆ ಸುಳೇ ನಗ್ತಾರೆ. ಆಕೆ ಯಾರು ಅನ್ನೋದನ್ನು ಅವರೇ ಹೇಳಬೇಕು.
Megha Shetty: ಮರಾಠಿ ಸಿನಿಮಾದಲ್ಲಿ ಜೊತೆಜೊತೆಯಲಿ 'ಅನು' ಮಿಂಚಿಂಗ್!