ಈ ಐದು ಕಾರಣಕ್ಕೆ ನೋಡಬೇಕು ಗೋಲ್ಡನ್ ಸ್ಟಾರ್ ಗಣೇಶ್ 'ಕೃಷ್ಣಂ ಪ್ರಣಯ ಸಖಿ' ಚಿತ್ರ!

By Govindaraj S  |  First Published Aug 15, 2024, 4:23 PM IST

ಗೋಲ್ಡನ್ ಸ್ಟಾರ್ ಗಣೇಶ್​ ಸಿನಿಮಾಗಳಿಗೆ ಕಾಯೋ ದೊಡ್ಡ ಫ್ಯಾನ್ ಬೇಸ್ ಇದೆ. ಅವರ ಕಣ್ಣುಗಳೆಲ್ಲಾ ಕೃಷ್ಣಂ ಪ್ರಣಯ ಸಖಿ ಮೇಲೆ ಬಿದ್ದಿವೆ. ಈ ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿಗೆ. 


ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಒಂದ್​ ಕಡೆ. ಕನ್ನಡ ಸಿನಿ ಪ್ರೇಕ್ಷಕರಿಗೆ ಬಹು ನಿರೀಕ್ಷಿತ ಎರಡು ಸಿನಿಮಾಗಳನ್ನ ನೋಡಿ ರಜೆಯಲ್ಲಿ ಮಜಾ ಮಾಡೋ ಚಾನ್ಸ್ ಮತ್ತೊಂದ್ ಕಡೆ​​. ಯೆಸ್, ನಾಳೆ ಗೋಲ್ಡನ್ ಸ್ಟಾರ್ ಗಣೇಶ್​ ನಟನೆಯ ಕೃಷ್ಣಂ ಪ್ರಣಯ ಸಖಿ ಹಾಗು ಸ್ಟಾರ್​ ಡೈರೆಕ್ಟರ್​ ಇಂದ್ರಜಿತ್ ಲಂಕೇಶ್​ ನಿರ್ದೇಶನದ ಗೌರಿ ಸಿನಿಮಾ ತೆರೆ ಮೇಲೆ ತೆರೆದುಕೊಳ್ಳುತ್ತಿವೆ. ಈ ಸಿನಿಮಾಗಳ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ ಇದೆ ನೋಡ್ಬಿಡೋಣ ಬನ್ನಿ. ಶ್ರಾವಣ ಮಾಸ ಸ್ಯಾಂಡಲ್​ವುಡ್​​ಗೆ ವರ ಪ್ರಸಾದ ಆಗುತ್ತಾ.? ಕಂಡಿತ ಹೌದು ಎನ್ನುತ್ತಿದೆ ಕನ್ನಡ ಸಿನಿ ಭಕ್ತಗಣ. 

ಯಾಕಂದ್ರೆ ಕನ್ನಡದಲ್ಲಿ ಈಗ ದೊಡ್ಡ ಸ್ಟಾರ್​ ನಟರ ಸಿನಿಮಾಗಳು ತೆರೆ ಕಾಣುತ್ತಿವೆ. ಅದು ಕೂಡ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಹೋಗೋ ಮಟ್ಟಕ್ಕೆ ಸಿನಿಮಾ ಮೇಲಿನ ಕ್ರೇಜ್​ ಕ್ರಿಯೆಟ್ ಮಾಡಿವೆ. ಅಂತಹ ಸಿನಿಮಾಗಳಲ್ಲೊಂದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ. ಗಣೇಶ್​ ಫ್ಯಾನ್ಸ್​ಗೆ ನಾಳೆಯಿಂದ ಸಿನಿ ಫೆಸ್ಟಿವೆಲ್​. ನಾಳೆ ರಾಜ್ಯಾದ್ಯಂತ ಕೃಷ್ಣಂ ಪ್ರಣಯ ಸಖಿ ಸಿನಿಮಾ ತೆರೆ ಕಾಣುತ್ತಿದೆ. ಗಣೇಶ್​ ಸಿನಿಮಾಗಳಿಗೆ ಕಾಯೋ ದೊಡ್ಡ ಫ್ಯಾನ್ ಬೇಸ್ ಇದೆ. ಅವರ ಕಣ್ಣುಗಳೆಲ್ಲಾ ಕೃಷ್ಣಂ ಪ್ರಣಯ ಸಖಿ ಮೇಲೆ ಬಿದ್ದಿವೆ. ಈ ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿಗೆ. 

