ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ ಹರಿಪ್ರಿಯಾ-ವಸಿಷ್ಠ ತಾರಾ ಜೋಡಿ. ಈ ನಿಮಿತ್ತ ವಿಶೇಷ ವಿಡಿಯೋ ರಿಲೀಸ್ ಮಾಡಲಾಗಿದೆ.
ತಾರಾಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮೊನ್ನೆ ಅಂದರೆ ಜನವರಿ 26ರಂದು ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿರುವ ಜೋಡಿ, ಒಂದು ವರ್ಷದ ಜರ್ನಿಯ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದೆ. ಅಂದಹಾಗೆ, ಮೈಸೂರಿನ ಗಣಪತಿ ಸಚಿದಾನಂದ ಆಶ್ರಮದಲ್ಲಿ ಕಳೆದ ವರ್ಷದ ಜನವರಿ 26ರಂದು ಇವರ ಮದುವೆ ನಡೆದಿತ್ತು. ಕೆಲ ವರ್ಷಗಳಿಂದ ಹರಿಪ್ರಿಯಾ (Hari Priya) ಹಾಗೂ ವಸಿಷ್ಠ ಸಿಂಹ (Vasishta Simha) ಆತ್ಮೀಯ ಸ್ನೇಹಿತರು. ಸ್ನೇಹ ಪ್ರೀತಿಗೆ ತಿರುಗಿ ದಾಂಪತ್ಯಕ್ಕೆ ಕಾಲಿರಿಸಿದರು. ಡಿಸೆಂಬರ್ ತಿಂಗಳಿನಲ್ಲಿ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಹಪ್ರಿಯಾ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದರು. ಸರಳವಾಗಿ, ಶಾಸ್ತ್ರೋಕ್ತವಾಗಿ ಎಂಗೇಜ್‌ಮೆಂಟ್ ನಡೆದಿತ್ತು. ನಿಶ್ಚಿತಾರ್ಥದಲ್ಲಿ ಸಿಂಹದ ಡಿಸೈನ್ ಹೊಂದಿದ್ದ ಉಂಗುರಗಳನ್ನ 'ಸಿಂಹಪ್ರಿಯಾ' ಜೋಡಿ ಎಕ್ಸ್‌ಚೇಂಜ್ ಮಾಡಿಕೊಂಡರು. ಮದುವೆ ಕಾರ್ಯಕ್ರಮಕ್ಕೆ ಕನ್ನಡದ ಬಿಗ್ ಸ್ಟಾರ್ಸ್ ಹಾಗೂ ಹಿರಿಯ ಕಲಾವಿದರು ಈ ಲವ್ ಬರ್ಡ್ಸ್ ಆರತಕ್ಷತೆಗೆ ಬಂದು ಆಶೀರ್ವದಿಸಿದ್ದರು.
ಇದೀಗ ಮೊದಲ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ. ಅಂದಹಾಗೆ, ಹಲವರಿಗೆ ಇವರ ಕುತೂಹಲದ ಲವ್ ಸ್ಟೋರಿ ತಿಳಿದಿರಲಿಕ್ಕಿಲ್ಲ. ಈ ಹಿಂದೆ ಖುದ್ದು ಹರಿಪ್ರಿಯಾ ಅವರೇ ಈ ವಿಷಯವನ್ನು ತಿಳಿಸಿದ್ದರು. ಇವರಿಬ್ಬರ ನಡುವೆ ಪ್ರೀತಿ ಮೊಳಗಲು ಕಾರಣ ಕ್ರಿಸ್ಟಲ್ ಎಂಬ ನಾಯಿಮರಿ ಎಂದಿದ್ದರು. ವಸಿಷ್ಠ ಅವರು ನೀಡಿದ್ದ ನಾಯಿಮರಿಯಿಂದ ಇವರ ಲವ್ ಸ್ಟೋರಿ ಶುರುವಾಗಿದ್ದಂತೆ. ಹರಿಪ್ರಿಯಾ ಅವರು ಲಕ್ಕಿ ಮತ್ತು ಹ್ಯಾಪಿ ಎಂಬ ನಾಯಿಮರಿಗಳನ್ನು ಸಾಕಿದ್ದರು. ಆದರೆ ಲಕ್ಕಿ ಸತ್ತುಹೋಯಿತು. ಆಗ ಹ್ಯಾಪಿಗೆ ಒಂಟಿತನ ಕಾಡಿತು. ಹರಿಪ್ರಿಯಾ ಕೂಡ ಲಕ್ಕಿ ಇಲ್ಲದ ನೋವಿನಲ್ಲಿದ್ದರು. ಈ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದರು. ಈ ನಾಯಿಮರಿಯಿಂದ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು.
