ಮುದ್ದು ಮಗಳ ಮುದ್ದಾದ ವಿಡಿಯೋ ಶೇರ್ ಮಾಡಿದ ಮಿಲನಾ... ಪರಿಯ ನಗುವಿಗೆ ಮನಸೋತ ಫ್ಯಾನ್ಸ್

By Pavna Das  |  First Published Jan 9, 2025, 10:46 AM IST

ಚಂದನವನದ ನಟಿ ಮಿಲನಾ ನಾಗರಾಜ್ ತಮ್ಮ ಮುದ್ದು ಮಗಳ ಜೊತೆಗಿನ ಮುದ್ದಾದ ವಿಡಿಯೋ ಶೇರ್ ಮಾಡಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 
 


ಸ್ಯಾಂಡಲ್’ವುಡ್ ನ ನ್ಯೂ ಮಾಮ್ ಅಂದ್ರೆ ಮಿಲನಾ ನಾಗರಾಜ್ (Milana Nagraj), ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತಮ್ಮ ಮಗಳ ಜೊತೆಗಿನ ಫೊಟೊ ಹಾಗೂ  ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಮಗಳ ಜೊತೆಗಿನ ಮುದ್ದಾದ ವಿಡಿಯೋ ಹಂಚಿಕೊಂಡಿದ್ದು, ಈ ಕ್ಯೂಟ್ ವಿಡಿಯೋಗೆ (cute video) ಸಿಕ್ಕಾಪಟ್ಟೆ ಲೈಕ್ಸ್ ಬಂದಿದ್ದು, ಅಭಿಮಾನಿಗಳು ಅಮ್ಮ ಮಗಳ ಜೋಡಿಯನ್ನು ಕೊಂಡಾಡಿದ್ದಾರೆ. 

2024 ರಲ್ಲಿ ಪೋಷಕರಾಗಿ ಬಡ್ತಿ ಪಡೆದ ಸಂಭ್ರಮದಲ್ಲಿರುವ ಜನಪ್ರಿಯ ಸೆಲೆಬ್ರಿಟಿಗಳಿವರು…

Tap to resize

Latest Videos

 ಮಿಲನಾ ಹಾಗೂ ಕೃಷ್ಣ (Milana and Krishna) ದಂಪತಿಗಳ ಪುತ್ರಿ ಮುದ್ದು ಪರಿಗೆ ಇದೀಗ 4 ತಿಂಗಳು ತುಂಬಿದ್ದು. ಇದೇ ಖುಷಿಯಲ್ಲಿ ಮಗಳ ಕ್ಯೂಟ್ ವಿಡಿಯೋವನ್ನು ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ. ಜೊತೆಗೆ ನಮ್ಮ ಮುದ್ದು ಪರಿಗೆ ಇದೀಗ 4 ತಿಂಗಳು ಪೂರ್ತಿಯಾಗಿದೆ, ನಿನ್ನ ನಗು ನಮ್ಮ ಜಗತ್ತನ್ನು ಬೆಳಗುತ್ತಿದೆ ಎಂದು ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ.  ಪರಿಯ ನಗುವಿಗೆ ಮನಸೋತ ಅಭಿಮಾನಿಗಳು ಕಾಮೆಂಟ್ ಮೂಲಕ ತಮ್ಮ ಪ್ರೀತಿ, ಆಶೀರ್ವಾದವನ್ನು ಹರಸಿದ್ದಾರೆ. 

ಮದ್ವೆ ಆದ್ಮೇಲೆ ಜಾಸ್ತಿನೇ ಸಿನಿಮಾ ಮಾಡಿದ್ದೀನಿ ಅದರ ಬಗ್ಗೆ ಕಾಮೆಂಟ್ ಮಾಡಲ್ಲ; ಅವಕಾಶ ಕಡಿಮೆ ಆಯ್ತು ಎನ್ನುವವರಿಗೆ ಮಿಲನಾ ಉತ್ತರ

ಮಿಲನಾ ಗೆಳತಿಯಾಗಿರುವ ಅಮೃತಾ ಅಯ್ಯಂಗಾರ್ ಕಾಮೆಂಟ್ ಮಾಡಿ, ಬೆಸ್ಟ್ ಸ್ಮೈಲಿಂಗ್ ಪ್ರಿನ್ಸೆಸ್ (smiling princes) ಅವಾರ್ಡ್ ನಮ್ಮ ಕ್ಯೂಟೆಸ್ಟ್ ಲಿಟಲ್ ಪ್ರಿನ್ಸೆಸ್ ಪರಿಗೆ ಹೋಗುತ್ತೆ ಎಂದಿದ್ದಾರೆ. ಇನ್ನು ಅದ್ವಿತಿ ಶೆಟ್ಟಿ ಆಕೆಯ ಸ್ಮೈಲ್ ಮೇಡ್ ಮೈ ಡೇ ಎಂದು ಕಾಮೆಂಟ್ ಮಾಡಿದ್ದಾರೆ.  ನಟಿ ಶರಣ್ಯ ಶೆಟ್ಟಿ (Sharanya Shetty)ತುಂಬಾನೆ ಕ್ಯೂಟ್ ಆಗಿದ್ದಾಳೆ ಎಂದಿದ್ದಾರೆ. ಅಮ್ಮ ಮಗಳು ಯಾವಾಗ್ಲೂ ಹೀಗೆ ನಗುನಗುತ್ತಲೇ ಇರಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಜೊತೆಗೆ ಪುಟ್ಟ ಕಂದಮ್ಮನಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಹರಸಿದ್ದಾರೆ. 

ನನ್ನ ನಟನೆ ನೋಡ್ಲಿಲ್ಲ, ಟ್ಯಾಲೆಂಟ್‌ ನೋಡ್ಲಿಲ್ಲ ಎನ್ನುತ್ತಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ ಮಿಲನಾ ಓಪನ್‌ ಮಾತು!

ಅಂದಹಾಗೆ, ಕಳೆದ ವರ್ಷ ಅಂದರೆ 2024ರ ಸೆಪ್ಟೆಂಬರ್ 5ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳನ್ನು ಡಾರ್ಲಿಂಗ್ ಕೃಷ್ಣ(Darling Krishna) ಹಾಗೂ ಮಿಲನಾ ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದರು. ಮಗಳನ್ನು ಪ್ರೀತಿಯಿಂದ ಈ ಜೋಡಿ ಪರಿ ಎಂದು ಕರೆದಿದ್ದಾರೆ. ಮಗುವಾದ ಒಂದು ತಿಂಗಳಲ್ಲಿ ನಟಿ ತಮ್ಮ ಸಿನಿಮಾ ಪ್ರೊಮೋಷನ್ ಗೆ ಬಂದಿದ್ದು, ತಮ್ಮ ತಾಯ್ತನ ಹಾಗೂ ವರ್ಕ್ ಲೈಫ್ ಎರಡನ್ನೂ ಸಹ ಮಿಲನಾ ಬ್ಯಾಲೆನ್ಸ್ ಮಾಡುತ್ತಿದ್ದಾರೆ. 
 

click me!