ಯಾಕೆ ಪೂರ್ಣಿಮಾ ನಿರ್ಮಾಣ ಸಂಸ್ಥೆಯಿಂದ ರಾಮ್‌ಕುಮಾರ್ ದೂರ ಉಳಿದುಬಿಟ್ಟರು? ಯಾಕೆ ಸಿನಿಮಾ ಮಾಡಲು ಆಫರ್ ಬರಲಿಲ್ವಾ? ಈ ಪ್ರಶ್ನೆಗಳಿಗೆ ಪೂರ್ಣಿಮಾ ಉತ್ತರಿಸಿದ್ದಾರೆ.
ಪೂರ್ಣಿಮಾ ನಿರ್ಮಾಣ ಸಂಸ್ಥೆ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಡಾ.ರಾಜ್‌ಕುಮಾರ್ ಮತ್ತು ಡಾ.ಪಾರ್ವತಮ್ಮ ರಾಜ್‌ಕುಮಾರ್ ತಮ್ಮ ಮಗಳ ಹೆಸರಿನಲ್ಲಿ ತೆರೆದ ನಿರ್ಮಾನ ಸಂಸ್ಥೆ. ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಸಂಸ್ಥೆ. ಇದೇ ಸಂಸ್ಥೆಯಲ್ಲಿ ಅಳಿಯ ರಾಮ್‌ಕುಮಾರ್ ಯಾಕೆ ಸಿನಿಮಾ ಮಾಡಲಿಲ್ಲ? ರಾಮ್‌ಕುಮಾರ್‌ಗೆ ಆಫರ್ ಕೊಡಲಿಲ್ವಾ? ಆಫರ್ ಬರದೇ ಇರಲು ಕಾರಣ ಏನು ಎಂದು ಹಲವು ವರ್ಷಗಳಿಂದ ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದರು. ಕೊನೆಗೂ ಸತ್ಯ ಏನು ಎಂದು ಪೂರ್ಣಿಮಾ ರಿವೀಲ್ ಮಾಡಿದ್ದಾರೆ.
'ರಾಮ್‌ಕುಮಾರ್‌ರವರ ಆಯ್ಕೆಗಳ ಬಗ್ಗೆ ನಾನು ನಡುವೆ ಬರುತ್ತಿರಲಿಲ್ಲ. ಅವರೇ ಆಯ್ಕೆಗಳನ್ನು ಮಾಡುತ್ತಿದ್ದರು. ಆದರೆ ಪತ್ನಿಯಾಗಿ ನಾನು ಸಖತ್ ಪೊಸೆಸಿವ್ ಆಗಿದ್ದೆ. ನನಗೆ ಈ ರೀತಿ ಇರಬೇಕು ಈ ರೀತಿ ನಡೆಯಬೇಕು ಎಂದು ಅವರ ಬಳಿ ಮಾತ್ರ ಹೇಳುತ್ತಿದ್ದೆ ಅಷ್ಟೇ. ರಾಮ್‌ಕುಮಾರ್ ಸಿನಿಮಾ ಶೂಟಿಂಗ್ ಸೆಟ್‌ಗೆ ನಾನು ಹೋಗೇ ಇಲ್ಲ. ಆದರೆ ನನಗೆ ಅವರಲ್ಲಿ ತುಂಬಾ ನಂಬಿಕೆ ಇತ್ತು ಹೀಗಾಗಿ ಅದರಿಂದ ದೂರ ಉಳಿದುಕೊಂಡಿದ್ದೆ. ನನ್ನ ತಂದೆ ಕುಟುಂಬದ ಕಡೆ ನಾನು ಯಾವತ್ತೂ ನಡುವೆ ಬಂದಿಲ್ಲ...ಅವರು ಯಾವುದು ಮಾಡುತ್ತಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ಕೇಳಿಲ್ಲ ಹಾಗೂ ಹೇಳಿಲ್ಲ. ಇವರಿಬ್ಬರ ನಡುವೆ ಬರಲು ನನಗೆ ಇಷ್ಟೇ ಇರಲಿಲ್ಲ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಪುರ್ಣಿಮಾ ಮಾತನಾಡಿದ್ದಾರೆ.
