ಗಲ್ಲಿಗೇರಬೇಕಾದವನು ಕಣ್ಣು ಮಿಟುಕಿಸಿ, ಮ್ಮು..ಎಂದನಂತೆ! ಜ್ಯೂಲಿ ಲಕ್ಷ್ಮೀ ಹೇಳಿದ ಕೈದಿ ಕಥೆ

By Shobha MC  |  First Published Aug 4, 2023, 5:29 PM IST

ಜ್ಯುಲಿ ಲಕ್ಷ್ಮಿ ಅಂದ್ರೆ ಚಂದನದ ಗೊಂಬೆ ಚಿತ್ರದೊಂದಿಗೆ ಹತ್ತು ಹಲವು ಚಿತ್ರಗಳು ಕಣ್ಣು ಮುಂದೆ ಹಾದು ಹೋಗುತ್ತದೆ. ಈ ನಟಿ ತಮ್ಮ ಜೀವನದ ವಿಶೇಷ ಘಟನೆಗಳನ್ನು ಮೆಲಕು ಹಾಕಿದ್ದಾರೆ. ಏನವು?


ಜೂಲಿ‌ ಲಕ್ಷ್ಮೀ.. ಹೆಸರು ಕೇಳಿದ್ರೆ ಸಾಕು 80-90ರ ದಶಕದ ಸಿನಿಮಾ‌ಪ್ರಿಯರು‌ ರೋಮಾಂಚನಗೊಳ್ತಾರೆ. ‌ಬ್ಯೂಟಿ‌ ವಿತ್ ಬ್ರೈನ್ ಇರುವ ಕೆಲವೇ ನಟಿಯರ‌ ಪೈಕಿ, ಲಕ್ಷ್ಮೀಗೆ ಅಗ್ರ ಸ್ಥಾನ. ತಮಿಳು, ‌ತೆಲುಗು, ಕನ್ನಡ,‌ ಮಲಯಾಳಂ ಚಿತ್ರರಂಗವನ್ನು ‌ಅಕ್ಷರಶಃ ಆಳಿದ ಲಕ್ಷ್ಮೀ, ‌ಜೂಲಿ ಚಿತ್ರದ‌ ಮೂಲಕ‌‌ ಬಾಲಿವುಡ್‌ನಲ್ಲೂ ‌ತಮ್ಮ ಛಾಪು ‌ಮೂಡಿಸಿದವರು.
 
ಲಕ್ಷ್ಮೀ ಹೆಸರಿಗೆ ತಕ್ಕಂತೆ ಮಹಾಲಕ್ಷ್ಮಿಯೇ.‌ ಲಕ್ಷ್ಮೀ ‌ಸೌಂದರ್ಯಕ್ಕೆ‌ ಬೆರಗಾಗದವರು, ಮರುಳಾಗದವರೇ ಇಲ್ಲ. ಇಂಥ ನಟಿ ಲಕ್ಷ್ಮೀಗೆ‌ ಗಲ್ಲು ಶಿಕ್ಷೆಗೆ ‌ಗುರಿಯಾಗಿದ್ದ‌ ಕೈದಿಯೂ ಕಣ್ಣು ಮಿಟುಕಿಸಿ, ಫ್ಲೈಯಿಂಗ್ ಕಿಸ್ ಕೊಟ್ಟ ಇಂಟರೆಸ್ಟಿಂಗ್ ವಿಷಯವನ್ನು ಸ್ವತಃ ‌ಲಕ್ಷ್ಮೀಯವರೇ ಹಂಚಿಕೊಂಡಿದ್ದಾರೆ. 
 

ತಾಯಿಯನ್ನೆ ಮೀರಿಸುವ ಲುಕ್; ಚಂದನವನದ ಸುಂದರಿಯರ ಮಕ್ಕಳಿವರು!

