ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ವಿಕ್ರಾಂತ್ ರೋಣ' ನಟಿ ನೀತಾ ಅಶೋಕ್​

Published : Jul 10, 2023, 07:18 PM ISTUpdated : Nov 21, 2023, 06:39 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ವಿಕ್ರಾಂತ್ ರೋಣ' ನಟಿ ನೀತಾ ಅಶೋಕ್​

ಸಾರಾಂಶ

ಹಿಂದಿ ಮತ್ತು ಕನ್ನಡದ ಧಾರಾವಾಹಿ ಸೇರಿದಂತೆ ವಿಕ್ರಾಂತ್ ರೋಣ ಚಿತ್ರದ ಮೂಲಕ ಮನೆಮಾತಾಗಿರುವ ನಟಿ ನೀತಾ ಅಶೋಕ್​ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.   

ಸುದೀಪ್​ ಅಭಿನಯದ ವಿಕ್ರಾಂತ್ ರೋಣ (Vikranth Rona) ಚಿತ್ರ ಹಾಗೂ ಕೆಲವು ಕಿರುತೆರೆಗಳಲ್ಲಿ ನಟಿಸಿ  ಖ್ಯಾತಿ ಪಡೆದಿರುವ ನಟಿ ಪನ್ನಾ ಅಲಿಯಾಸ್‌ ನೀತಾ ಅಶೋಕ್‌ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇವರು ವಿಕ್ರಾಂತ್​ ರೋಣ ಚಿತ್ರದಲ್ಲಿ  ನಿರೂಪ್‌ ಭಂಡಾರಿ ಜೋಡಿಯಾಗಿ ನಟಿಸಿದ್ದರು. ಇವರು ಇಂದು ತಮ್ಮ ಬಹುಕಾಲದ ಗೆಳೆಯ  ಸತೀಶ್ ಮೆಸ್ತಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  ನೀತಾ ಅಶೋಕ್‌ ಮತ್ತು ಸತೀಶ್​ ಅವರ ಎಂಗೇಜ್​ಮೆಂಟ್​ ಕಳೆದ   ಡಿಸೆಂಬರ್‌ನಲ್ಲಿ ನಡೆದಿತ್ತು. ಇದರ ಫೋಟೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಇದೀಗ  ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಲಗ್ನ ಪತ್ರಿಕೆಯ ಫೋಟೋ ವೈರಲ್​  ಆಗುತ್ತಿದೆ.   ನೀತಾ ಅವರು ಉಡುಪಿಯ ಕೋಟಾ ಮೂಲದವರಾಗಿದ್ದು, ಅವರ ಪತಿ ಸತೀಶ್​ ಮೇಸ್ತಾ  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾಗಿದ್ದಾರೆ. ವಿಕ್ರಾಂತ್​ ರೋಣದಲ್ಲಿ ನಟಿಸುವ ಮುನ್ನ  ಅಂದರೆ 2019ರಲ್ಲಿ  ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಯಶೋದಾ' ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್​. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.  ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.
 
ಉಡುಪಿಯಲ್ಲಿ ನೀತಾ ಅಶೋಕ್ (Neeta Ashok) ಹಾಗೂ ಸತೀಶ್ ಮೆಸ್ತಾ ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆ ಕೂಡ ಉಡುಪಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ನೀತಾ ಅವರು ಸರಳವಾಗಿ ಮದುವೆಯಾಗಿದ್ದಾರೆ. ಮದುವೆಗೆ ಕುಟುಂಬಸ್ಥರು ಮತ್ತು ಆತ್ಮೀಯರಷ್ಟೇ ಆಗಮಿಸಿದ್ದು, ಈ ಮದುವೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ  ಅಷ್ಟಾಗಿ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಲಗ್ನ ಪತ್ರಿಕೆ ವೈರಲ್​ ಆಗಿದೆ. ಅದರ ಪ್ರಕಾರ ಇಂದು ಮಧ್ಯಾಹ್ನ 12.25ಕ್ಕೆ ಮದುವೆಯಾಗಿದೆ. ಇವರ ಮದುವೆಯ ಫೋಟೋ ಹಾಗೂ ವಿಡಿಯೋ ನೋಡಲು ಫ್ಯಾನ್ಸ್​ ಕಾತರರಾಗಿದ್ದಾರೆ. 

18ನೇ ಮದುವೆಗೆ ರೆಡಿಯಾದ ಖ್ಯಾತ ನಟ ನಕುಲ್! ಏನಿದು ಸುದ್ದಿ?

ಅಂದಹಾಗೆ, ನೀತಾ ಮತ್ತು  ಸತೀಶ್‌ (Satish Mesta) ಅವರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.  ಇದನ್ನು ಅವರು ತಮ್ಮ ಎಂಗೇಜ್​ಮೆಂಟ್​ ಸಂದರ್ಭದಲ್ಲಿಯೇ ಬಹಿರಂಗಪಡಿಸಿದ್ದರು. ಕಳೆದ ವರ್ಷ ಡಿಸೆಂಬರ್​ನಲ್ಲಿ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡು ಫ್ಯಾನ್ಸ್​ಗೆ ಶಾಕ್​ ಕೊಟ್ಟಿದ್ದ ನೀತಾ ಅಶೋಕ್ ಅವರು, ನಂತರ ತಮ್ಮ ಪ್ರೀತಿಯ ಗುಟ್ಟನ್ನು ಬಿಚ್ಚಿಟ್ಟಿದ್ದರು. ಕಾಲೇಜಿನಿಂದಲೇ ತಾವಿಬ್ಬರೂ  ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದರು.  ಉಡುಪಿಯ ನೀತಾ ಅವರು, ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ ಕಾಲೇಜು ಕಲಿಯುತ್ತಿರುವಾಗಲೇ  ಧಾರಾವಾಹಿಯಲ್ಲಿ  ನಟಿಸುವ ಅವಕಾಶ ಒಲಿದು ಬಂದಿತ್ತು. ಕಲರ್ಸ್‌ ಕನ್ನಡದ 'ಯಶೋದೆ' ಧಾರಾವಾಹಿ ಮೂಲಕ ನಟನಾ ಲೋಕಕ್ಕೆ ಪದಾರ್ಪಣೆ ಮಾಡಿದ್ದರು.

ಇವರ ಅಭಿನಯದಿಂದಾಗಿ ಅವರಿಗೆ  ಅನೂಪ್‌ ಭಂಡಾರಿ (Anoop Bandhari) ನಿರ್ದೇಶನದ 'ವಿಕ್ರಾಂತ್‌ ರೋಣ' ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್‌ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್​ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ.  ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್​ ಆಗಿರುವ ನಟಿ ತಮ್ಮ ಮದುವೆಯ ಫೋಟೋಗಳನ್ನು ಇನ್ನೂ ಶೇರ್​ ಮಾಡಿಲ್ಲ. ಆದರೆ ಇವರ ವೆಡ್ಡಿಂಗ್​ ಕಾರ್ಡ್​ ವೈರಲ್​ ಆಗುತ್ತಿದ್ದು, ಅದರ ಆಧಾರದ ಮೇಲೆ ಮದುವೆಯ ಫೋಟೋಗಳನ್ನೂ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. 

ಮತ್ತೆ ಮತ್ತೆ ವಿಕ್ಕಿ ಕೌಶಲ್, ಕತ್ರೀನಾ ಡಿವೋರ್ಸ್ ಸುದ್ದಿ ಹರಡುತ್ತೆ? ವಿಕ್ಕಿ ದಾಂಪತ್ಯದ ಗುಟ್ಟಿದು!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!