ನಮ್ಮನ್ನು ಯಾವ ಜಾಗದಲ್ಲಿ ಇಟ್ಟಿರುತ್ತಾರೆ ಅನ್ನೋದು ಮುಖ್ಯ; ಪತಿ ರಾಮ್‌ಕುಮಾರ್ ಬಗ್ಗೆ ಅಣ್ಣಾವ್ರ ಮಗಳ ಮಾತು ವೈರಲ್
'ಆಗ ಜನರಲ್ಲಿ ಒಂದು ಮಾತು ಶುರುವಾಯ್ತು ಅವರ ಬ್ಯಾನೆಲ್‌ನಲ್ಲಿ ಒಂದು ಸಿನಿಮಾ ಮಾಡಬೋದಿತ್ತು ಅಥವಾ ಇವರಿಗೋಸ್ಕರ ಅವರು ಸಿನಿಮಾ ಮಾಡಬೇಕಿತ್ತು ಅಂತ. ಆಗ ಕೆಲವೊಂದು ಕಾರಣಗಳು ಇತ್ತು. ಆಗ ವಜ್ರೇಶ್ವರಿ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಆಗುವುದು ಕಡಿಮೆ ಆಗಿತ್ತು ಹಾಗೆ ಅಪ್ಪಾಜಿ ಸಿನಿಮಾ ಮಾಡುವುದು ಡೌಟ್ ಇತ್ತು ಏಕೆಂದರೆ ಅವರು ಹುಷಾರು ಇರಲಿಲ್ಲ. ಅಂಕಲ್‌ಗೂ ಹುಷಾರು ಇರಲಿಲ್ಲ. ಆ ಸಮಯದಲ್ಲಿ ಕೊಂಚ ಗೊಂದಲ ಇತ್ತು ಹೀಗಾಗಿ ಸಿನಿಮಾ ಮೇಲೆ ಗಮನ ಹರಿಸಲು ಆಗುತ್ತಿರಲಿಲ್ಲ. ಸತ್ಯ ಹೇಳಬೇಕು ಅಂದ್ರೆ ನನ್ನ ಮತ್ತೊಬ್ಬರ ಕೆಳಗೆ ಬರಬಾರದು ಅನ್ನೋದು ನನ್ನ ಯೋಚನೆಯಲ್ಲಿ ಇತ್ತು. ಅವರ ಕೆಲಸ ನಡೆಯುತ್ತಿದೆ ಹಾಗೆ ನಡೆಯಲಿ. ನಂಬಿಕೆ ಹೋಗೋದು ಬೇಡ ಅಂತ. ನಾವು ಕೇಳೋದು ಬೇಡ ಹೇಳೋದು ಬೇಡ ಅಂತ ನಾನೇ ಹೇಳಿದ್ದೆ, ಇದುವರೆಗೂ ಈ ವಿಚಾರ ನಾನು ಎಲ್ಲೂ ಹೇಳಿರಲಿಲ್ಲ' ಎಂದು ಪೂರ್ಣಿಮಾ ಹೇಳಿದ್ದಾರೆ.
ರಾಮ್‌ಕುಮಾರ್ ಸರ್ ತಂದೆ ಪಾತ್ರಕ್ಕಾದರೂ ಕಮ್‌ಬ್ಯಾಕ್ ಮಾಡಲೇಬೇಕು; ನೆಟ್ಟಿಗರಿಂದ ಶುರುವಾಯ್ತು ಡಿಮ್ಯಾಂಡ್!
'ಇಲ್ಲಿ ಅವರಿಗೆ ಇಕ್ಕಟ್ಟು ಆಗಬಾರದು ಅದಕ್ಕಿಂತ ಹೆಚ್ಚಾಗಿ ನನಗೆ ಇಕ್ಕಟು ಆಗಬಾರದು. ಏಕೆಂದರೆ ಇಬ್ಬರು ನನಗೆ ಮುಖ್ಯ ಹೀಗಾಗಿ ಯಾರ ಪರವೂ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಧನ್ಯ ಜೊತೆ ಶೂಟಿಂಗ್ ಹೋದಾಗ ಈಗಲೂ ನನ್ನನ್ನು ಹಲವರು ಪ್ರಶ್ನೆ ಮಾಡುತ್ತಾರೆ ಆಗ ನೇರವಾಗಿ ಉತ್ತರಿಸಿದ್ದೀನಿ. ಅವಕಾಶ ಬರಲಿಲ್ಲ ಹಾಗಂತ ಅದರ ಬಗ್ಗೆ ಯೋಚನೆ ಕೂಡ ನಾವು ಮಾಡಲಿಲ್ಲ. ಕೈಯಲ್ಲಿ ಕೆಲಸ ಇದ್ದರೆ ಕೆಲಸ ಮಾಡಿಕೊಂಡರು ಹೋದರೆ ಸಾಕು. ಆಗಬೇಕು ಬರ್ಬೇಕು ಅಂತ ಇದ್ದರೆ ಬಂದೇ ಬರುತ್ತದೆ' ಎಂದಿದ್ದಾರೆ ಪೂರ್ಣಿಮಾ.
ಕೂದಲು ಬಣ್ಣ ಬದಲಾಯಿಸಿದ ಹಿರಿಯ ನಟ ರಾಮ್‌ಕುಮಾರ್ ಪುತ್ರಿ ಧನ್ಯಾ; ಫೋಟೋ ವೈರಲ್!