Tap to resize

Latest Videos

undefined

ಅದು ತಮಿಳು ಚಿತ್ರ. ಜೈಲು ಸನ್ನಿವೇಶದ‌ ‌ಚಿತ್ರೀಕರಣ ಸೇಲಂ ಜೈಲಿನಲ್ಲಿ ‌ನಡೆದಿತ್ತು. ಕೈದಿಯಾಗಿ ನಟಿಸಿದ್ದ‌ ಲಕ್ಷ್ಮೀ, ಸೇಲಂ‌ ಜೈಲಿನ ಸೆಲ್ ನಂಬರ್ 2ರಲ್ಲಿ ಬಂಧಿಯಾಗಬೇಕಿತ್ತು. ಶೂಟಿಂಗ್‌ಗೆ ರೆಡಿಯಾಗಿ‌ ಸೆಲ್‌ ಬಳಿ ಹೋಗುತ್ತಿದ್ದ ಲಕ್ಷ್ಮೀ ಅವರಿಗೆ ಸೆಲ್‌ ನಂಬರ್ 1ರಲ್ಲಿ ಬಂಧಿಯಾಗಿದ್ದ ಕೈದಿ, ಕಣ್ಣು ‌ಮಿಟುಕಿಸಿ, ಫ್ಲೈಯಿಂಗ್ ಕಿಸ್ ಕೊಟ್ಟು ಬಿಟ್ಟನಂತೆ! ಹುಬ್ಬು‌ ಕುಣಿಸಿ, 'ಹೆಂಗೆ?' ಎಂದು‌ ಕಣ್ಣಲ್ಲೇ ಪ್ರಶ್ನಿಸಿದ್ದನಂತೆ. ಇದನ್ನು ಗಮನಿಸಿದ‌ ಪೊಲೀಸರು, ಆತನನ್ನ‌ ಗದರಿಸಿಯೂ ಆಯಿತು. ಆತನ ಕಣ್ಣೇಟಿಗೆ ಕ್ಷಣ ಗಾಬರಿಯಾದ ಲಕ್ಷ್ಮೀ , ಯಾರು ಆ ಕೈದಿ? ಎಂದು ‌ಕೇಳಿದರಂತೆ.‌ ಅಲ್ಲೇ ಇದ್ದ ಪೊಲೀಸಪ್ಪ, ಅಯ್ಯೋ ಅವನೊಬ್ಬ‌ ಕೊಲೆಗಾರ. ಗಲ್ಲು ಶಿಕ್ಷೆ ಆಗಿದೆ. ‌ಸ್ವಲ್ಪ ದಿನದಲ್ಲೇ ನೇಣುಗಂಬರಕ್ಕೇರ್ತಾನೆ. ಇನ್ನೇನು ಸಾವು ಹತ್ತಿರದಲ್ಲಿದ್ದರೂ, ಕೊಬ್ಬು ಮಾತ್ರ ಕರಗಿಲ್ಲ ಎಂದು ಗೊಣಗಿದರಂತೆ. ಇದನ್ನು‌ ಕೇಳಿ ಲಕ್ಷ್ಮೀ ‌ಕ್ಷಣ ದಂಗಾಗಿದ್ದು ಸುಳ್ಳಲ್ಲ. ಯಾರಾಗಾದರೂ ಗಲ್ಲಿಗೇರುವವನ ಇಂಥ ಆಶ್ಚರ್ಯ ತಾರದೇ ಇರದು. ಆದರೆ, ನೇಣುಗಂಬಕ್ಕೇರುವವನ ಆ್ಯಟಿಟ್ಯುಡ್ ಲಕ್ಷ್ಮಿಗೆ ಇಷ್ಟ ಆಯ್ತಂತೆ. ಸಾಯೋದೇ ಹೌದಂತೆ! ಅಲ್ಲೀತನಕ ನನಗಿಷ್ಟ ಬಂದಂತೆ ಬದುಕ್ತೀನಿ ಅನ್ನೋ ಆತನ‌ attitude ಮನ ಸೆಳೆಯಿತು‌ ಎನ್ನುತ್ತಾರೆ ಲಕ್ಷ್ಮೀ. ‌

ಇಂಥದ್ದೇ ಇನ್ನೊಂದು ‌ಘಟನೆ ನೆನಪಿಸಿಕೊಂಡಿದ್ದಾರೆ ಲಕ್ಷ್ಮೀ.

