ಕೊನೆಯ ವಿಡಿಯೋ ಮಾಡಿ ಕರ್ನಾಟಕದಲ್ಲಿ ಸಾಯಲು ಹೊರಟಿರುವೆ: ನಟಿ ವಿಜಯಲಕ್ಷ್ಮಿ ಶಾಕಿಂಗ್‌ ಹೇಳಿಕೆ

By Suvarna News  |  First Published Mar 6, 2024, 4:57 PM IST

ನಟಿ ವಿಜಯಲಕ್ಷ್ಮಿ ಅವರು ಸಾಯಲು ಹೊರಟಿರುವುದಾಗಿ ಹೇಳಿ ವಿಡಿಯೋ ಮಾಡಿದ್ದು, ಎಲ್ಲರಲ್ಲೂ ಆತಂಕ ಮೂಡಿದೆ. ಅವರು ಹೀಗೆ ಹೇಳಲು ಕಾರಣವೇನು? 
 


 ಇದು ನನ್ನ ಕೊನೆಯ ವಿಡಿಯೋ. ಇನ್ನು ಎರಡು ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧಳಾಗಿದ್ದೇನೆ. ನನಗೆ ರೀತಿ ವಿಡಿಯೋ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನನಗೆ ಎಷ್ಟು ನೋವಾಗಿರಬಹುದು ಅಂತ ಯೋಚಿಸಿ. ಆಕೆ ಬಿದ್ದು ಸಾಯಲಿ ಎಂಬುದು ಜನರ ಪ್ರತಿಕ್ರಿಯೆ ಆಗಿದ್ದರೆ  ಇಂದು ನಾನು ಎಲ್ಲವನ್ನೂ ಹೇಳುತ್ತೇನೆ ಕೇಳಿ...

ಹೀಗೆ ಹೇಳಿದವರು, ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವಿಜಯಲಕ್ಷ್ಮಿ. ಅವರು ರಾಜಕಾರಣಿ, ನಟ, ನಿರ್ದೇಶಕ ಸೀಮನ್​ ವಿರುದ್ಧ ಏಳು ಬಾರಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪವನ್ನು ಹೊರಿಸಿದ್ದರು. ಸೀಮನ್​ ಅವರು,  ನಾಮ್​ ತಮಿಳರ್​ ಕಟ್ಚಿ (ಎನ್​ಟಿಕೆ) ಪಕ್ಷದ ನಾಯಕ ಕೂಡ. ಇವರ ವಿರುದ್ಧ ಇದಾಗಲೇ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಎದುರೂ ನೋವು ತೋಡಿಕೊಂಡಿದ್ದರು. ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದರು.  ಅವರ ಜೊತೆ  ತಮಗೆ ಮದುವೆಯಾಗಿದ್ದು, ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪವನ್ನು ಮಾಡಿದ್ದರು.

Tap to resize

Latest Videos

ದುಡ್ಡಿಗಾಗಿ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್​ ಸ್ಟಾರ್​ಗಳಿಗೆ ಕಂಗನಾ ರಣಾವತ್​ ಟಾಂಗ್​!

