ಒಂದು ಕಪ್ ಕೆಟ್ಟ ಕಾಫಿಗೆ 11 ಸಾವಿರ; ನನ್ನಿಂದಲೇ ಮೋದಿ UPI ಶುರು ಮಾಡಿದ್ದರು ಎಂದ ಮೇಘನಾ ರಾಜ್!

By Vaishnavi ChandrashekarFirst Published Aug 4, 2023, 3:11 PM IST
Highlights

 ನರೇಂದ್ರ ಮೋದಿ ಈಗ ನನ್ನಿಂದಲೇ ಪ್ಯಾರಿಸ್‌ನಲ್ಲಿ ಯುಪಿಐ ಆರಂಭಿಸಿದ್ದು ಎಂದ ಪುಂಡ ನಟಿ.....

ಕನ್ನಡ ಚಿತ್ರರಂಗದ ಗೊಂಬೆ, ಮನೆ ಮಗಳು, ರಾಯನ್‌ ಮುದ್ದಿನ ಮಮ್ಮಿ ಮೇಘನಾ ರಾಜ್‌ ತಮ್ಮ ಮುಂದಿನ ಸಿನಿಮಾ ತತ್ಸಮ ತದ್ಭವ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ರಿಲೀಸ್‌ಗೆ ಕಾಯುತ್ತಿದ್ದಾರೆ. ಈಗಾಗಲೆ ಸಿನಿಮಾ ಪ್ರಚಾರ ಆರಂಭಿಸಿರುವ ನಟಿ ಅದೆಷ್ಟೋ ಘಟನೆಗಳಲ್ಲಿ ಪತಿ ಚಿರುನ ನೆನಪಿಸಿಕೊಂಡಿದ್ದಾರೆ. ಚಿರು ಮಾಡಿದ ನೆಚ್ಚಿನ ಕೆಲಸಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಲ್ಲದೆ ಪ್ಯಾರಿಸ್‌ನಲ್ಲಿ ಒಂದು ಕಾಫಿಗೆ ಸಾವಿರಾರು ರೂಪಾಯಿ ಕೊಟ್ಟ ಹೋಟೆಲ್‌ ರೂಮ್‌ಗೆ ಬಂದ ನಂತರ ತಿಳಿಸಿರುವ ಘಟನೆ ಹಂಚಿಕೊಂಡಿದ್ದಾರೆ.

ಹೌದು! ಇದು ಮೂರ್ನಾಲ್ಕು ವರ್ಷಗಳ ಹಿಂದೆ ನಡೆದಿರುವ ಘಟನೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಜಾಲಿ ಮಾಡಲು ಪ್ಯಾರಿಸ್‌ ಟ್ರಿಪ್ ಮಾಡಿದ್ದಾರೆ. ಅಲ್ಲಿನ ಜನಪ್ರಿಯ ಜಾಗಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಪ್ರತಿ ದಿನ ಸಂಜೆ ಮೇಘನಾ ತಪ್ಪದೆ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಾಗಿ ಮೇಘನಾ ಕಾಫಿ ಬೇಕು ಎಂದು ಕೇಳಿದಾಗ ಪ್ಯಾರಿಸ್‌ ಸ್ಟ್ರೀಟ್‌ನಲ್ಲಿ ಸಾಕಷ್ಟು ಸೆಫೆಗಳಿರುತ್ತದೆ ಅಲ್ಲಿನ ಒಂದು ಜಾಗದಲ್ಲಿ ಮೇಘನಾ ಕಾಫಿ ಕುಡಿದಿದ್ದಾರೆ. ಕಾಫಿ ಸಿಕ್ಕರೆ ಸಾಕ ಎನ್ನುವ ಮೇಘನಾಗೆ ಸರ್ಗವೇ ಸಿಕ್ಕಂತೆ ಅಗಿದೆ. ಎಂಜಾಯ್ ಮಾಡಿ ರೂಮ್‌ಗೆ ಹೋದ ಮೇಲೆ ಬಿಲ್‌ 11 ಸಾವಿರ ಆಗಿದೆ ಎಂದು ಚಿರು ತಿಳಿಸಿದ್ದಾರೆ. 

