
ಪುಟ್ಟ ಗೌರಿ ಮದುವೆ, ಕನ್ನಡತಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಸುಂದರಿ ರಂಜನಿ ರಾಘವನ್. ನೆಗೆಟಿವ್ ಮತ್ತು ಪಾಸಿಟಿವ್ ಅಭಿಪ್ರಾಯ ಮತ್ತು ಟ್ರೋಲ್‌ಗಳನ್ನು ಎದುರಿಸಿರುವ ನಟಿ ಒಮ್ಮೆ ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಬಿಟ್ಟಿ. ಯಾಕೆ? ಎಂದು ಪ್ರಶ್ನೆ ಹಾಕಿದಾಗ ಸಿಕ್ಕ ಉತ್ತರ ಇಲ್ಲಿದೆ....
'ನಾನು ಪುಟ್ಟ ಗೌರಿ ಸೀರಿಯಲ್‌ನಲ್ಲಿ ಆಕ್ಟ್ ಮಾಡುವಾಗ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆಕ್ಟಿವ್ ಆಗಿ ಇರಲಿಲ್ಲ. ಆಕ್ಟಿವ್ ಆಗಿ ಇರಬೇಕು ಅನ್ನೋದು ತಲೆಯಲ್ಲಿ ಇಟ್ಟುಕೊಳ್ಳಲಿಲ್ಲ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದ ಕಾರಣ ನನ್ನನ್ನು ನಾನು ಎಲ್ಲೂ ಎಕ್ಸ್‌ಪ್ರೆಸ್ ಮಾಡಿಕೊಳ್ಳಲು ಹೋಗುತ್ತಿರಲಿಲ್ಲ. ಯಾರಿಗೂ ನಾನು ಅರ್ಥ ಮಾಡಿಸುವ ಅಗತ್ಯವಿಲ್ಲ ಆದರೆ ಸಮಯ ಉತ್ತರ ಕೊಡುತ್ತದೆ ಬಿಡು ಅಂದುಕೊಳ್ಳುತ್ತಿದ್ದೆ. ಸೀರಿಯಲ್ ಮತ್ತು ಟ್ರೋಲ್‌ಗೂ ಸಂಬಂಧ ಇಲ್ಲ ಅಂತ ಸುಮ್ಮನೆ ಇರುತ್ತಿದ್ದೆ. ಸೀರಿಯಲ್‌ನಲ್ಲಿ ಒಂದು ಸೀನ್ ಇತ್ತು ನಾನು ಕಾಡಿಗೆ ಹೋಗುತ್ತಿದ್ದೆ ಅಲ್ಲಿ ಹುಲಿ ಬರ್ತಿತ್ತು...ಆಗಷ್ಟೇ ಸೋಷಿಯಲ್ ಮೀಡಿಯಾ ಭೂಮ್ ಆಗುತ್ತಿತ್ತು. ಅದನ್ನು ನೋಡಿ ದೂರ ಉಳಿದುಬಿಡೋಣ ಅನಿಸುತ್ತಿತ್ತು. ಕನ್ನಡತಿ ಧಾರಾವಾಹಿ ಬರುವ ಸಮಯಲ್ಲಿ ಸಂಪೂರ್ಣ ಪಾಸಿಟಿವ್ ಆಗಿ ಬಿಡ್ತು. ನನ್ನ ಕಡೆಯಿಂದ ಏನೂ ಬದಲಾವಣೆ ಆಗಿಲ್ಲ ನಾನು ಮಾಡಿರುವುದು ಕೆಲಸ ಒಂದೇ. ಆಗ ಜನರಿಗೆ ನನ್ನ ಕೆಲಸ ಇಷ್ಟ ಆಗುತ್ತಿರಲಿಲ್ಲ ಇವತ್ತು ಮಾಡಿದ ಕೆಲಸ ಇಷ್ಟ ಆಯ್ತು ಹೀಗಾಗಿ ಅವರೇ ಹುಡುಕಿಕೊಂಡು ಬಂದರು. ನಾವೆಲ್ಲರೂ ಒಂದೇ ಆದರೆ ದೇಹ ಬೇರೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಆ ಒಬ್ಬ ವ್ಯಕ್ತಿನ ಭೇಟಿ ಮಾಡಿಲ್ಲ ಅಂತ ತುಂಬಾ ಕೊರಗಿದೆ: ಮೇಘನಾ ರಾಜ್
ರಾಜಹಂಸ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಂಜನಿ ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ, ಮತ್ತು ಕಾಂಗರೂ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಯಲ್ಲಿ ಹಕುನಾ ಮಟಾಟ ಸೀರಿಸ್‌ನಲ್ಲಿ ನಟಿಸಿದ್ದಾರೆ. ಈ ಹಿಂದೆ ಕಿಲಾಡಿ ಚೆನ್ನಮ್ಮ, ಆಕಾಶ ದೀಪ, ಸೂಪರ್ ಮಿನಿಟ್ ಸೀಸನ್ 1, ಬಿಗ್ ಬಾಸ್ ಕನ್ನಡ ಸೀಸನ್ 7 ನಲ್ಲಿ ಮಿಂಚಿದ್ದಾರೆ. ಹಲವು ಸಲ ಅನುಬಂಧ ಅವಾರ್ಡ್, ಚಿತ್ತಾರ ಅವಾರ್ಡ್ ಹಾಗೂ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘ ಪ್ರಶಸ್ತಿ ಪಡೆದಿದ್ದಾರೆ.
ಮುಂಜಾನೆ 4 ಗಂಟೆಗೆ ಗಾಯತ್ರಿ ಮಂತ್ರ ಓದಿದ ನಂತರ ಜಿಮ್‌ಗೆ ಹೋಗುವುದು; ಅನುಪಮಾ ಗೌಡ ದಿನಚರಿ ನಿಜಕ್ಕೂ ಶಾಕಿಂಗ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.