ಒಬ್ಬೊಬ್ಬರಿಂದ ಒಂದೊಂದು ರೀತಿ ಮಾತುಗಳು ಬರುತ್ತೆ; ಸತ್ಯ ಮುಚ್ಚಿಡಲು ಕಾರಣ ಬಿಚ್ಚಿಟ್ಟ ಹರಿಪ್ರಿಯಾ- ವಸಿಷ್ಠ

Published : Jul 11, 2023, 01:12 PM IST
ಒಬ್ಬೊಬ್ಬರಿಂದ ಒಂದೊಂದು ರೀತಿ ಮಾತುಗಳು ಬರುತ್ತೆ; ಸತ್ಯ ಮುಚ್ಚಿಡಲು ಕಾರಣ ಬಿಚ್ಚಿಟ್ಟ ಹರಿಪ್ರಿಯಾ- ವಸಿಷ್ಠ

ಸಾರಾಂಶ

ರಾತ್ರಿಯಿಂದ ಬೆಳಗ್ಗೆವರೆಗೂ ಮಾತನಾಡಿ ಪ್ರೀತಿ ಹೇಳಿಕೊಂಡ ವಸಿಷ್ಠ. ಹರಿಪ್ರಿಯಾ ಒಪ್ಪಿದ್ದು ಯಾವಾಗ? ಯಾಕೆ ಪ್ರೀತಿ ವಿಚಾರ ಮುಚ್ಚಿಟ್ಟರು...?  

ಕನ್ನಡ ಚಿತ್ರರಂಗದ ಬ್ಯೂಟಿಫುಲ್ ಆಂಡ್ ಹ್ಯಾಪೆನಿಂಗ್ ಕಪಲ್ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಕೆಲವು ದಿನಗಳ ಹಿಂದೆ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಮ್ಯಾಚಿಂಗ್ ಔಟ್‌ಫಿಟ್‌ ಧರಿಸಿ ಕಾಣಿಸಿಕೊಂಡಿದ್ದರು. ಸಿಂಹಪ್ರಿಯಾ ಜೋಡಿ ಎಲ್ಲೇ ಹೋದರೂ ಲವ್ ಸ್ಟೋರಿ ಬಗ್ಗೆ ಕೇಳುವುದು ತುಂಬಾನೇ ಕಾಮನ್ ಆಗಿಬಿಟ್ಟಿದೆ ಆದರೆ ಯಾರಿಗೂ ಗೊತ್ತಿಲ್ಲ ಈ ಸ್ಪೆಷಲ್ ಹಾಡು ಹೇಳಿ ಪ್ರಿಯಾರನ್ನು ಸಿಂಹ ಪ್ರಪೋಸ್ ಮಾಡಿರುವುದು ಎಂದು. 

ಹಲವು ವರ್ಷಗಳಿಂದ ಹರಿಪ್ರಿಯಾ ಮತ್ತು ವಸಿಷ್ಠ ಪ್ರೀತಿಸುತ್ತಿದ್ದರು ಆದರೆ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ ಓಡಾಡಿರಲಿಲ್ಲ ಅಥವಾ ಸಿನಿ ಸ್ನೇಹಿತರಿಗೂ ಹೇಳಿಕೊಂಡಿರಲಿಲ್ಲ. ಯಾಕೆ ಈ ರೀತಿ ಗುಟ್ಟಾಗಿಟ್ಟರು ಎಂದು ನಿರೂಪಕಿ ಅನುಶ್ರೀ ಪ್ರಶ್ನೆ ಮಾಡಿದಾಗ 'ಬಹಳ ವರ್ಷಗಳಿಂದ ನಾವು ಪ್ರೀತಿ ಮಾಡುತ್ತಿದ್ವಿ. ಮದುವೆ ಆಗುವ ಸಮಯಕ್ಕೆ ಅನೌನ್ಸ್‌ ಮಾಡೋಣ ಎಂದು ಕಾಯುತ್ತಿದ್ದೆವು ಯಾಕೆ ಇಷ್ಟು ಬೇಗ ಹೇಳಿಕೊಂಡು ಓಡಾಡಿಕೊಂಡಿರುವುದು? ಒಬ್ಬೊಬ್ಬರಿಂದ ಒಂದೊಂದು ರೀತಿ ಮಾತುಗಳು ಬರುತ್ತದೆ ಯಾಕೆ ಆ ಮಾತುಗಳನ್ನು ಕೇಳಿಸಿಕೊಳ್ಳಬೇಕು' ಎಂದು ವಸಿಷ್ಠ ಅವಾರ್ಡ್‌ ಶೋ ವೇದಿಕೆ ಮೇಲೆ ಮಾತನಾಡಿದ್ದಾರೆ. 'ಎಕ್ಸೈಟ್‌ಮೆಂಟ್‌ನ ನಾವು ಕಂಟೇನ್ ಮಾಡ್ಬೇಕು ಯಾರಿಗೂ ತೋರಿಸಿಕೊಳ್ಳಬಾರದು ನಮ್ಮ ಭಾಷೆಯಲ್ಲಿ ನಮ್ಮ ಸ್ಟೈಲ್‌ನಲ್ಲಿ ಹೇಳಬೇಕು ಅಂದ್ರೆ ದೃಷ್ಟಿ ಆಗುತ್ತದೆ ಅಂತ' ಎಂದು ಪ್ರಿಯಾ ಹೇಳಿ ನಕ್ಕಿದ್ದಾರೆ.

