ಬಾತ್‌ರೂಮ್ ಕ್ಲೀನ್ ಮಾಡ್ತಾರಂತೆ ಗೋಲ್ಡನ್ ಸ್ಟಾರ್; ಮೂರ್ಛೆ ಹೋಗ್ತಾರೋ ಏನೋ ಗಣೇಶ್ ಫ್ಯಾನ್ಸ್!

By Shriram Bhat  |  First Published Jul 3, 2024, 11:12 AM IST

ಮುಂಗಾರು ಮಳೆ ಮೂಲಕ ಸ್ಟಾರ್ ನಟರಾಗಿ ಮೆರೆದ ಗಣೇಶ್ ಗೋಲ್ಡನ್ ಸ್ಟಾರ್ ಪಟ್ಟವನ್ನೂ ಪಡೆದವರು. ಆ ಬಳಿಕ ಕೂಡ ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿಯೇ ಹೆಚ್ಚು ಸಕ್ಸಸ್ ಕಂಡಿರುವ ನಟ ಗಣೇಶ್..


ಕನ್ನಡದ ನಟ, ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್ (Golden star Ganesh) ಅವರು ಒಮ್ಮೆ ಮಾತನಾಡುತ್ತ ಸೀಕ್ರೆಟ್ ಒಂದನ್ನು ಹಂಚಿಕೊಂಡಿದ್ದಾರೆ. 'ನಮ್ಮ ಮನೆಯಲ್ಲಿ ನನ್ನ ಬಾತ್‌ರೂಂ ಅನ್ನು ನಾನೇ ಕ್ಲೀನ್ ಮಾಡ್ತೀನಿ. ನನಗೆ ಅದು ನನ್ನ ಬ್ಯಾಚುಲರ್ ಲೈಫ್‌ ಟೈಮ್‌ನಿಂದಲೂ ಅಭ್ಯಾಸವಾಗಿ ಹೋಗಿದೆ. ನನಗೆ ಬಾತ್ ರೂಂ ಮತ್ತು ಮನೆ ಎಲ್ಲವೂ ಕ್ಲೀನ್ ಆಗಿರ್ಬೆಕು. ಹೀಗಾಗಿ ನಮ್ಮನೆಯಲ್ಲಿ ನನ್ನ ಬಾತ್‌ರೂಂ ನಾನೇ ಶುಚಿ ಗೊಳಿಸಿಕೊಂಡರಷ್ಟೇ ನನಗೆ ಸಮಾಧಾನ. 

ಅಷ್ಟೇ ಅಲ್ಲ, ನನ್ನ ಬಟ್ಟೆಯನ್ನು ನಾನೇ ಜೋಡಿಸಿ ಇಟ್ಟುಕೊಳ್ಳುತ್ತೇನೆ. ಬೇರೆಯವರು ನನ್ನ ನಿರ್ಧಿಷ್ಟ ಪ್ಯಾಟರ್ನ್‌ ಅಲ್ಲಿ ಬಟ್ಟೆ ಪೋಲ್ಡ್ ಮಾಡಿ ಇಡಲು ಸಾಧ್ಯವೇ ಇಲ್ಲ. ನನಗೆ ನನ್ನ ಬಟ್ಟೆಗಳು ಹಾಗೇ ಇರ್ಬೇಕು. ಆ ಕಾರಣಕ್ಕೆ ನಾನು ನನ್ನ ಕೆಲವು ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆ. ನನ್ನ ಪತ್ನಿ ಅಥವಾ ಕೆಲಸದವರಿಗೆ ಹೇಳುವುದಿಲ್ಲ. ನನ್ನ ಬಟ್ಟೆಗಳನ್ನು ನಾನೇ ಅಯರ್ನ್ ಮಾಡಿಕೊಳ್ಳುತ್ತೇನೆ. ನಾನೇ ಕಬೋರ್ಡ್ ಕ್ಲೀನ್ ಮಾಡುತ್ತೇನೆ. 

