ಏನ್ ಫ್ರೀ ಅಗಿ ಕೆಲಸ ಮಾಡ್ತಿದ್ದೀನಾ ಹಣ ಎಲ್ಲಿಂದ ಬರುತ್ತೆ ಅಂತ ಕೇಳೋಕೆ? ರಚಿತಾ ರಾಮ್ ಫುಲ್ ಗರಂ

By Vaishnavi Chandrashekar  |  First Published Jan 9, 2025, 11:50 AM IST

ರಚಿತಾ ರಾಮ್ ಐಷಾರಾಮಿ ಜೀವನದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕೊಟ್ಟ ಖಡಕ್ ಉತ್ತರವಿದು... ಹಣ ಎಲ್ಲಿಂದ ಬರುತ್ತೆ ಗೊತ್ತಾ? 


ಸುಮಾರು 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ರಚಿತಾ ರಾಮ್‌ಗೆ ಎಲ್ಲಿಂದ ಹಣ ಬರುತ್ತೆ? ಎಷ್ಟು ಕೋಟಿ ಸಂಭಾವನ ಪಡೆಯುತ್ತಿದ್ದಾರೆ? ದುಬಾರಿ ಕಾರು ಖರೀದಿಸಲು ಎಲ್ಲಿಂದ ಹಣ ಬಂತು? ಪ್ರತಿಯೊಂದನ್ನು ಪ್ರಶ್ನೆ ಮಾಡಿ ಟೀಕೆ ಮಾಡುತ್ತಿರುವ ವ್ಯಕ್ತಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ ಡಿಂಪಲ್ ಕ್ವೀನ್.

'ಎಲ್ಲಿಂದ ಹಣ ಬರುತ್ತಾ? ನಾನು ಏನಾದ್ರೂ ಫ್ರೀ ಆಗಿ ಕೆಲಸ ಮಾಡುತ್ತಿದ್ದೀನಾ? ಏನೂ ಸಿನಿಮಾ ಮಾಡದೆ ಮನೆಯಲ್ಲಿ ಆರಾಮ್ ಆಗಿ ಕೂತ್ಕೊಂಡಿದ್ದು ರಾಣಿ ತರ ಇದ್ರೆ ಹಣ ಎಲ್ಲಿಂದ ಬರುತ್ತೆ ಅಂತ ಕೇಳಬಹುದು. ಇಲ್ಲಿ ಮತ್ತೊಬ್ಬರನ್ನು ಪ್ರಶ್ನೆ ಮಾಡುವ ಅರ್ಹತೆನೇ ಇಲ್ಲ ನಮಗೆ. ನನಗೆ ಹಣ ಎಲ್ಲಿಂದ ಬರುತ್ತೆ ಅಂತ ನನ್ನ ತಂದೆ ತಾಯಿ ಕೇಳಿದರೆ ಉತ್ತಮ. ನನಗೆ ಜನ್ಮ ಕೊಟ್ಟವರು ಪ್ರಶ್ನೆ ಮಾಡಿದಾಗ ಎಲ್ಲಿಂದ ಹಣ ಬರ್ತಿದೆ ಎಂದು ಉತ್ತರ ಕೊಡುವುದು ನನ್ನ ಕರ್ತವ್ಯ. ಕೆಲಸ ಮಾಡ್ತಿದ್ರೂ ಈ ರೀತಿ ಕೇಳ್ತಿದ್ದಾರೆ ಅಂದ್ರೆ....ಹೇಳುವ ರೀತಿಯಲ್ಲಿ ಹೇಳುತ್ತೀವಿ ಅಷ್ಟೇ.' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಚಿತಾ ರಾಮ್ ಮಾತನಾಡಿದ್ದಾರೆ.

Tap to resize

Latest Videos

ಯಾರ ಜೊತೆಗೋ ಹೋಗಿ ಇರುವವಳು ನಾನಲ್ಲ; ಲಾಯರ್ ಜಗದೀಶ್ ಕೊಂಕು ಮಾತಿಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್