17ನೇ ವಯಸ್ಸಿಗೆ ಫಸ್ಟ್‌ ಲವ್; ಫಸ್ಟ್‌ ಕಿಸ್‌ ಡಬ್ಬತರ ಇತ್ತು ಎಂದು ರಹಸ್ಯ ಬಿಚ್ಚಿಟ್ಟ ನಟಿ ಹರಿಪ್ರಿಯಾ

ಎಲ್ಲಾ ಕಡೆ ಲವ್ ಮ್ಯಾರೇಜ್ ನಾವು ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಡುತ್ತೀವಿ ಹಾಗೆ ಹೀಗೆ ಎಂದು ಹೇಳಿಕೊಂಡವರು ಹೇಗೆ ಪ್ರಪ್ರೋಸ್ ಮಾಡಿದರು ಎಂದು ಹೇಳಿರಲಿಲ್ಲ.'ಹರಿಪ್ರಿಯಾಗೆ ನಾನೇ ಪ್ರಪೋಸ್ ಮಾಡಿದ್ದು. ಮಂಗಳೂರಿನಲ್ಲಿದ್ದೆ ಒಂದು ದಿನ ಧೈರ್ಯ ಮಾಡಿ ರಾತ್ರಿ ಕರೆ ಮಾಡಿದೆ ಅಮ್ಮನ ಮಗಳು ಅಮ್ಮನ ಪಕ್ಕ ಮಲಗಿದರು ಪರ್ವಾಗಿಲ್ಲ ನೀವು ಕೇಳಿಸಿಕೊಳ್ಳಿ ನಾನು ಮಾತನಾಡುವೆ ಅಂತ ಹೇಳಿ. ನಾವು ಹೇಗೆ ಭೇಟಿ ಮಾಡಿದ್ದು ನಮ್ಮ ಸ್ನೇಹ ಹೇಗಿದೆ ಯಾಕೆ ಇಷ್ಟ ಆಯ್ತು ಯಾಕೆ ಪ್ರೀತಿ ಮಾಡಬೇಕು ನನ್ನ ಆಶಯ ಏನೆಂದು ಹೇಳಿ ಅವರಿಗೆ ಕಣ್ಣೀರು ಹಾಕಿಸಿ ಪ್ರಪೋಸ್ ಮಾಡಿದೆ' ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

'ಒಬ್ಬರ ಮೇಲೆ ಮತ್ತೊಬ್ಬರಿಗೆ ಇಷ್ಟ ಇತ್ತು ಗೌರವ ಹೆಚ್ಚಿತ್ತು ನಮ್ಮ ಕೆಲಸವನ್ನು ಗೌರವಿಸುತ್ತಿದ್ದೆವು ಇವೆಲ್ಲರ ಜೊತೆ ಪ್ರೀತಿನೂ ಇತ್ತು ಆದರೆ ಎಲ್ಲೂ ಹೇಳಿಕೊಂಡಿರಲಿಲ್ಲ. ಅವತ್ತು ರಾತ್ರಿ ನಾನು ತಾಯಿ ಜೊತೆ ಮಲಗಿದ್ದೆ ಏರ್‌ಪಾಡ್ ಹಾಕೊಂಡು ರಾತ್ರಿಯಿಂದ ಬೆಳಗ್ಗೆವರೆಗೂ ಕೇಳಿಸಿಕೊಳ್ಳುತ್ತಿದ್ದೆ. ಎಲ್ಲಾ ಮುಗಿದ ಮೇಲೆ ನಿದ್ರೆ ಮಾಡಿ ಆಮೇಲೆ ಮಾತನಾಬಹುದು ಎಂದು ಮಲಗಿದ್ದು' ಎಂದು ಹರಿಪ್ರಿಯಾ ಹೇಳಿದ್ದಾರೆ. ಅಲ್ಲದೆ ಸಿಂಹ 'ನಿನ್ನ ಕೈಯಲ್ಲಿ ಪ್ರೀತಿಯ ಪುಸ್ತಕ ಆಗುವ ಹಂಬಲ ನನಗೀಗಾ ಹೇಳಲು ಬಾರದ ಹೇಳಿಲು ತೀರದ...' ಹಾಡು ಹಾಡಿ ಪ್ರಪೋಸ್ ಮಾಡಿರುವುದಂತೆ. 

4 ವರ್ಷದ ಹಿಂದಿನ ಹರಕೆ ಈಗ ತೀರಿಸಿದ ನಟ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಂಹ ಪ್ರಿಯಾ!

ಸಿಂಪಲ್ ನಟ ಕಮ್ ಗಾಯಕ ವಸಿಷ್ಠ ಸಿಂಹ ಮತ್ತು ಸಿಂಪಲ್ ನಟಿ ಹರಿಪ್ರಿಯಾ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮೈಸೂರಿನಲ್ಲಿ ನಡೆದ ಮದುವೆಯಲ್ಲಿ ಆಪ್ತರ ಮಾತ್ರ ಭಾಗಿಯಾಗಿದ್ದು. ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯಲ್ಲಿ ಕನ್ನಡ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು. ಬೆಂಗಳೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ಇಬ್ಬರು ಕುಟುಂಬದವರು ಸೇರಿ ಅರಿಶಿಣ ಶಾಸ್ತ್ರ ಮತ್ತು ಮೆಹೇಂದಿ ಶಾಸ್ತ್ರ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮತ್ತೊಮ್ಮೆ ಲವರ್‌ಬಾಯ್‌ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ
ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಅಮೃತಾ ಅಯ್ಯಂಗಾರ್! ನಟಿ ವಯಸ್ಸೆಷ್ಟು?