Tap to resize

Latest Videos

undefined

ಗರ್ಭಿಣಿ ಹೆಂಡ್ತಿ, ತಂದೆ-ತಾಯಿ ಬಗ್ಗೆ ಯೋಚಿಸ್ಬೇಕಿತ್ತು, ಅಶ್ಲೀಲ ಮೆಸೇಜ್ ಕಳ್ಸಿದ್ದು ದೊಡ್ಡ ತಪ್ಪು,: ಅಗ್ನಿ ಶ್ರೀಧರ್

ನಮ್ಮ ಮನೆ ಕ್ಲೀನ್ ಮಾಡಲು ಕೆಲಸದವರು ಬರುತ್ತಾರೆ. ಆದರೆ, ನನ್ನ ಕಬೋರ್ಡ್, ಬಾತ್‌ರೂಂ ಗಳನ್ನು ನಾನೇ ಕ್ಲೀನ್ ಮಾಡಿಕೊಳ್ಳುವುದು ನನ್ನ ಅಭ್ಯಾಸ. ಅದನ್ನು ನಾನು ತುಂಬಾ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ, ಅದು ಹಾಗೇ ಮುಂದುವರೆಯುತ್ತದೆ ಕೂಡ. ಏಕೆಂದರೆ, ನನಗೆ ನಾನು ಎಲ್ಲಾ ಕೆಲಸಗಳನ್ನು ಚಿಕ್ಕಂದಿನಿಂದಲೂ ಮಾಡಿಕೊಂಡು ಬಂದಿದ್ದೇನೆ, ಯಾವುದೇ ಕೆಲಸವೂ ನನಗೆ ಹೊಸತಲ್ಲ, ಮತ್ತು ಮಾಡಲು ನನಗೆ ಯಾವುದೇ ಮುಜುಗರವೂ ಇಲ್ಲ' ಎಂದಿದ್ದಾರೆ ಮುಂಗಾರು ಮಳೆ (Mungaru Male) ಖ್ಯಾತಿಯ ನಟ ಗಣೇಶ್. 

ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..?

ಅಂದಹಾಗೆ, ಮುಂಗಾರು ಮಳೆ ಮೂಲಕ ಸ್ಟಾರ್ ನಟರಾಗಿ ಮೆರೆದ ಗಣೇಶ್ ಗೋಲ್ಡನ್ ಸ್ಟಾರ್ ಪಟ್ಟವನ್ನೂ ಪಡೆದವರು. ಆ ಬಳಿಕ ಕೂಡ ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿಯೇ ಹೆಚ್ಚು ಸಕ್ಸಸ್ ಕಂಡಿರುವ ನಟ ಗಣೇಶ್, ಇತ್ತೀಚೆಗೆ 'ಗಾಳಿಪಟ 2' ಸಿನಿಮಾದಲ್ಲಿ ಮತ್ತೊಮ್ಮೆ ಭಾರೀ ಯಶಸ್ಸು ದಾಖಲಿದ್ದಾರೆ. ಯೋಗರಾಜ್ ಭಟ್ ಹಾಗೂ ನಟ ಗಣೇಶ್ ಕಾಂಬಿನೇಷನ್ ಸಿನಿಮಾಗಳೇ ಇಬ್ಬರಿಗೂ ಸಕ್ಸಸ್ ತರುತ್ತವೆ ಎಂಬುದು ಮತ್ತೊಮ್ಮೆ ಸಾಕ್ಷಿ ಸಮೇತ ಪ್ರೂವ್ ಆಗಿದೆ ಎನ್ನಬಹುದು. ಒಟ್ಟಿನಲ್ಲಿ, ನಟ ಗಣೇಶ್ ಅವರು ತಮ್ಮ ಕೆರಿಯರ್‌ನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. 

ಅದನ್ನ ಮಾಡ್ಬೇಡ ಮನೆಗೋಗು ಅಂದ್ರು ವಿಷ್ಣು ಸರ್; ಆದ್ರೆ ವಾಸು ಸರ್ ಅದೇನೋ ಮಾಡ್ಬಿಟ್ರು: ನಟ ರಾಜೇಶ್

click me!