ಟಾಯ್ಲೆಟ್ ಬೇಕಾದರೂ ತೊಳೆಯುತ್ತೇನೆ: ಜ್ಯೂಲಿ ಲಕ್ಷ್ಮಿ ಮಗಳು, ಅಂಥದ್ದೇನಾಯ್ತು ಈ ಸ್ಟಾರ್ ನಟಿಗೆ?

ಸೇಡಿನ ಹಕ್ಕಿ ಚಿತ್ರದ ಚಿತ್ರೀಕರಣ ‌ಬೆಂಗಳೂರು ಜೈಲಲ್ಲಿ ನಡೆದಿತ್ತು.  ಲಕ್ಷ್ಮೀ, ಜಯಮಾಲಿನಿ ಇಬ್ಬರೂ ಜೈಲಿನಲ್ಲಿ ಇರೋ ಶೂಟಿಂಗ್. ಮೇಕಪ್‌ ಹಾಕಿಕೊಂಡು ಜೈಲಿಗೆ ಎಂಟ್ರಿ ‌ಕೊಡೋ‌ ಸಮಯದಲ್ಲಿ, ಒಂದಷ್ಟು ಕೈದಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲು ಕರೆತರುತ್ತಿದ್ದರಂತೆ. ವ್ಯಾನ್‌‌ನಿಂದ ಇಳಿಯುತ್ತಿದ್ದವರ ಪೈಕಿ ಒಬ್ಬ ಕೈದಿ, ಲಕ್ಷ್ಮೀ ಅವರನ್ನು‌ ನೋಡಿದವನೇ ಕಣ್ಣು‌ ಮಿಟುಕಿಸಿ, ಹೆಂಗೆ ‌ಮೇಡಂ ಎಂದು ತುಂಟ ನಗು ‌ಬೀರಿದನಂತೆ.‌ ಆತನ ತಕ್ಷಣದ ಕಿಡಿಗೇಡಿತನ‌ಕ್ಕೆ ಲಕ್ಷ್ಮೀ ಗಾಬರಿಯಾದ್ರೆ, ಪೊಲೀಸರು ‌ಆತನನ್ನು‌ ಗದರಿಸಿ‌ ಕರೆದೊಯ್ದರಂತೆ. ಆ ಕೈದಿಯ attitude ಸಹ ಲಕ್ಷ್ಮೀ ಸಖತ್‌ ಇಷ್ಟ ಆಯ್ತಂತೆ. ಕೊಲೆ, ಸುಲಿಗೆ, ಕಳ್ಳತನ ಏನೋ ಮಾಡಿ‌ ಜೈಲಿ ಸೇರಿದ ಕೈದಿಗೆ ಮುಂದಿನ ಶಿಕ್ಷೆಯ ಭಯವಿಲ್ಲ.‌ ತನಗೆ ಅನ್ನಿಸಿದ್ದನ್ನು ಆ ಕ್ಷಣ ‌ಮಾಡಿ, ಅದನ್ನು‌ ಅನುಭವಿಸುವುದೇ ಜೀವನ. ಪ್ರತಿ ಕ್ಷಣವನ್ನು ಎಂಜಾಯ್ ‌ಮಾಡುತ್ತಾ‌ ಬದುಕುವವರಿಗೆ‌ ಕಳೆದುಕೊಂಡಿದ್ದರ ಬಗ್ಗೆ ಬೇಸರವೂ, ವ್ಯಥೆಯೂ ಇರಲ್ಲವೆಂದು ಜೀವನದ ಸತ್ಯ ಹೇಳುತ್ತಾರೆ ನಟಿ ಲಕ್ಷ್ಮೀ.

ಭಾರತೀಯ ಚಿತ್ರರಂಗದ ದಂತಕಥೆ ಎನಿಸಿರೋ‌ ನಟಿ ಲಕ್ಷ್ಮೀ ಅವರ ಅನುಭವವೂ ಒಂದು ಕಥೆಯಂತಿವೆ.

click me!