ಉತ್ತರ ಪ್ರದೇಶದಲ್ಲಿ ಸನ್ನಿ ಲಿಯೋನ್ ಕಣ್ಣು ಕುಕ್ಕಿಸುವ ರೆಸ್ಟೋರೆಂಟ್! ನಟಿಯ ಕೈರುಚಿ ನೋಡಬೇಕೆಂದ್ರೆ ಇಲ್ಲಿ ಬನ್ನಿ...
ಈ ಬಗ್ಗೆ ಈ ಹಿಂದೆ ವಿವರಿಸಿದ್ದ ನಟಿ, ‘ನಿಮಗೊಂದು ಸೀಕ್ರೆಟ್ ಹೇಳ್ತೀನಿ. ವಸಿಷ್ಠ ಈ ನಾಯಿಯನ್ನು ಗಿಫ್ಟ್ ಮಾಡಿದಾಗ ಇವನು ಒಂದು ಮೆಸೇಜ್ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಾರ್ಟ್ ಶೇಪ್ನ ಒಂದು ಬರ್ತ್ ಮಾರ್ಕ್ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು. ಕ್ರಿಸ್ಟಲ್ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ’ ಎಂದಿದ್ದರು ಹರಿಪ್ರಿಯಾ.
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ತೆಲುಗಿನ ‘ಎವರು’ ರಿಮೇಕ್ ಸಿನಿಮಾದಲ್ಲಿ ನಟಿಸಿದ್ದರು. ಕಳೆದ ವರ್ಷ ಇದು ಬಿಡುಗಡೆಯಾಗಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡರು ಎಂದು ಹೇಳಲಾಗಿತ್ತು. ಅಲ್ಲದೇ, ಗೆಳೆತನ ಗಟ್ಟಿಯಾಗಿ ಆ ನಂತರವಷ್ಟೇ ಮದುವೆ ಆಗುವ ನಿರ್ಧಾರವನ್ನು ತಗೆದುಕೊಂಡಿದ್ದರು ಎನ್ನಲಾಗಿದೆ. ಇವರಿಬ್ಬರಲ್ಲಿಯೂ ಒಂದು ಕುತೂಹಲದ ಅಂಶವೆಂದರೆ ಇಬ್ಬರೂ ಹುಟ್ಟಿದ್ದು ಅಕ್ಟೋಬರ್ ತಿಂಗಳಿನಲ್ಲಿ. ಹರಿಪ್ರಿಯಾ ಬರ್ತ್ಡೇ ಅಕ್ಟೋಬರ್ 29 ಹಾಗೂ ವಸಿಷ್ಠ ಸಿಂಹ ಹುಟ್ಟುಹಬ್ಬ ಅಕ್ಟೋಬರ್ 19ರಂದು. ಹರಿಪ್ರಿಯಾ ಹುಟ್ಟಿದ್ದು 1991ರಲ್ಲಿ ಹಾಗೂ ವಸಿಷ್ಠ ಸಿಂಹ ಜನಿಸಿದ್ದು 1988ರಲ್ಲಿ.
ಅಂದು ವರುಣ್, ಇಂದು ರಣಬೀರ್: ರಶ್ಮಿಕಾಗೂ ಚಪ್ಪಲಿ ತೆಗೆಸಿದ ನಟ- ಸಂಸ್ಕಾರವಂತ ಪುರುಷರು ಎಂದ ಫ್ಯಾನ್ಸ್!