ಮೊಗ್ಗಿನ ಮನಸ್ಸು ಚಿತ್ರವು ಇಬ್ಬರು ನಾಯಕಿಯರನ್ನೇ ಮುಖ್ಯವಾಗಿ ಕಥೆಯಲ್ಲಿ ಕೇಂದ್ರೀಕರಿಸಿರುವ ಚಿತ್ರವಾಗಿದೆ. ನಟಿಯರಾದ ರಾಧಿಕಾ ಪಂಡಿತ್ ಹಾಗು ಶುಭಾ ಪೂಂಜಾ ಇಬ್ಬರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟರೊಬ್ಬರ ಆಗಮನ ಡಾನ್ಸ್ ಮೂಲಕ ಆಗುತ್ತದೆ.
ಸ್ಯಾಂಡಲ್‌ವುಡ್ ಸಿಂಡ್ರೆಲಾ ಖ್ಯಾತಿಯ ನಟಿ ರಾಧಿಕಾ ಪಂಡಿತ್ ಅವರಿಗೆ ಇಂದು ಜನ್ಮದಿನ. ಇಂದು, ಮಾರ್ಚ್ 07ರಂದು (07 ಮಾರ್ಚ್ 1984) ನಟಿ ರಾಧಿಕಾ ಪಂಡಿತ್ ಜನ್ಮದಿನವಾಗಿದ್ದು, ನಟಿಗೆ ಅಭಿಮಾನಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳು ಸೋಷಿಯಲ್ ಮೀಡಿಯಾಗಳ ಮೂಲಕ ಶುಭಾಶಯ ಕೋರಿದ್ದಾರೆ. 'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರಿಗೆ ಪರಿಚಯವಾಗಿರುವ ನಟಿ ರಾಧಿಕಾ ಪಂಡಿತ್, ನಟಿಸಿರುವ ಮೊದಲ ಚಿತ್ರ '18th ಕ್ರಾಸ್'. ಆದರೆ, ಮೊಗ್ಗಿನ ಮನಸ್ಸು 2008ರಲ್ಲಿ ಬಿಡುಗಡೆ ಕಂಡರೆ, '18th ಕ್ರಾಸ್' ಚಿತ್ರವು 2012ರಲ್ಲಿ ರಿಲೀಸ್ ಆಗಿದೆ.
ಮೊಗ್ಗಿನ ಮನಸ್ಸು ಚಿತ್ರವು ಇಬ್ಬರು ನಾಯಕಿಯರನ್ನೇ ಮುಖ್ಯವಾಗಿ ಕಥೆಯಲ್ಲಿ ಕೇಂದ್ರೀಕರಿಸಿರುವ ಚಿತ್ರವಾಗಿದೆ. ನಟಿಯರಾದ ರಾಧಿಕಾ ಪಂಡಿತ್ ಹಾಗು ಶುಭಾ ಪೂಂಜಾ ಇಬ್ಬರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟರೊಬ್ಬರ ಆಗಮನ ಡಾನ್ಸ್ ಮೂಲಕ ಆಗುತ್ತದೆ. ಈ ಡಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದು ನಟ ಯಶ್. ಈಗ ರಾಧಿಕಾ ಪಂಡಿತ್ ಗಂಡನಾಗಿರುವ ನಟ ಯಶ್, ಅಂದು ರಾಧಿಕಾ ಪಂಡಿತ್ ಅವರಿಗೆ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಸಹನಟರಾಗಿ ಕಾಣಿಸಿಕೊಂಡಿದ್ದರು. ಮೊಗ್ಗಿನ ಮನಸ್ಸು ಸೂಪರ್ ಹಿಟ್ ದಾಖಲಿಸುವ ಮೂಲಕ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್‌ವುಡ್‌ನಲ್ಲಿ ಸಕ್ಸಸ್‌ಪುಲ್ ತಾರೆಯರಾಗಿ ಬೆಳೆದರು.