ಧ್ರುವ ನನ್ನ ಸಂಬಂಧ ಯಾರಿಗೂ ಅರ್ಥವಾಗಲ್ಲ, ಸೊಸೈಟಿ ಬಗ್ಗೆ ಕೇರ್ ಮಾಡಲ್ಲ: ಮೇಘನಾ ರಾಜ್

ಶಾಕ್‌ನಲ್ಲಿದ್ದ ಮೇಘನಾ ಯಾಕೆ ಹೇಳಿಲ್ಲ ಎಂದು ಪ್ರಶ್ನೆ ಮಾಡಿದಾಗ ನೀನು ಬೇಸರ ಮಾಡಿಕೊಳ್ಳಬಹುದು ಇರಲಿ ನಿನಗೆ ಒಂದು ಕಾಫಿ ಕೊಡಿಸಿರುವ ಖುಷಿ ಇದೆ ಎನ್ನುತ್ತಿದ್ದರಂತೆ. 'ನಿಜ ಹೇಳಬೇಕು ಅಂದ್ರೆ ಆ ಕಾಫಿಗೆ ಅಷ್ಟು ಹಣ ಎಂದು ನನಗೆ ಗೊತ್ತಿರಲಿಲ್ಲ ಅಲ್ಲಿದ ಹಣ ನೋಡಿಕೊಂಡು ನಾವು ಒಂದು ಲೆಕ್ಕ ಮಾಡಿಕೊಂಡು ಹೋಗಿ ಕಾಫಿ ಕುಡಿದಿದ್ದು. ಕಾಫಿ ಕುಡಿದ ಸ್ವಲ್ಪ ಹೊತ್ತಿಗೆ ಚೆನ್ನಾಗಿಲ್ಲ ಎಂದು ನಾನು ಹೋಟೆಲ್‌ನವರಿಗೆ ಹೇಳಿದೆ ಆದರೂ ತೆಗೆದುಕೊಂಡಿರುವುದಕ್ಕೆ ಕುಡಿದು ಬಂದೆ. ಆಗ ಎಷ್ಟು ಹೇಳಿದರು ಅದನ್ನು ಚಿರು ಕೊಟ್ಟು ಬಂದಿದ್ದಾರೆ. ರೂಮ್‌ಗೆ ಬಂದ ನಂತರ ಎಲ್ಲಿ ಎಷ್ಟು ಖರ್ಚು ಆಗಿದೆ ಅಂತ ನೋಡುವಾದ ಕೆಫೆ ಬಿಲ್‌ ನೋಡಿದ್ದಾರೆ...ಅಲ್ಲಿ ಒಂದು ಕಾಫಿಗೆ 11 ಸಾವಿರ ರೂಪಾಯಿ ಆಗಿತ್ತು. ದೇವರೆ ಒಂದು ಕಪ್ ದಬ್ಬ ಕಾಫಿಗೆ ಅಷ್ಟು ಎಂದು ಕೇಳಿ ಬೇಸರ ಆಯ್ತು. ಆದರೆ ಇರಲಿ ಬಿಡು ಬೇಬಿ ನನಗೆ ಅಲ್ವಾ ಕಾಫಿ ನೀನು ಕೇಳಿದೆ ನಾನು ಕೊಡಿಸಿದೆ' ಎಂದು ಚಿರು ಹೇಳಿದರಂತೆ. ಈ ಘಟನೆಯನ್ನು ಖಾಸಗಿ ಟಿವಿ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದಾರೆ.

ಎರಡನೇ ಮದ್ವೆ ಬಗ್ಗೆ ಯಾರೂ ಬಂದು ಕೇಳಿಲ್ಲ; ತುಂಬಾ ಕ್ಲಿಯರ್ ಉತ್ತರ ಕೊಟ್ಟ ಮೇಘನಾ ರಾಜ್!

'ವಿಶೇಷ ಪ್ರವಾಸ ಮಾಡುವಾಗ ನಮ್ಮ ತಲೆಯಲ್ಲಿ ಇಷ್ಟ ಹಣ ಅಂತ ಲೆಕ್ಕ ಇರುತ್ತೆ ಅಲ್ಲಿ ಖರ್ಚು ಮಾಡುವಾಗ ಲೆಕ್ಕ ಮಾಡುತ್ತೀವಿ.ಕನ್ವರ್ಟ್‌ ಮಾಡುವುದರಲ್ಲಿ ಎಡವುದು ಹೀಗಾಗಿ ನರೇಂದ್ರ ಮೋದಿ ಅವರು ನನಗೋಸ್ಕರ್ ಅಲ್ಲಿ ಕೂಡ ಯುಪಿಐ ಆರಂಭಿಸಿದ್ದಾರೆ. ನಿಜ ಹೇಳಬೇಕು ಅಂದ್ರೆ ನನ್ನಿಂದಲೇ ಪ್ಯಾರಿಸ್‌ನಲ್ಲಿ ಯುಪಿಐ ಆರಂಭವಾಗಿರುವುದು' ಎಂದು ಮೇಘನಾ ಹೇಳಿದ್ದಾರೆ. 

click me!