'ಯಾವುದೇ ಬ್ಯಾಗ್ರೌಂಡ್‌ ಇಲ್ಲದೆ ಬೆಳೆಯುತ್ತಿರುವ  ಪ್ರತಿ ಗಂಡುಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಪ್ರತಿ ದಿನ ಏನಾದರೂ ಒಳ್ಳೆಯದಾಗಬೇಕು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಲೈಫ್‌ ಸ್ಟೈಲ್ ಬದಲಾಯಿಸಿಕೊಳ್ಳೋಣ ಅನಿಸುತ್ತದೆ. ಜೊತೆಯಲ್ಲಿ ಇರುವ ಪ್ರತಿಯೊಬ್ಬರು ಚೆನ್ನಾಗಿ ಆಗುತ್ತಿರುವಾಗ ನೀವು ಬದಲಾಗಬೇಕು ಅನಿಸುತ್ತದೆ. ಎಲ್ಲರೂ ಏನ್ ಏನೋ ಸಾಧನೆ ಮಾಡುತ್ತಿದ್ದಾರೆ. ನನಗೆ ಸ್ಫೂರ್ತಿ ಆಗಿರುವುದು ದರ್ಶನ್ ಸರ್, ಯಶ್ ಸರ್ ಮತ್ತು ಗಣೇಶ್ ಸರ್ ಎನ್ನಬಹುದು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೋಡಿದ್ದೀನಿ....ಇನ್ಫೋಸಿಸ್ ನಾರಾಯಣ ಮೂರ್ತಿ ಸರ್ ಮತ್ತು ಸುಧಾಮೂರ್ತಿ ಮೇಡಂನ ನೋಡಿ ಕಲಿಯಬೇಕು. ಆಗ ಅವರು ಏನು ಮಾಡುತ್ತಿದ್ದರು ಈಗ ಅವರು ಹೇಗಿದ್ದಾರೆ? ನಮ್ಮ ಲೈಫ್‌ಸ್ಟೈಲ್ ಬದಲಾಗುತ್ತಿದೆ ಅಂದ್ರೆ ಮತ್ತೊಬ್ಬರು ಕಾಂಟ್ರಿಬ್ಯೂಟ್ ಮಾಡುತ್ತಿದ್ದಾರೆ ಅಂತಲ್ಲ. ನಾನು ಎಷ್ಟೋ ವರ್ಷಗಳಿಂದ ಕಷ್ಟ ಪಟ್ಟು ಕೆಲಸ ಮಾಡುತ್ತಿರುವಾಗ ಯಾಕೆ ನಾನು ಹೆದರಿಕೊಳ್ಳಬೇಕು?' ಎಂದು ರಚಿತಾ ರಾಮ್ ಹೇಳಿದ್ದಾರೆ. 
ಸೀರೆನೇ ಬೇಕು ಅನ್ನೋದು ಈ ಕಾರಣ; ರಚಿತಾ ರಾಮ್ ಸೀಕ್ರೆಟ್ ಲೀಕ್ ಮಾಡಿದ ಡಿಸೈನರ್

'ತಂದೆ ತಾಯಿ ಒಡಹುಟ್ಟಿದವರು ಹೊರತು ಪಡಿಸಿದರೆ ಸಂಬಂಧಿಕರೇ ಒಂದಿಷ್ಟು ಮಾತನಾಡುತ್ತಾರೆ. ಇನ್ನು ಲಾಯರ್ ಜಗದೀಶ್ ಬಗ್ಗೆ ಏನು ಹೇಳಬೇಕು? ನಾನು ನನ್ನ ಕೆಲಸ ಮಾಡುತ್ತಿದ್ದೀನಿ. ಸುಮಾರು 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೀನಿ ಅದಕ್ಕೆ ಪಡೆಯಬೇಕಾಗಿರುವ ಸಂಭಾವನೆ ಪಡೆಯುತ್ತಿದ್ದೀನಿ. ಅವಶ್ಯಕತೆ ಇರುವ ಕಡೆ ಮಾತ್ರ ಮಾತನಾಡುತ್ತೀನಿ. ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುತ್ತೀನಿ ಇಲ್ಲವಾದರೆ ಮನೆಯಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತೀನಿ. ನೀವು ಹೇಳಿದ ವ್ಯಕ್ತಿ ವಯಸ್ಸಿನಲ್ಲಿ ದೊಡ್ಡವರು ಜೀವನದಲ್ಲಿ ಅನುಭವ ಆಗಿರುವವರು ಅದಕ್ಕೆ ಮರ್ಯಾದೆ ಕೊಟ್ಟು ಅಗೌರವಿಸಲು ನನಗೆ ಇಷ್ಟವಿಲ್ಲ. ಅವರು ಮಾತನಾಡುತ್ತಿರುವ ಅಂತೆ ಕಂತೆಗಳ ಬಗ್ಗೆ ಯಾಕೆ ಮಾತನಾಡಬೇಕು. ಕೆಟ್ಟ ಚಟುವಟಿಕೆಗಳಲ್ಲಿ ನಾನು ತೊಡಗಿಸಿಕೊಂಡಿದ್ದರೆ ನನ್ನ ಜೀವನ ನನ್ನ ಇಷ್ಟ ಎಂದು ಹೇಳುತ್ತಿದ್ದೆ ಇದ್ಯಾವುದು ನಾನು ಮಾಡಿಲ್ಲ ಅಂದಾಗ ಯಾಕೆ ಯೋಚನೆ ಮಾಡಬೇಕು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಚಿತಾ ರಾಮ್ ಉತ್ತರಿಸಿದ್ದಾರೆ.

ಮತ್ತೆ ಕೂದಲಿಗೆ ಕತ್ತರಿ ಹಾಕಿದ ರಚಿತಾ ರಾಮ್; ಸಿಕ್ಕಾಪಟ್ಟೆ ಶಾರ್ಟ್ ಹೇರ್ ಯಾಕೆ ಬುಲ್ ಬುಲ್ ಎಂದ ನೆಟ್ಟಿಗರು

click me!