ನಾಗರಹಾವು ಚಿತ್ರಕ್ಕೆ ವಿಷ್ಣುವರ್ಧನ್ ಆಯ್ಕೆಯಾಗಿದ್ದು ಹೇಗೆ, ಯಾಕೆ? ಪುಟ್ಟಣ್ಣ ಕಣಗಾಲ್ ಅಂದು ಹೇಳಿದ್ದೇನು?
ಸದ್ಯ ನಟ ಯಶ್ ಹಾಗು ನಟಿ ರಾಧಿಕಾ ಪಂಡಿತ್ ದಂಪತಿಗಳಾಗಿ ಸುಖ-ಸಂಸಾರ ನಡೆಸುತ್ತಿದ್ದಾರೆ. ಇಬ್ಬರು ಮುದ್ದಾದ ಮಕ್ಕಳಿಗೆ ಅಪ್ಪ-ಅಮ್ಮ ಕೂಡ ಆಗಿದ್ದಾರೆ. ನಟಿ ರಾಧಿಕಾ ಪಂಡಿತ್ ನಟನೆಯಿಂದ ದೂರವೇ ಉಳಿದು ತಮ್ಮ ಮಕ್ಕಳ ಪಾಲನೆ-ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಟ ಯಶ್ 'ಎಜಿಎಫ್' ಸರಣಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವುದು ಈಗ ಇತಿಹಾಸ. ಸದ್ಯ ನಟ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಶೂಟಿಂಗ್ ಶುರುವಾಗಿದ್ದು ಇದು 'ಪ್ಯಾನ್ ವರ್ಲ್ಡ್' ಸಿನಿಮಾ ಆಗಲಿದೆ. ಈ ಟಾಕ್ಸಿಕ್ ಚಿತ್ರವು 2025ರಲ್ಲಿ ಬಿಡುಗಡೆ ಕಾಣಲಿದೆ ಎನ್ನಲಾಗಿದೆ.
ಮಿಸ್ ವರ್ಲ್ಡ್ ಆಗಿದ್ದರೂ ಸಿನಿಮಾದಲ್ಲಿ ಮಿಂಚಲಾಗದ ನಟಿ ಈಗ ಸಾಮಾಜಿಕ ಕಾರ್ಯಕರ್ತೆ!
ಒಟ್ಟಿನಲ್ಲಿ, ಹಿಂದೊಮ್ಮೆ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದ ನಟಿ ರಾಧಿಕಾ ಪಂಡಿತ್, ಸದ್ಯ ಗೃಹಿಣಿ ಪಟ್ಟವನ್ನು, ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸ್ಟಾರ್ ನಟಿಯಾಗಿ ಮೆರೆದಿದ್ದ ರಾಧಿಕಾ ಪಂಡಿತ್ ಅವರನ್ನು ಇಂದು, ಅವರ ಜನ್ಮದಿನದ ಪ್ರಯುಕ್ತ ಸ್ಯಾಂಡಲ್‌ವುಡ್ ಹಾಗು ಸಿನಿಪ್ರೇಕ್ಷಕರು ಸ್ಮರಿಸಿಕೊಳ್ಳುತ್ತಿದ್ದಾರೆ, ಶುಭಾಶಯ ಕೋರುತ್ತಿದ್ದಾರೆ. ನಟಿ 'ರಾಧಿಕಾ ಪಂಡಿತ್ ಹಾಗು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ.. ಹುಟ್ಟುಹಬ್ಬದ ಶುಭಾಶಯಗಳು ರಾಧಿಕಾ ಪಂಡಿತ್..' ಎಂಬ ಶುಭ ಹಾರೈಕೆಗಳ ಮಹಾಪೂರ ಸೋಷಿಯಲ್ ಮೀಡಿಯಾ ತುಂಬೆಲ್ಲ ಹರಿದಾಡುತ್ತಿದೆ.