Tap to resize

Latest Videos

ಒಂದು ಗಣೇಶ್​ ಆಫ್ಟರ್​​​ ಎ ಲಾಂಗ್​ ಟೈಂ ನಂತರ ಅಪ್ಪಟ ಲವರ್ ಬಾಯ್ ಆಗಿ ಬಂದಿರೋದು. ಮತ್ತೊಂದು ಈ ಸಿನಿಮಾದಲ್ಲಿ ಗೇಣೇಶ್​ಗೆ 8 ಜನ ಸಖಿರ ಜೊತೆ ನಟಿಸಿರೋದು. ಹಾಗೆ ಆರು ಹಾಡುಗಳು ಹಿಟ್ ಆಗಿರೋದು. ದಂಡುಪಾಳ್ಯದಂತ ಕ್ರೌರ್ಯದ ಸಿನಿಮಾ ಮಾಡಿದ್ದ ಶ್ರೀನಿವಾಸ್​​​​ ರಾಜು ಲವ್ ಸ್ಟೋರಿ ಕೊಟ್ಟಿದ್ದಾರೆ. ಇನ್ನು ಟ್ರೈಲರ್​​ಅನ್ನೇ ರಿಲೀಸ್ ಮಾಡದೇ  ಹಾಡುಗಳಿಂದಲೇ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಆಹ್ವಾನಿಸಿದೆ ಕೃಷ್ಣಂ ಪ್ರಣಯ ಸಖಿ. ನಾಳೆ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಬರುತ್ತಿದೆ. ಅದೇ ಗೌರಿ. ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್​ ನಿರ್ದೇಶನದ ಗೌರಿ ಸಿನಿಮಾದಲ್ಲಿ ಇಂಧ್ರಜಿತ್ ಸುಪುತ್ರ ಮಸರ್ಜಿತ್ ಲಂಕೇಶ್​ ಹೀರೋ ಆಗಿ ಬೆಳ್ಳಿ ತೆರೆಗೆ ಡೆಬ್ಯೂ ಆಗ್ತಿದ್ದಾರೆ. 

ದರ್ಶನ್​ಗೆ ಮತ್ತೆ ಜೈಲುವಾಸ ವಿಸ್ತರಣೆ: ಕಿಲ್ಲಿಂಗ್ ಸ್ಟಾರ್​​ ಬಾಚಾವ್ ಆಗಲಿ ಅಂತ ದೇವರನ್ನ ಬೇಡಿದ ಕಲಾವಿದರು!

ಇವರ ಜೊತೆ ನಾಯಕಿಯಾಗಿ ಹಾಟ್ ಬ್ಯೂಟಿ ಸಾನ್ಯ ಅಯ್ಯರ್ ಕೂಡ ಡೆಬ್ಯು ಮಾಡ್ತಿದ್ದಾರೆ. ಗೌರಿ ಸಿನಿಮಾ ಪತ್ರಕರ್ತೆ ಗೌರಿ ಅವರ ಇನ್ಸ್​ಪರೇಷನ್​​ನಿಂದ ಸಿದ್ಧವಾಗಿರೋ ಕತೆಯ ಚಿತ್ರ. ಇಂಧ್ರಜಿತ್ ತನ್ನ ಮಗನಿಗಾಗಿ ಕಟ್ಟಿರೋ ಸ್ಟೋರಿ ಹೇಗಿರುತ್ತೆ ಅನ್ನೊ ನಿರೀಕ್ಷೆ ಇದೆ. ಗೌರಿಯ ಟೈಂ ಬರುತ್ತೆ ಸೇರಿದಂತೆ ಹಾಡುಗಳು ಹಿಟ್ ಆಗಿವೆ. ನಾಯಕ ನಟ ಸಮರ್ಜಿತ್ ಆಕ್ಷನ್ ಧಮಾಕ ಡಾನ್ಸ್​ ಕಿಕ್​ ಮಸ್ತ್​ ಆಗಿದೆ. ಹೀಗಾಗಿ ನಾಳೆ ರಾಜ್ಯಾದ್ಯಂತ 200ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗೋ ಗೌರಿ ಸಮರ್ಜಿತ್ ಖರಿಯರ್​​ಗೆ ಬ್ರೇಕ್ ಕೊಡುತ್ತಾ ಕಾದು ನೋಡ್ಬೇಕು.

click me!