
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮಿಳು ಜೈಲರ್ ಸಿನಿಮಾದಲ್ಲಿ ನಟಿಸಿದ್ದಾರೆ. ತಲೈವಾ ರಜನಿಕಾಂತ್ ಮತ್ತು ತಮನ್ನಾ ಭಾಟಿಯಾ ನಟಿಸಿರುವ ಜೈಲರ್ ಭಾರತದ ಬಹು ನಿರೀಕ್ಷಿತ ಸಿನಿಮಾ ಎನ್ನಲಾಗಿದೆ. ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ತಮಿಳು ನಾಡು ಟಿವಿ ಮತ್ತು ಯುಟ್ಯೂಬ್ ಚಾನೆಲ್‌ಗಳಿಗೆ ಶಿವಣ್ಣ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಶಿವಣ್ಣ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ....
ಸಾಮಾನ್ಯವಾಗಿ ಸ್ಟಾರ್ ನಟರು ಎಲ್ಲರೊಟ್ಟಿಗೆ ಬೆರೆಯಲು ಆಗುವುದಿಲ್ಲ ಆದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ನೀವು ಸಾಮಾನ್ಯರಂತೆ ಇರಲು ಸಾಧ್ಯವಿಲ್ಲ ಅಲ್ವಾ? ಎಂದು ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಪ್ರಶ್ನೆ ಕೇಳಿದ್ದಾರೆ. ಆಗ ಶಿವಣ್ಣ 'ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ತುಂಬಾ ಕೂಲ್ ಆಗಿರುವ ವ್ಯಕ್ತಿ ನಾನು. ನಾನು ಸದಾ ಆರಾಮ್ ಅಗಿರುವುದಕ್ಕೆ ಇಷ್ಟ ಪಡುತ್ತೀನಿ. ನನಗೆ ಹೊರಗೆ ತಿನ್ನೋಕೆ ಇಷ್ಟ ಪಡುತ್ತೀನಿ ಅದರಲ್ಲೂ ರಸ್ತೆ ಬದಿಯಲ್ಲೇ ನಿಂತುಕೊಂಡು ಇಡ್ಲಿ ತಿನ್ನೋಕೆ ಇಷ್ಟ ಆಮೇಲೆ ಪ್ಲಾಟ್‌ಫಾರ್ಮ್‌ನಲ್ಲಿ ಕೂತು ಟೀ ಕುಡಿಯಲು ಇಷ್ಟ. ನಾನು ನನ್ನನ್ನು ಬದಲಿಸಿಕೊಳ್ಳೋಕೆ ಸಾಧ್ಯವಿಲ್ಲ ನಾನು ಇರುವುದೇ ಹಾಗೆ' ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.
ರಜನಿಕಾಂತ್ ನನ್ನ ಚಿಕ್ಕಪ್ಪ ಇದ್ದಂತೆ: ಶಬ್ಬರಿಮಲೆ ಘಟನೆ ನೆನಪಿಸಿಕೊಂಡ ಶಿವರಾಜ್‌ಕುಮಾರ್
ಅಭಿಮಾನಿಗಳು ಪ್ರೀತಿ ತೋರಿಸುತ್ತಾರೆ ಅಂದ್ರೆ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ. ಅದು ಬಹಳ ಇಷ್ಟ ಆಗುತ್ತೆ. ಎಲ್ಲರನ್ನು ಎಲ್ಲರೂ ಕೇಳಲ್ಲ ಅಲ್ವಾ? ಯಾರಾದರೂ ಬಂದು ನನ್ನನ್ನು ಫೋಟೋ ಕೇಳಿದರೆ ಖುಷಿಯಾಗುತ್ತದೆ ಅರೇ ನನ್ನನ್ನು ನೋಡಿ ಯಾರೋ ಬಂದು ಫೋಟೋ ತೆಗೆದುಕೊಳ್ಳುತ್ತಾರೆ. ಅಂತಹ ಒಂದು ರೀತಿಯ ಪೊಗರು ಗತ್ತು ಬರುತ್ತದೆ. ಅದೆಲ್ಲ ಇದ್ದರೆನೇ ಒಬ್ಬ ಮನುಷ್ಯ ಆಗುವುದು ಸ್ಟಾರ್ ನಟ ಆಗುವುದು. ಅದೆಲ್ಲಾ ಬೇಡ ಅಂತ ನಾನು ಆಕ್ಟಿಂಗ್ ಮಾಡುವುದಿಲ್ಲ ಅದನ್ನೆಲ್ಲಾ ಬಹಳ ಇಷ್ಟ ಪಡುತ್ತೀನಿ ಎಂಜಾಯ್ ಮಾಡುತ್ತೀನಿ' ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
'ನಾನು ಎಲ್ಲೇ ಹೋದರು ಹೆಚ್ಚು ಬಾಡಿಗಾರ್ಡ್‌ಗಳ ಜೊತೆ ಇಟ್ಟುಕೊಳ್ಳಲ್ಲ. ಆದರೆ ಏನ್ ಮಾಡಲು ಆಗಲ್ಲ ಜನರು ಇರ್ತಾರೆ ಏನೂ ಮಾಡೋಕೆ ಆಗಲ್ಲ ಬೇಕಾಗುತ್ತದೆ. ತುಂಬಾ ಸಲ ಬಾಡಿಗಾರ್ಡ್‌ಗಳಿಗೂ ಹೇಳುತ್ತೀನಿ ದಯವಿಟ್ಟು ನನ್ನ ಹಿಂದೆ ಸುತ್ತಬೇಡಿ ಅಂತ. ಸ್ವಲ್ಪ ದೂರ ಇರಿ ಎನ್ನುತ್ತೇನೆ. ಯಾಕಂದರೆ ನನಗೆ ಇಷ್ಟ ಆಗಲ್ಲ ನಾನು ಇವತ್ತಿಗೆ ಏನೇ ಆಗಿದ್ದರೂ ಅದು ಜನರಿಂದ ಅದನ್ನು ಅಳೆದು ಹೇಳಲು ಸಾಧ್ಯವಿಲ್ಲ ನಾನಾಗಿಯೇ ಬಂದೆ ಅನ್ನೋಕೆ ಸಾಧ್ಯವಿಲ್ಲ ಏನೇ ಆದರೂ ಆ ಜನ ಓಕೆ ಅಂದ ಮೇಲೆ ಎಲ್ಲವೂ ಸಿಗುವುದು. ನಿಜ ಹೇಳಬೇಕು ಅಂದ್ರೆ ಜನ ಹೇಳುವವರೆಗೂ ಹಿಟ್ , ಫ್ಲಾಪ್ ನಾವು ಹೇಳೋಕೆ ಸಾಧ್ಯವಿಲ್ಲ. ಕೊಂಚ ನೋವಾಗುತ್ತದೆ ಆದರೂ ಪರ್ವಾಗಿಲ್ಲ ಹಾಗಂತ ನಾವು ಬೈಯುವುದಿಲ್ಲ ಅಂತ ಹೇಳಲ್ಲ ಕೋಪ ಬಂದರೆ ಬೈಯ್ತೀನಿ. ನಾನು ಇರುವುದೇ ಹಾಗೆ ನಾನು ಅವರನ್ನು ಆ ರೀತಿ ಒಪ್ಪಿಕೊಂಡಿದ್ದೀನಿ ಅವರು ಅದೇ ರೀತಿ ಒಪ್ಪಿಕೊಳ್ಳಬೇಕು ಸ್ನೇಹಿತರನ್ನು ಸ್ನೇಹಿತರಂತೆ ಸ್ವೀಕರಿಸಬೇಕು ಇಲ್ಲದಿದ್ದರೆ ಸ್ನೇಹ ಮಾಡಬಾರದು' ಎಂದಿದ್ದಾರೆ ಶಿವಣ್ಣ.
30-72 ವಯಸ್ಸಾದರೇನು?; ಜೈಲರ್‌ನಲ್ಲಿ ರಜನಿಕಾಂತ್ ಜೊತೆ ವಯಸ್ಸಿನ ಟೀಕೆಗಳು: ಖಡಕ್ ಉತ್ತರ ಕೊಟ್ಟ ತಮನ್ನಾ!
'ನಾನು ಒಬ್ಬನೇ ಅಂತ ಅಲ್ಲ ನನ್ನ ರೀತಿ ಸಾಕಷ್ಟು ಜನರು ಇದ್ದಾರೆ. ನಾನು ಅವಕಾಶವಾಗಿ ಅಲ್ಲ ಎಲ್ಲರಿಗೂ ಅವಕಾಶ ಕೊಡಬೇಕು. ನಾನು ಈ ಜಾಗದಲ್ಲೇ ಇರ್ತೀನಿ ಅಂದ್ರೆ ಹೇಗೆ? ಆಗ ದೇವರು ಹೇಳುತ್ತಾನೆ ಸಾಕು ಬಾರಪ್ಪ ನಿನ್ನದಲ್ಲ ಆ ಜಾಗ ಮೇಲೆ ಬಾ ಎಂದು ಕರೆದುಕೊಂಡು ಬಿಡುತ್ತಾನೆ. ಯಾರೋ ಇದ್ದಾರೆ ನಿನ್ನ ಜಾಗಕ್ಕೆ ಎನ್ನುತ್ತಾನೆ' ಎಂದು ಶಿವಣ್ಣ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.