 ಈ ರೀತಿಯಾಗಿ, ಇತ್ತೀಚಿನ ವರ್ಷಗಳಲ್ಲಿ ವಿವಾದಗಳ ಮೂಲಕವೇ ಸುದ್ದಿ ಆಗಿರುವ ನಟಿ, ಈಗ ಈ ರೀತಿಯ ವಿಡಿಯೋ ಮಾಡಿ ಎಲ್ಲರಲ್ಲಿಯೂ ಆತಂಕ ಮೂಡಿಸಿದ್ದಾರೆ.   ಮದುವೆಯಾಗಿ ತಮ್ಮನ್ನು ಮೋಸ ಮಾಡಿರುವುದಾಗಿ ಸೀಮಾನ್‌ ವಿರುದ್ಧ ನಟಿ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಸಹೋದರಿಗೆ ಉಂಟಾಗಿದ್ದ ಸಮಸ್ಯೆಯಿಂದಾಗಿ ನಾನು ಮೊದಲ ಬಾರಿಗೆ ಸೀಮಾನ್​ ಅವರನ್ನು ಭೇಟಿ ಮಾಡಿದೆ. ಆಗ ಸೀಮಾನ್‌ಗೆ ಮದುವೆ ಆಗಿರಲಿಲ್ಲ. ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದ, ನನ್ನ ಜೊತೆ ಆತ ಮೂರು ವರ್ಷ ಇದ್ದ. ಆಗ ಗುಟ್ಟಾಗಿ ಮದ್ವೆಯಾಗಿದ್ದಾನೆ.  ನನ್ನ  ಬದುಕನ್ನೇ ಹಾಳು ಮಾಡಿಬಿಟ್ಟ. ಇದೀಗ ನನ್ನನ್ನು ಒಂಟಿ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ಸಾಯುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಅಂದರೆ ಇದೇ ಫೆ.29ರಂದು  ತಮ್ಮ ಮನೆಯಿಂದಲೇ ನಟಿ ಒಂದು ವಿಡಿಯೋ ಮಾಡಿ ಅದರಲ್ಲಿ ಮನವಿ ಮಾಡಿದ್ದರು. ಅದರಲ್ಲಿ ಅವರು ತಮಗೆ  ಸೀಮಾನ್​  ಜೊತೆ ಮಾತನಾಡಬೇಕು ಎಂದು ಹೇಳಿದ್ದರು. ಆದರೆ ಅವರಿಂದ  ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ, ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.  ಇದು ನನ್ನ ಕೊನೆಯ ವಿಡಿಯೋ. ಇನ್ನು ಎರಡು ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧಳಾಗಿದ್ದೇನೆ ಎಂದಿದ್ದಾರೆ. 

ಈ ಹಿಂದೆ, ನಟಿ  ಲೈಂಗಿಕ ದೌರ್ಜನ್ಯದ ಆರೋಪ ಮಾಡಿ  ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೀಮನ್​ ಅವರಿಗೆ ಹಾಜರಾಗುವಂತೆ  ಪೊಲೀಸರು ನೋಟಿಸ್​ ನೀಡಿದ್ದರು.  ನಾಗಮಂಗಲ, ಸ್ವಸ್ತಿಕ್, ಕನಕಾಂಬರಿ ಹಾಗೂ ಸೂರ್ಯವಂಶ ಸೇರಿದಂತೆ ಹಲವು ಹಿಟ್​ ಚಿತ್ರಗಳನ್ನು ನೀಡಿರುವ ಬಹುಭಾಷಾ ತಾರೆ ವಿಜಯಲಕ್ಷ್ಮಿ ಅವರ ಆರೋಪವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಇದೇ ಆರೋಪವನ್ನು ವಿಜಯಲಕ್ಷ್ಮಿ ಕೂಡ ಇತ್ತೀಚೆಗೆ ತಿರುವಳ್ಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಕೂ ಮಾಡಿದ್ದರು. ಸೀಮನ್‌ ಅವರು, ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿರುವುದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ 7 ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ವಿಜಯಲಕ್ಷ್ಮೀ, ಸೀಮನ್ ವಿರುದ್ಧ​ ಗಂಭೀರ ಆರೋಪ ಮಾಡಿದ್ದರು. 

ಮದ್ವೆಗೆ ಯಾಕೆ ಕರೆದಿಲ್ಲ? ಹಾಟ್‌-ಸೆಕ್ಸಿಯಾಗಿ ಬರ್ತಿದ್ದೆ, ಪಾತ್ರೆ ತೊಳೀತಿದ್ದೆ, ರೂಮ್‌ ಕ್ಲೀನ್ ಮಾಡ್ತಿದ್ದೆ, ಮತ್ತು...

| உண்மையிலேயே இதுதான் என்னோட கடைசி வீடியோ!

நடிகை விஜயலட்சுமி வெளியிட்ட தற்கொலை மிரட்டல் வீடியோ!

“என் மரணம் சீமான் யாருன்னு காமிக்கும்... எல்லாருக்கும் நன்றி!” | | | | | | pic.twitter.com/oOLgbuImzi

— Reflect News Tamil (@reflectnewstn)
click me!